(ಪ್ರಾ) ಹೈಮಿನಾಪ್ಟರ ಉಪವರ್ಗ, ಇಕ್ನೂಮಾನಿಡೀ ಕುಟುಂಬಕ್ಕೆ ಸೇರಿದ ಪರೋಪಜೀವಿ ಕೀಟ. ಲೆಪಿಡಾಪ್ಟರ ಅಥವಾ ಇತರ ಉಪವರ್ಗದ ಕೀಟಗಳ ಲಾರ್ವದ ಮೇಲೋ ಇಲ್ಲವೆ ಒಳಗೋ ಮೊಟ್ಟೆ ಇಡುತ್ತದೆ. ಸದಾ ಅದುರುತ್ತಿರುವ ಕುಡಿ ಮೀಸೆಗಳು ಇದರ ವೈಶಿಷ್ಟ್ಯ. ಕಂಬಳಿಹುಳುಗಳನ್ನು ನಾಶ ಮಾಡುತ್ತದೆ, ಜೇಡಗಳನ್ನು ತಿಂದುಹಾಕುತ್ತದೆ
ichneumon fly
ಇಗ್ವಾನೊಡನ್
(ಪ್ರಾ) ಈಗ ಫಾಸಿಲ್‌ಆಗಿ ಕಾಣಸಿಗುವ ಬೃಹದಾಕಾರದ ಹಲ್ಲಿ ಜಾತಿಯ ಸಸ್ಯಾಹಾರಿ ಪ್ರಾಣಿ. ಉಡ
iguanodon
ಇಚ್ಚಿತ್ತ ವಿಕಲತೆ
(ವೈ) ಕೆಲವು ವಿಧದ ಮಾನಸಿಕ ರೋಗಗಳಿಗೆ ನೀಡಿರುವ ಸಮೂಹ ಹೆಸರು. ಇದು ವ್ಯಕ್ತಿಯ ಆಲೋಚನಾ ವಿಧಾನದಲ್ಲಿನ ವೈಪರೀತ್ಯಕ್ಕೆ ಸಂಬಂಧಿಸಿದ್ದು. ವ್ಯಕ್ತಿತ್ವವೇ ಎರಡಾಗಿ ತೋರುವ ಮನೋರೋಗ. ದೃಶ್ಯ ಭ್ರಮೆ ಹಾಗೂ ಶ್ರವ್ಯ ಭ್ರಮೆ ಸಾಮಾನ್ಯ. ಇಂಥ ವ್ಯಕ್ತಿ ವಾಸ್ತವ ಜಗತ್ತಿನಿಂದ ವಿಮುಖನಾಗಿ, ತನ್ನದೇ ಆದ ಜಗತ್ತಿನಲ್ಲಿ ಹುದುಗಿಕೊಂಡಿದ್ದು ಪರಿಸರದ ಆಗು ಹೋಗುಗಳಿಗೆ ಸ್ಪಂದಿಸುವ ಸಾಮರ್ಥ್ಯ ಕಳೆದುಕೊಂಡಿರುತ್ತಾನೆ. ಹಲವು ನಮೂನೆಗಳಿವೆ. ಷಿ(ಸ್ಕಿ)ಜೋಫ್ರೇನಿಯಾ. ಛಿದ್ರಮನಸ್ಕತೆ
schizophrenia
ಇಚ್ಚಿಪ್ಪು ಮೀನು
(ಪ್ರಾ) ಪೆಕ್ಟಿನ್ ಜಾತಿ, ಲ್ಯಾಮಿಲಿ ಬ್ರಾಂಕಿಯ ವರ್ಗ, ಫಿಲಿಬ್ರಾಂಕಿಯ ಉಪವರ್ಗಕ್ಕೆ ಸೇರಿದ ಕಡಲ ಮೃದ್ವಂಗಿ. ಇದರಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಪ್ರಭೇದಗಳಿವೆ. ಕಿವಿರುಗಳಿಗೆ ದ್ವಂದ್ವ ತಂತುಗಳಿದ್ದು ಅವುಗಳ ಮೇಲೆ ಕಪ್ಪೆಚಿಪ್ಪಿನಂತೆ ಹೊಳೆಯುವ ಪದರ ಗಳಿರುವುದು ಈ ಗುಂಪಿನ ಪ್ರಾಣಿಗಳ ಪ್ರಮುಖ ಲಕ್ಷಣ. ಇವುಗಳಲ್ಲಿ ಕೆಲವನ್ನು ಮಾನವನು ಆಹಾರವಾಗಿ ಬಳಸುತ್ತಾನೆ. ಮಧ್ಯಯುಗದ ಯಾತ್ರಿಕರು ಇವುಗಳ ಕವಡೆಗಳನ್ನು ಸಂಕೇತ ಮುದ್ರೆಗಳಾಗಿ ಧರಿಸುತ್ತಿದ್ದರು
scallop
ಇಚ್ಛೆ
(ವೈ) ಸಂಕಲ್ಪ . ಇಷ್ಟ , ಉದ್ದೇಶ
will
ಇಟಾಕೊನಿಕ್ ಆಮ್ಲ
(ರ) C5H6O4. ಡೈ ಕಾರ್ಬಾಕ್ಸಿಲಿಕ್ ಆಮ್ಲದ ಹರಳು. ಅಸ್ಪರ್ ಗಿಲ್ಲಸ್ ಜಾತಿಗೆ ಸೇರಿದ ಮೋಲ್ಡ್‌ಗಳೊಂದಿಗೆ ಸಕ್ಕರೆ ಹುದುಗು ಆದಾಗ ದೊರೆಯುತ್ತದೆ