(ಸಾ) ಮಾನವೇತಿಹಾಸದಲ್ಲಿ ಲಿಖಿತ ದಾಖಲೆಗಳ ಆರಂಭಕ್ಕೂ ಹಿಂದಿನ ಕಾಲ. ಪ್ರಾಗೈತಿಹಾಸಿಕ
prehistoric
ಇದ್
(ವೈ, ಮವಿ) ಮೊದಲು ಗ್ರೋಡ್ಡೆಕ್ ರೂಢಿಗೆ ತಂದ, ಅನಂತರ ವ್ಯಕ್ತಿಯ ಸಹಜ ಪ್ರವೃತ್ತಿಗಳನ್ನು ವಿವರಿಸಲು ಫ್ರಾಯ್ಡ್ ಬಳಸಿಕೊಂಡ ಪದ. ಇದು ಪ್ರಧಾನವಾಗಿ ಹಠಾತ್ ಬಯಕೆಗಳಿಂದ ಕೂಡಿರುತ್ತದೆ ಮತ್ತು ಸುಪ್ತ ಮನಸ್ಸಿನ ಮುಖ್ಯ ಭಾಗವಾಗಿರುತ್ತದೆ. ಸುಪ್ತಪ್ರe. ಸುಪ್ತವಾಸನೆ. (ಪ್ರಾ) ಜೀವಿಯ ಆನುವಂಶಿಕತೆಯನ್ನು ನಿರ್ಧರಿಸುವ ಕೋಶ ದ್ರವ್ಯಭಾಗದ ಏಕಮಾನ. ಅಹಮ್. ಜೀವಾಂಕುರಾಂಶ
id
ಇದ್ದಲಿನ ಕಪ್ಪುಪುಡಿ
(ತಂ) ಸೂಕ್ಷ್ಮ/ನವುರು ಕೆತ್ತನೆ ಕೆಲಸಗಳಲ್ಲಿ ಎರಕವು ನಯವಾಗುವ ಸಲುವಾಗಿ ಅಚ್ಚಿನ ಮೇಲೆ ಚಿಮುಕಿಸುವ ಇದ್ದಲು ಪುಡಿ
charcoal blacking
ಇದ್ದಲು
(ರ) ಮರ ಅಥವಾ ಪ್ರಾಣಿ ಪದಾರ್ಥವನ್ನು ವಾಯುಸಂಪರ್ಕ ಇರದಂತೆ ವಿನಾಶಕ ಬಟ್ಟೀಕರಣಕ್ಕೆ ಒಳಪಡಿಸಿದಾಗ ದೊರೆಯುವ ಶೇಷವಸ್ತು
charcoal
ಇನ್‌ಕ್ಯುಬೇಷನ್
(ರ) ಕಿಣ್ವನ ಕ್ರಿಯೆಯಂಥ ನಾನಾ ರಾಸಾಯನಿಕ ಕ್ರಿಯೆಗಳನ್ನು ಅಭ್ಯಸಿಸಲೋಸುಗ ರಾಸಾಯನಿಕ ಮಿಶ್ರಣಗಳನ್ನು ನಿರ್ದಿಷ್ಟ ಸ್ಥಿತಿಯಲ್ಲಿ ನಾನಾ ಕಾಲಾವಧಿಗಳವರೆಗೆ ಇರಿಸಿರುವುದು. (ವೈ) ೧. ಸೋಂಕು ದೇಹವನ್ನು ಪ್ರವೇಶಿಸಿದ ಕ್ಷಣದಿಂದ ಹಿಡಿದು, ಪ್ರಥಮ ರೋಗಲಕ್ಷಣ ಪ್ರಕಟವಾಗುವ ವರೆಗಿನ ಅವಧಿ. ೨. ಕಾವಿನವಧಿ. ಅವಧಿಪೂರ್ವ ಜನಿಸಿದ ಅಥವಾ ಆಕ್ಸಿಜನ್ನಿನ ಕೊರತೆಯಿಂದ ನರಳುವ ಮಗುವನ್ನು ಕೃತಕ ಉಷ್ಣತೆ, ಆರ್ದ್ರತೆ ಹಾಗೂ ಆಕ್ಸಿಜನ್ನಿನ ಪರಿಸರದಲ್ಲಿ ಇಟ್ಟು ಕಾಪಾಡುವುದು
incubation
ಇನ್‌ಕ್ವಿಲಿನ್
(ಪ್ರಾ) ಬೇರೊಂದು ಪ್ರಾಣಿಯ ಗೂಡಿನಲ್ಲಿ ವಾಸಿಸುತ್ತಿರುವ ಅತಿಥಿ ಪ್ರಾಣಿ. ಆತಿಥೇಯ ಪ್ರಾಣಿ ತನಗಾಗಿ, ತನ್ನ ಮರಿಗಳಿಗಾಗಿ ಇರಿಸಿರುವ ಆಹಾರವನ್ನು ತಾನೂ ಉಣ್ಣುವ ಪ್ರಾಣಿ. ಸಹಭುಂಜಕ ಜೀವಿ
inquiline
ಇನ್‌ಟೇಕ್
(ತಂ) ಅಂತರ್ದಹನ ಎಂಜಿನ್‌ನೊಳಕ್ಕೆ ಅನಿಲ ಮಿಶ್ರಣವನ್ನು, ಗಣಿಯೊಳಕ್ಕೆ ಸ್ವಚ್ಛ ಹವೆಯನ್ನು, ಒಳ ಹಾಯಿಸುವ ಕೊಳವಿ, ತೆರಪು, ಇತ್ಯಾದಿ. ಒಳಹಾಯಿಕೆ
intake
ಇನ್‌ಪುಟ್
(ವೈ) ನೋಡಿ : ಆದಾನ
input
ಇನ್‌ಫಾರ್ಕ್ಟ್
(ವೈ) ರಕ್ತಪೂರೈಕೆ ಸರಿಯಾಗಿ ಆಗದೆ ಊತಕ ಸತ್ತುಹೋಗಿರುವ ದೇಹಭಾಗ. ಮೃತಊತಕ
infarct
ಇನ್‌ಫ್ಲೂಯೆನ್ಝಾ
(ವೈ) ಮೈಕೈ ನೋವು, ನೆಗಡಿ, ಜ್ವರ ಗಳಿಂದ ಕೂಡಿದ ತೀವ್ರ ಸಾಂಕ್ರಾಮಿಕವಾದ, ಗಾಳಿಯಲ್ಲಿ ಹರಡುತ್ತ ಶ್ವಾಸಕಾಂಗಗಳಿಗೆ ತಗಲುವ, ಶ್ವಾಸನಾಳದ ಲೋಳೆ ಪೊರೆಯ ಉರಿಯೂತ ಉಂಟುಮಾಡುವ ವೈರಸ್ ರೋಗ. ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೀವ್ರ ನೆಗಡಿಯಿಂದ ಕೂಡಿ ಬೇಗ ದಣಿವು ಉಂಟುಮಾಡುತ್ತದೆ. ಗಾಳಿಯಲ್ಲಿದ್ದು ಉಸಿರಿನ ಮೂಲಕ ಶರೀರ ಹೊಗುವ ವೈರಸ್ ಈ ಅಸ್ವಸ್ಥತೆಗೆ ಕಾರಣ. ಪ್ರಪಂಚ ವ್ಯಾಪಿ ರೋಗವಿದು. ಆದರೆ ಇದರ ತೀವ್ರತೆ ಸತತವಾಗಿ ಬದಲುವ ರೋಗಾಣುವಿನ ಮಾದರಿಯನ್ನು ಅವಲಂಬಿಸಿದೆ. ಉರಿಶೀತ