(ವೈ) ೧. ಸೂಜಿಯನ್ನೊಳಗೊಂಡ ಪಿಚಕಾರಿ ಯಂತಹ ಸಾಧನದಿಂದ ಔಷಧ ಇತ್ಯಾದಿಗಳನ್ನು ತಳಚರ್ಮದ ಊತಕದೊಳಗೆ (ತಳಚರ್ಮದ ಸೂಜಿಮದ್ದು), ಸ್ನಾಯುವಿನ ಒಳಗೆ (ಅಂತಃಸ್ನಾಯು ಸೂಜಿಮದ್ದು), ಸಿರೆಯೊಳಗೆ (ಅಂತಸ್ಸಿರ ಸೂಜಿ ಮದ್ದು) ಚುಚ್ಚುವುದು. ೨. ಸೂಜಿ ಇಲ್ಲದೆ ನೇರವಾಗಿ ನೆಟ್ಟಗರುಳಿ ನೊಳಗೆ (ಎನಿಮ, ವಸ್ತಿ), ಯೋನಿಯೊಳಗೆ (ಪ್ರಕ್ಷಾಲನ), ಮೂತ್ರನಾಳ ಅಥವಾ ದೇಹದ ಇತರ ನಾಳಗಳೊಳಗೆ ಔಷಧಯುಕ್ತ ದ್ರಾವಣವನ್ನು ಚಿಮ್ಮಿ ಅವುಗಳನ್ನು ತೊಳೆಯುವುದು. ೩. ಸೂಜಿಯ ಮೂಲಕ ಚುಚ್ಚಬಹುದಾದ ಮದ್ದು. (ಭೂವಿ) ಶಿಲೆಗಳಲ್ಲಿ ಕಂಡುಬರುವ ಬಿರುಕು ಒಡಕು, ಸಂಧಿಗಳಲ್ಲಿ ದ್ರಾವಕಗಳನ್ನು ತುಂಬಿಸಿ ಗಟ್ಟಿ ಮಾಡುವುದು. (ತಂ) ಅಂತರ್ದಹನ ಎಂಜಿನ್ನಿನ ಸಿಲಿಂಡರಿಗೆ ಇಂಧನವನ್ನು ಸಿಂಪಡಿಸುವ ಪ್ರಕ್ರಿಯೆ. (ಅಂವಿ) ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಂತೆ ರಾಕೆಟ್ಟಿನ ಕೊನೆಯ ಘಟ್ಟವನ್ನು ಹೊತ್ತಿಸುವುದು
injection
ಇಂಟರ್‌ನ್ಯಾಷನಲ್ ಕ್ಯಾಂಡಲ್
(ಭೌ) ದೀಪ್ತ ತೀವ್ರತೆಯನ್ನು ಅಳೆಯಲು ಹಿಂದೆ ಬಳಸುತ್ತಿದ್ದ ಏಕಮಾನ. ಈಗ ಇದರ ಸ್ಥಾನದಲ್ಲಿ ಕ್ಯಾಂಡೆಲ ಬಂದಿದೆ. ಮೌಲ್ಯದಲ್ಲಿ ಅದಕ್ಕಿದು ಸಮ
international candle
ಇಂಟರ್‌ಫೆರಾನ್
(ವೈ) ಇದೊಂದು ಸಣ್ಣ ಗಾತ್ರದ ಪ್ರೋಟೀನು. ನಮ್ಮ ದೇಹದೊಳಗೆ ಜೀವಂತ ಅಥವಾ ನಿರ್ಜೀವ ವೈರಸ್ ಪ್ರವೇಶಿಸಿದಾಗ ಅದನ್ನು ನಿಗ್ರಹಿಸಲು ನಮ್ಮ ದೇಹ ಉತ್ಪಾದಿಸುವ ಒಂದು ವಿಶೇಷ ಪ್ರೋಟೀನು. ಇದು ವೈರಸ್ಸನ್ನು ದುರ್ಬಲಗೊಳಿಸುತ್ತದೆ. ಒಂದು ಬಗೆಯ ವೈರಸ್ಸಿಗಾಗಿ ಸಿದ್ಧಗೊಂಡ ಇಂಟರ್‌ಫೆರಾನ್, ಆ ವೈರಸ್ಸಿನ ಸೋದರ ಸಂಬಂಧಿ ವೈರಸ್ಸು ಗಳನ್ನೂ ನಾಶಮಾಡಬಲ್ಲದು. ನಿರೋಧಕ ಪ್ರೋಟೀನು, ಪ್ರತಿಬಂಧಕ ಪ್ರೋಟೀನ್
interferon
ಇಂಟರ್‌ಫೇಸ್
(ರ) ಯಾವುದೇ ಎರಡು ಸ್ಥಿತಿಗಳ ನಡುವಿನ ಸಾಮಾನ್ಯ ಮುಖ. ಅನಿಲ, ದ್ರವ ಹಾಗೂ ಘನಸ್ಥಿತಿಗಳ ನಡುವೆ ಐದು ಬಗೆಯ ಇಂಟರ್‌ಫೇಸ್‌ಗಳಿವೆ: ಅನಿಲ-ದ್ರವ, ಅನಿಲ-ಘನ, ದ್ರವ-ದ್ರವ, ದ್ರವ-ಘನ ಹಾಗೂ ಘನ-ಘನ. ಎರಡು ರಾಸಾಯನಿಕ ಸ್ಥಿತಿಗಳನ್ನು ಪ್ರತ್ಯೇಕಿಸುವ ಮೇಲೈ. ಅಂತರಮುಖ (ಕಂ) ಒಟ್ಟಿಗೆ ಉಪಯೋಗಿಸುವಂತೆ ಕಂಪ್ಯೂಟರ್‌ನ ಯಂತ್ರಾಂಶ ಹಾಗೂ ತಂತ್ರಾಂಶ ಭಾಗಗಳನ್ನು ಕೂಡಿಸುವ ಸಾಧನ (ಜೀ) ಮೈಟಾಸಿಸ್‌ಗಳ ನಡುವಿನ ಕೋಶ ಚಕ್ರದ ಅವಧಿ. ನೋಡಿ: ಮೈಟೋಸಿಸ್
interface
ಇಂಟರ್‌ಸ್ಟೆರೈಲ್
(ಜೀ) ಅಡ್ಡತಳಿ ಉಂಟು ಮಾಡಲಾಗದ (ಎರಡು ಪ್ರಾಣಿಗಳು ಅಥವಾ ಸಸ್ಯಗಳು)
intersterile
ಇಂಟರ್ನ್
(ಸಾ) ಯಾವುದೇ ಒಂದು ದೇಶ, ಪ್ರದೇಶ ಮೊದಲಾದವುಗಳ ಗಡಿಗಳೊಳಗೇ ಇರಬೇಕೆಂದು ನಿರ್ಬಂಧಿಸು. ಸ್ಥಾನಬದ್ಧಗೊಳಿಸು (ವೈ) ಆಸ್ಪತ್ರೆಯಲ್ಲಿ ಹಂಗಾಮಿ ಸಹಾಯಕ ವೈದ್ಯನಾಗಿ ಇಲ್ಲವೇ ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡುವ ಹಿರಿಯ ವಿದ್ಯಾರ್ಥಿ ಅಥವಾ ನೂತನ ಪದವೀಧರ
intern
ಇಂಟ್ರೊಫೈಯರ್
(ರ) ಕಲಿಲ ದ್ರಾವಣವನ್ನು ಕೆಲ ಮಟ್ಟಿಗೆ ಆಣವಿಕ ದ್ರಾವಣವಾಗಿ ಮಾರ್ಪಡಿಸಬಲ್ಲ ಪದಾರ್ಥ. ಇದನ್ನು ಕೆಲವು ದ್ರವಗಳಿಗೆ ಬೆರೆಸಿದಾಗ ಅವುಗಳ ಆರ್ದ್ರತಾ ಸಾಮರ್ಥ್ಯ ಅಧಿಕವಾಗುತ್ತದೆ
introfier
ಇಂಡಕ್ಟೊಮೀಟರ್
(ಭೌ) ನಿರ್ದಿಷ್ಟ ಪ್ರೇರಕತೆ ಇರುವ ತಂತಿ ಸುರುಳಿ. ಪ್ರೇರಣೆಯನ್ನು ಅಳೆಯುವ ಉಪಕರಣ
inductometer
ಇಂಡಕ್ಷನ್
(ವೈ) ೧. ಅರಿವಳಿಕೆ ನೀಡಿದಾಗಿನಿಂದ ರೋಗಿಯಲ್ಲಿ ಪ್ರeಶೂನ್ಯತೆ ಉಂಟಾಗುವವರೆಗಿನ ಕಾಲಾವಧಿ
induction
ಇಂಡಿಗೊ
(ರ) C16H10N2O2. ನೀಲಿ ಬಣ್ಣದ ಪ್ರಮುಖ ಕಡಾಯಿ ರಂಗು. ಇಂಡಿಗೊಫೆರ ವರ್ಗದ ಸಸ್ಯಗಳಲ್ಲಿ ಲಭ್ಯ. ಇಂದು ಇದೊಂದು ಸಂಶ್ಲೇಷಿತ ಉತ್ಪನ್ನ