(ವೈ) ಮನೋವಿಶ್ಲೇಷಣೆಯಲ್ಲಿ ಉಳಿವು ಹಾಗೂ ಜೀವೋತ್ಪತ್ತಿಯ ಸಹಜ ಪ್ರವೃತ್ತಿಗಳಿಗೆ ಸಂಬಂಧಿಸಿದ ಸೂತ್ರ
eros
ಇರಿ
(ವೈ) ಈಟಿಶಸ್ತ್ರದಿಂದ ಚುಚ್ಚಿ, ಕೊಯ್ದು ಅಥವಾ ಕತ್ತರಿಸಿ ತೆರೆ. ಕುರು ಇತ್ಯಾದಿಗಳನ್ನು ಸೀಳು
lance
ಇರಿಡಿಯಮ್
(ರ) ಭಿದುರವಾದ, ಬೂದು ಬಣ್ಣದ ಪ್ಲಾಟಿನಮ್ ಕುಟುಂಬಕ್ಕೆ ಸೇರಿದ ಲೋಹಧಾತು. ಪ್ರತೀಕ ir. ಪಸಂ ೭೭, ೨೦0 ಸೆನಲ್ಲಿ ಸಾಸಾಂ ೨೨.೪, ಪತೂ ೧೯೨.೨. ದ್ರಬಿಂ ೨೪೧೦0 ಸೆ ಪ್ಲಾಟಿನಮ್ ಅಥವಾ ಆಸ್ಮಿಯಮ್‌ನೊಂದಿಗೆ ಕೂಡಿ ಗಡಸಾದ ತುಕ್ಕು-ನಿರೋಧಕ ಮಿಶ್ರಲೋಹ ರೂಪಿಸುತ್ತದೆ. ಅದನ್ನು ಲೇಖನಿಯ ಮುಳ್ಳಿನ ತುದಿಗಳಲ್ಲೂ ಗಡಿಯಾರಗಳಲ್ಲೂ ದಿಕ್ಸೂಚಿಗಳಲ್ಲೂ ಬಳಸಲಾಗುತ್ತದೆ
iridium
ಇರುವೆ
(ಪ್ರಾ) ಕೀಟ ವರ್ಗ, ಹೈಮನಾಪ್ಟರ ಉಪವರ್ಗ, ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ, ಅತಿ ಪ್ರಾಚೀನ ಸಂಘ ಜೀವಿ. ಸಿನೋಜೋಯಿಕ್ ಯುಗದ (೬೫ ಮಿಲಿಯನ್ ವರ್ಷ ಹಿಂದಿನ) ಪಳೆಯುಳಿಕೆ ದೊರೆತಿದೆ. ಸುಮಾರು ೬೦೦೦ ಪ್ರಭೇದಗಳಿವೆ. ಬೆಚ್ಚಗಿನ ಗೂಡು ವಾಸಸ್ಥಾನ
ant
ಇರುವೆ ಸಿಂಹ
(ಪ್ರಾ) ನ್ಯೂರಾಪ್ಟರ ಗಣಕ್ಕೆ ಸೇರಿದ ಯಾವುದೇ ಕೀಟ; ಶುಷ್ಕ ನೆಲವಾಸಿ. ಇರುವೆ ಸಿಂಗ, ಪಿಪೀಲಿಕಾ ಸಿಂಹ
antlion
ಇರುಳುಕುರುಡು
(ವೈ) ವೈಟಮಿನ್ ಎ ಕೊರತೆ ಯಿಂದಾಗಿ ಅಥವಾ ಅಕ್ಷಿಪಟ ದೋಷದಿಂದಾಗಿ ಉಂಟಾಗುವ ದೃಷ್ಟಿಮಾಂದ್ಯ (ಕತ್ತಲೆಯಲ್ಲಿ ವಸ್ತುಗಳನ್ನು ನೋಡಲು ಅತಿ ಕಷ್ಟವಾಗುವುದು). ನೋಡಿ : ನಿಕ್ಟಲೋಪಿಯ
night blindness
ಇರೆಪ್ಸಿನ್
(ರ) ಕರುಳಿನ ರಸಗಳಲ್ಲಿ ಸಂಗ್ರಹವಾಗುವ ಪೆಪ್ಟಿಡಾಸ್ ಕಿಣ್ವಗಳ ಹಳೆಯ ಹೆಸರು
erepsin
ಇಲಾಸ್ಟಿನ್
(ಪ್ರಾ) ಕಶೇರುಕಗಳ ಸಂಯೋಜಕ ಊತಕ ಗಳಲ್ಲಿರುವ ತಂತು ರಚನೆಯ ಪ್ರೋಟೀನ್
elastin
ಇಲಾಸ್ಟೋಮರ್
(ರ) ರಬ್ಬರಿನಂತೆ ಸ್ಥಿತಿಸ್ಥಾಪಕ ಗುಣ ಗಳಿರುವ ವಸ್ತು. ಸಾಧಾರಣವಾಗಿ ಸಂಶ್ಲೇಷಿತ. ಕೊಠಡಿ ಉಷ್ಣತೆ ಯಲ್ಲಿ ಎರಡರಷ್ಟು ಉದ್ದಕ್ಕೆ ಎಳೆಯಬಹುದು. ಬಿಟ್ಟಾಗ ಸರಿ ಸುಮಾರು ಮೂಲ ಉದ್ದಕ್ಕೇ ಮರಳುತ್ತದೆ. ಐಸೊಪ್ರಿನ್, ಬ್ಯೂಟ ಡಯಿನ್ ಮೊದಲಾದವುಗಳಿಂದ ತಯಾರಿಸಿದ ಕೃತಕ ಪ್ಲಾಸ್ಟಿಕ್
elastomer
ಇಲಿ
(ಪ್ರಾ) ಮುರಿಡೀ, ಹೆಟೆರೊಮಿಯಿಡೀ, ಕ್ರಿಸೆಟಿಡೀ ಮತ್ತು ಜಪೊಡಿಡೀ ಕುಟುಂಬ ಗಳಿಗೆ ಸೇರಿದ ನಾನಾ ದಂಶಕ ಪ್ರಾಣಿ ಪ್ರಭೇದಗಳಲ್ಲೊಂದು. ಚೂಪು ಮೂತಿ, ಚಿಕ್ಕ ಕಿವಿ ಗಳು, ಉದ್ದವೂ ನೀಳವೂ ಆದ ಅಲ್ಪಸ್ವಲ್ಪ ಕೂದಲಿನ ಬಾಲವುಳ್ಳ ಲಂಬಿತ ಕಾಯ ಇದರ ವಿಶಿಷ್ಟ ಲಕ್ಷಣ ಗಳು. ನೆಲಜೀವಿ. ಇಲಿ ಇರದ ಊರಿಲ್ಲ. ಮೂಷಿಕ. ನೋಡಿ: ಹೆಗ್ಗಣ