logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಇನ್ನರ್‌ವೇಷನ್
(ಪ್ರಾ) ಅಂಗದಿಂದ ಮತ್ತು ಅಂಗಕ್ಕೆ ನರ ತಂತುಗಳ ಸರಬರಾಜು
innervation

ಇನಾಕ್ಯುಲೇಷನ್
(ವೈ) ಪ್ರಯೋಗ ಪಶುವಿನ ದೇಹ ದೊಳಕ್ಕೆ ವಿವಿಧ ಮಾರ್ಗಗಳಿಂದ ಸೋಂಕು ಪದಾರ್ಥವನ್ನು ಅಥವಾ ರೋಗಕಾರಕ ಬ್ಯಾಕ್ಟೀರಿಯಗಳನ್ನು ಸೇರಿಸುವುದು. ವ್ಯಕ್ತಿಗೆ ಸೋಂಕಿನ ಎದುರು ರಕ್ಷಣೆ ಒದಗಿಸುವ ಸಲುವಾಗಿ ತತ್ಸಂಬಂಧವಾದ ಲಸಿಕೆಯನ್ನು ಚುಚ್ಚುಮದ್ದಾಗಿ ನೀಡುವುದು. (ತಂ) ಕುಲುಮೆ/ಪಾತ್ರೆ ಗಳಲ್ಲಿ ಇರುವ ದ್ರವ ಲೋಹಕ್ಕೆ ಅಲ್ಪ ಮೊತ್ತಗಳಲ್ಲಿ ಇತರ ಲೋಹ, ಡೀಆಕ್ಸಿಡೆಂಟ್ ಮುಂತಾದವನ್ನು ಬೆರೆಸಿ ಅದರ ಸ್ಫಟಿಕೀಕರಣ ಸ್ವಭಾವದ ಮಾರ್ಪಡಿಕೆ ಅಥವಾ ಆ ಲೋಹಕ್ಕೆ ಮಿಶ್ರಲೋಹ ಗುಣಗಳನ್ನು ಒದಗಿಸಲು ಮಾಡುವ ಕಣ ಸುಧಾರಣೆ. (ರ) ಸ್ಫಟಿಕೀಕರಣವನ್ನು ಪ್ರವರ್ತಿಸಲು ಅತಿ ಪರ್ಯಾಪ್ತ ದ್ರಾವಣದೊಳಗೆ ಅಥವಾ ಅತಿಶೀತಲ ದ್ರವದೊಳಗೆ ಚಿಕ್ಕ ಸ್ಫಟಿಕವೊಂದನ್ನು ಸೇರಿಸುವುದು. (ಸ) ಆತಿಥೇಯವಾಗಬಲ್ಲ ಸಸ್ಯದಲ್ಲಿ, ಮಣ್ಣಿನಲ್ಲಿ ಅಥವಾ ಕೃಷಿಕೆ ಮಾಧ್ಯಮದಲ್ಲಿ ಕೋಶ/ಬೀಜಕ ಮುಂತಾದವನ್ನು ಹೊಗಿಸುವುದು
inoculation

ಇನಾರ್ಗ್ಯಾನಿಕ್
(ರ) ಖನಿಜ ಮೂಲದ. ಕಾರ್ಬನ್ ರಹಿತ, ಅಕಾರ್ಬನಿಕ, ನಿರವಯವ. ನೋಡಿ: ಆರ್ಗ್ಯಾನಿಕ್
inorganic

ಇನಾರ್ಗ್ಯಾನಿಕ್ ರಸಾಯನ ವಿಜ್ಞಾನ
(ರ) ರಸಾಯನ ವಿಜ್ಞಾನದ ಒಂದು ಶಾಖೆ. ಇಂಗಾಲದ ಸಂಯುಕ್ತಗಳನ್ನು ಹೊರತುಪಡಿಸಿ ಉಳಿದ ರಾಸಾಯನಿಕ ಧಾತುಗಳ ಮತ್ತು ಅವುಗಳ ಸಂಯುಕ್ತಗಳ ಅಧ್ಯಯನ. ಆದರೆ ಇಂಗಾಲದ ಆಕ್ಸೈಡ್‌ಗಳ
inorganic chemistry

ಇನ್ವರ್ಟೇಸ್
(ಸ) ಕಬ್ಬಿನ ಸಕ್ಕರೆಯನ್ನು ಜಲ ವಿಶ್ಲೇಷಿಸುವ ಒಂದು ಸಸ್ಯ ಕಿಣ್ವ. ಸುಕ್ರೇಸ್. (ರ) ಸುಕ್ರೇಸನ್ನು ಜಲವಿಭಜನೆ ಮಾಡಿ ಗ್ಲೂಕೋಸ್ ಲೀವ್ಯೂಲೋಸ್‌ಗಳ ಮಿಶ್ರಣವಾಗಿ ಪರಿವರ್ತಿಸಲ್ಪಟ್ಟದ್ದು
invertase

ಇನ್ವಾರ್
(ರ) ೬೩.೮% ಕಬ್ಬಿಣ, ೩೬% ನಿಕ್ಕಲ್, ೦.೨% ಕಾರ್ಬನ್ ಉಳ್ಳ ಮಿಶ್ರಲೋಹ. ಅತ್ಯಂತ ಕಡಿಮೆ ಉಷ್ಣ ವ್ಯಾಕೋಚನ ಗುಣಾಂಕವಿರುವ ಇದನ್ನು ಗಡಿಯಾರದ ಲೋಲಕ, ವೈಜ್ಞಾನಿಕ ಸಲಕರಣೆಗಳು ಮೊದಲಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇನ್ವೇರಿಯಬಲ್ (ಅವ್ಯತ್ಯಯ ಶೀಲ) ಪದದ ಸಂಕ್ಷಿಪ್ತ ರೂಪ
invar

ಇನ್ಸುಲ
(ಪ್ರಾ) ಮಿದುಳಿನ ಸಿಲ್ಪಿಯನ ಸೀಳಿನ ಬುಡದಲ್ಲಿ ಇರುವ ಸಣ್ಣ ಹಾಲೆ
insula

ಇನ್ಸುಲಿನ್
(ವೈ) ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿ ಯಾಗುವ, ಸಕ್ಕರೆಯನ್ನು ಜೀರ್ಣಗೊಳಿಸುವುದರಲ್ಲಿ ಭಾಗವಹಿಸುವ, ಪ್ರೋಟೀನ್ ಹಾರ್ಮೋನ್. ಇದರ ಕೊರತೆಯಿಂದ ಆಹಾರ ದಲ್ಲಿಯ ಸಕ್ಕರೆ ಅಂಶ ಜೀರ್ಣಗೊಳ್ಳದೆ ರಕ್ತದೊಂದಿಗೆ ಬೆರೆತು ಮಧುಮೂತ್ರ ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ ಈ ರೋಗವಿರುವವರಿಗೆ ಇನ್ಸುಲಿನ್ ಚುಚ್ಚುಮದ್ದು ನೀಡಿ ರಕ್ತದಲ್ಲಿಯ ಸಕ್ಕರೆ ಅಂಶ ನಿವಾರಿಸಲು ಯತ್ನಿಸಲಾಗುತ್ತದೆ. ಇದಕ್ಕಾಗಿ ಹಿಂದೆ ಇನ್ಸುಲಿನ್ನನ್ನು ಹಂದಿ ಹಾಗೂ ದನಗಳ ಮೇದೋಜೀರಕಾಂಗಗಳ ಸಾರದಿಂದ ತಯಾರಿಸಲಾಗುತ್ತಿತ್ತು. ಈಗ ಜೀನ್‌ರೀತ್ಯ ವ್ಯತ್ಯಯಿಸಿದ ಬ್ಯಾಕ್ಟೀರಿಯಾ ತಳಿಯಿಂದ ಪಡೆಯಲಾಗುತ್ತದೆ
insulin

ಇಬ್ಬನಿ
(ಭೌ) ತೆರೆದ ಮೇಲ್ಮೈಗಳ ಮೇಲೆ ಶಾಂತ ಮತ್ತು ತಿಳಿಯಾದ ರಾತ್ರಿ ವೇಳೆ ಸಂಚಯಿಸುವ ತೇವ. ಉಷ್ಣನಷ್ಟದ ಪರಿಣಾಮವಾಗಿ ಈ ಮೇಲ್ಮೈಗಳ ಉಷ್ಣತೆ ಇಬ್ಬನಿ ಬಿಂದುವಿಗಿಂತ ಕೆಳಕ್ಕಿಳಿಯುತ್ತದೆ. ಆಗ ಈ ಮೇಲ್ಮೈ ಸಂಪರ್ಕದಲ್ಲಿ ಇರುವ ವಾಯುವಿನಲ್ಲಿಯ ತೇವ ಸಾಂದ್ರೀಕರಿಸಿ ಹನಿಹನಿಯಾಗಿ ನೆಲಕ್ಕೆ ಬೀಳುತ್ತದೆ. ತುಷಾರ. ನೋಡಿ: ಮಂಜುಹನಿ
dew

ಇಬ್ಬನಿ ಬಿಂದು
(ಭೌ) ಜಲಬಾಷ್ಪದ ಸಾಂದ್ರೀಕರಣ ಆರಂಭವಾಗುವ ಉಷ್ಣತೆ
dew point


logo