(ರ) ಆವರ್ತ ಕೋಷ್ಟಕದ ೩ನೇ ಗುಂಪಿನಲ್ಲಿರುವ ಬೆಳ್ಳಿ ಬಣ್ಣದ ತ್ರಿವೇಲೆನ್ಸೀಯ ಲೋಹಧಾತು. ಪ್ರತೀಕ In. ಪಸಂ ೪೯, ಸಾಪರಾ ೧೧೪.೮೨, ದ್ರಬಿಂ ೧೫೫0 ಸೆ, ಕುಬಿಂ ೨೧೦೦0 ಸೆ, ೧೩0 ಸೆನಲ್ಲಿ ಸಾಸಾಂ ೭.೨೮. ವಿದ್ಯುತ್ ರೋಧ ಶೀಲತೆ ೯´೧೦-೮ ಓಮ್ ಮೀಟರ‍್ಸ್. ಸತುವಿನ ಅದಿರಿನಲ್ಲಿ ವಿರಳವಾಗಿ ಲಭ್ಯ. ಸೀಸದಂತೆ ಮೃದು ಹಾಗೂ ಗೀಚಿದಾಗ ಗುರುತು ಮೂಡಿಸುತ್ತದೆ. ವಿದ್ಯುಲ್ಲೇಪನದಲ್ಲಿ, ಟ್ರಾನ್ಸಿಸ್ಟರ್‌ಗಳ ತಯಾರಿಕೆಯಲ್ಲಿ ಬಳಕೆ
(ರ) C8H7N. ಮಲ್ಲಿಗೆ ಎಣ್ಣೆ ಮತ್ತು ಪುನುಗಿನಲ್ಲಿರುವ ಮತ್ತು ಪ್ರಾಣಿಗಳ ಕರುಳಿನಲ್ಲಿ ಪ್ರೋಟೀನ್‌ಗಳ ವಿಘಟನೆಯ ಉತ್ಪನ್ನವಾಗಿರುವ ಹಳದಿ ಬಣ್ಣದ ವಿಲೇಯ ವಸ್ತು. ದ್ರಬಿಂ ೫೨.೫0 ಸೆ. ಬೆನ್ಝೀನ್ ಹಾಗೂ ಪಿರೋಲ್ ಚಕ್ರಗಳ ಮಿಲನದಿಂದಾದ ಕಾರ್ಬಾನಿಕ್ ಸಂಯುಕ್ತ. ದುರ್ವಾಸನೆಯಿದ್ದರೂ ಸುಗಂಧಗಳ ತಯಾರಿಕೆಯಲ್ಲಿ ಬಳಕೆ
indole
ಇಂದ್ರಗೋಪ
(ಭೂವಿ) ಕೆಂಪು ಅಥವಾ ಕೆಂಗಂದು ಬಣ್ಣದ ಅರೆಪಾರಕ ಚಾಲ್ಸಿಡೆನಿ (ಪ್ರಶಸ್ತ ಖನಿಜ)
larnelian
ಇಂಧನ
(ಭೌ) ಉಷ್ಣ ಅಥವಾ ಶಕ್ತಿ ಪಡೆಯಲು ಉರಿಸಬಹುದಾದಂಥ ಪದಾರ್ಥ. ಉದಾ: ಕಟ್ಟಿಗೆ, ಕಲ್ಲಿದ್ದಲು, ಎಣ್ಣೆ ಅಥವಾ ಯುರೇನಿಯಮ್. ಉರುವಲು
fuel
ಇಂಪಾಲ
(ಪ್ರಾ) ಆರ್ಟಿಯೊಡ್ಯಾಕ್ಟಿಲ ವರ್ಗ, ಬೋವಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಈಪೈಸಿರೋಸ್ ಮೆಲಾಂಪಸ್ ವೈಜ್ಞಾನಿಕ ನಾಮ. ದಕ್ಷಿಣ ಆಫ್ರಿಕ ಮೂಲವಾಸಿ. ಆಕರ್ಷಕ ಒಡಲಿನ ಸಣ್ಣ ಜಿಂಕೆ, ಹುಲ್ಲೆ. ಮೈಬಣ್ಣ ಮೇಲ್ಭಾಗದಲ್ಲಿ ಕಂದುಮಿಶ್ರಿತ ಕೆಂಪು, ಕೆಳಭಾಗದಲ್ಲಿ ಬಿಳಿ. ವಯಸ್ಸಾದ ಇಂಪಾಲಗಳಿಗೆ ಮಾತ್ರ ಸುರುಳಿ ಸುತ್ತಿದ ಉಂಗುರ ಗಳಿಂದಾದ ಎರಡು ಕೊಂಬುಗಳಿರುತ್ತವೆ
impala
ಇಂಪೇಷಿಯನ್ಸ್
(ಸ) ಬಾಲ್ಸಾಮಿನೇಸೀ ಕುಟುಂಬ, ಕರ್ಣಕುಂಡಲ ಜಾತಿಗೆ ಸೇರಿದ, ಏಕ, ದ್ವಿ ಹಾಗೂ ಬಹುವಾರ್ಷಿಕ ಸಸ್ಯ. ೬೦೦-೭೦೦ ಪ್ರಭೇದಗಳಿವೆ. ಯುರೇಷ್ಯ, ಆಫ್ರಿಕಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಕಾಯಿ ಮುಟ್ಟಿದೊಡನೆ ಸಿಡಿಯುವುದರಿಂದ ಇದಕ್ಕೆ ಇಂಪೇಷಿಯನ್ಸ್ (ಅಸಹನೆ) ಹೆಸರು ಬಂದಿದೆ. ಸಾಲುಗಿಡ ಗಳಾಗಿ ಬೆಳೆಸುತ್ತಾರೆ. ಗಿಡದ ಕಷಾಯದಲ್ಲೂ ಬೀಜದ ಎಣ್ಣೆಯಲ್ಲೂ ಔಷಧೀಯ ಗುಣಗಳಿವೆ
impatiens
ಇಕ್‌ಥಿಯೋಸಿಸ್
(ವೈ) ಮನುಷ್ಯನ ಹೊರಚರ್ಮ ಹರುಕಲಾಗಿ ಮೀನಿನ ಹೊರಮೈಯಂತೆ ಚೆಕ್ಕೆ ಚೆಕ್ಕೆಯಂತೆ ಆಗುವ, ಹುಟ್ಟಿನಿಂದ ಬಂದ ಚರ್ಮ ರೋಗ. ಮೀನು ದೊಗಲು ರೋಗ
ichthyosis
ಇಕಾನೊಮೀಟರ್
(ರ) ಅನಿಲಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಅಳೆಯಲು ಬಳಸುವ ಉಪಕರಣ
econometer
ಇಕ್ನೂಮಾನ್
(ಪ್ರಾ) ಮೊಸಳೆ ಮೊಟ್ಟೆಗಳನ್ನು ಹಾಳುಗೆಡಹುವ, ಮುಂಗುಸಿ ಬಳಗದ, ಉತ್ತರ ಆಫ್ರಿಕ ಮೊದಲಾದ ಕಡೆಗಳಲ್ಲಿ ಕಂಡು ಬರುವ ಕಂದು ಬಣ್ಣದ ಚತುಷ್ಪಾದಿ