(ಪ್ರಾ) ಪೆಸಿಫಿಕ್ ಸಾಗರದ ಸೆಲೆಬಸ್ ದ್ವೀಪದ ಕಾಡುಗಳಲ್ಲಿರುವ ಗುಜ್ಜಾರಿ ಎಮ್ಮೆ ಜಾತಿ ಪ್ರಾಣಿ
anova
ಆನ್‌ಹೈಡ್ರೈಟ್ ವಿಧಾನ
(ರ) ಆನ್ ಹೈಡ್ರೈಟ್ (ನಿರ್ಜಲ) ಸಲ್ಫೇಟ್‌ನಿಂದ (CaSO4) ಸಲ್ಫ್ಯೂರಿಕ್ ಆಮ್ಲ (H2SO4) ತಯಾರಿಸುವ ಬಗೆ
anhydrite process
ಆನಿಮೊನಿ
(ಸ) ಸ್ವಲ್ಪಮಟ್ಟಿಗೆ ಪಾಪಿ (ಗಸಗಸೆ ಜಾತಿ) ಮತ್ತು ಸೇವಂತಿಗೆ ಗಿಡಗಳಂತೆ ಅಂದದ ಹೂ (ಗಾಳಿ ಹೂವು) ಬಿಡುವ ಉದ್ಯಾನ ಸಸ್ಯ. ಇದರ ಬಿಳುಪು ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ ಹೂಗಳು ಜನರಿಗೆ ಅಚ್ಚುಮೆಚ್ಚು. ಮನೆಗಳಲ್ಲಿ ಕುಂಡಸಸ್ಯಗಳಾಗಿಯೂ ಬೆಳೆಸುವುದುಂಟು. (ಪ್ರಾ) ಕಡಲತಳದಲ್ಲಿ ಕಾಣಸಿಗುವ ಸೀಲೆಂಟರೇಟ ಗುಂಪಿನ ಜೀವಿ
anemone
ಆಬಲೋನೆ
(ಪ್ರಾ) ಗ್ಯಾಸ್ಟ್ರಾಪೊಡ ವರ್ಗ, ಪ್ರೊಸೊ ಬ್ರಾಂಕಿಯೇಟ ಗಣಕ್ಕೆ ಸೇರಿದ ಹ್ಯಾಲಿಯೋಟಿಸ್ ಕ್ರಚಿರೊಡೀ ಎಂಬ ಮೃದ್ವಂಗಿ. ಅಮೆರಿಕದ ಪಶ್ಚಿಮತೀರ ನಿವಾಸಿಗಳ ಭಾಷೆಯಲ್ಲಿ ಇದು ಆಬಲೋನೆ. ಇದರಲ್ಲಿ ನಾನಾ ಪ್ರಭೇದಗಳು ಉಂಟು. ಆಹಾರ, ವಾಣಿಜ್ಯ ದೃಷ್ಟಿಯಿಂದ ಮುಖ್ಯ. ಶೈವಲಾಹಾರಿ. ಆಕರ್ಷಕ ಚಿಪ್ಪು ಇದೆ. ಮುತ್ತಿನ ತಾಯಿ
abalone
ಇಂಕಸ್
(ಪ್ರಾ) ಮನುಷ್ಯ ದೇಹದಲ್ಲಿಯೇ ಅತ್ಯಂತ ಚಿಕ್ಕದಾಗಿರುವ, ನಡುಕಿವಿಯಲ್ಲಿರುವ ಮೂರು ಮೂಳೆಗಳ ಪೈಕಿ ನಡುವಿನ ಮೂಳೆ. ಶಬ್ದ ರವಾನೆಯಲ್ಲಿ ಪಾಲ್ಗೊಳ್ಳುತ್ತದೆ. ನೋಡಿ: ಸ್ಥೂಣಾಸ್ಥಿ
incus
ಇಂಗಾಲ
(ರ) ನೋಡಿ : ಕಾರ್ಬನ್
carbon
ಇಂಗಾಲ ಕಾಲಗಣನೆ
(ಭೌ) ನೋಡಿ: ಕಾರ್ಬನ್ ಕಾಲಗಣನೆ
carbon dating
ಇಂಗಾಲ ಪ್ರತಿ
(ಸಾ) ಮೂಲದ ಯಥಾ ನಕಲು
carbon copy
ಇಂಗು
(ಸ) ಏಪಿಯೇಸೀ (ಗಜ್ಜರಿ) ಕುಟುಂಬಕ್ಕೆ ಸೇರಿದ ಕೊತ್ತಂಬರಿ, ಬ್ರಾಹ್ಮಿ (ಒಂದೆಲಗ ಅಥವಾ ತಿಮರೆ) ಸಸ್ಯಗಳ ಹತ್ತಿರ ಸಂಬಂಧಿಯಾದ ಫೆರುಲ ಅಸಫಿಟಿಡ ಎಂಬ ಸಸ್ಯದ ಬೇರನ್ನು ಗಾಯಗೊಳಿಸಿದಾಗ ದೊರೆಯುವ ವಿಶಿಷ್ಟ ವಾಸನೆಯ ಗೋಂದುರಾಳ. ಇದರಲ್ಲಿ ಫೆರುಲಿಕ್ ಆಮ್ಲ ಮತ್ತು ಆವಿಶೀಲ ಸುಗಂಧ ತೈಲಗಳಿವೆ. ಔಷಧಿಯಲ್ಲಿ ಬಳಕೆ. ಅಡುಗೆಯಲ್ಲಿ ಉಪಯುಕ್ತ ಪರಿಕರ. ಹಿಂಗು, ರಾಮಡ, ಬಾಹ್ಲೀಕ
asafoetida
ಇಂಜೆಕ್ಟರ್
(ವೈ) ೧. ಸೂಜಿ ಮದ್ದು ನೀಡುವವನು, ನೀಡುವುದು, ಚುಚ್ಚುಗ. ಅಂತಃಕ್ಷೀಪಕ. ೨. ಔಷಧ ಇತ್ಯಾದಿಗಳನ್ನು ದೇಹದ ಒಳಗೆ ಹೊಗಿಸಲು ನೆರವಾಗುವ ಸಾಧನ. (ತಂ) ೧. ಅಂತರ್ದಹನ ಎಂಜಿನ್ನಿನ ಸಿಲಿಂಡರಿಗೆ ಇಂಧನವನ್ನು ಸಿಂಪಡಿಸುವ ಸಾಧನ. ೨. ಮೊದಲು ಉಗಿ-ಬಾಯಿಲರ್ ಒಳಕ್ಕೆ ಉಗಿ ಪ್ರವಾಹವನ್ನು ಬಲವಾಗಿ ಹೊಗಿಸಿ ದಾರಿ ಮಾಡಿ ಅನಂತರ ನೀರನ್ನು ನುಗ್ಗಿಸುವ ಸಾಧನ