(ಸ) ದೇಹದ ಬೆಳವಣಿಗೆಗೆ ಅತ್ಯಾವಶ್ಯಕವಾದ ಪೋಷಕಗಳನ್ನು ಒದಗಿಸುವ ಧಾನ್ಯ, ತರಕಾರಿ ಹಾಗೂ ಹಣ್ಣು ಹಂಪಲು ಸಸ್ಯಗಳು. ಧಾನ್ಯ ಸಸ್ಯಗಳಲ್ಲಿ ಏಕದಳ (ಬತ್ತ, ಗೋದಿ, ರಾಗಿ ಇತ್ಯಾದಿ) ದ್ವಿದಳ (ತೊಗರಿ, ಅವರೆ, ಉದ್ದು ಇತ್ಯಾದಿ) ಎಂದು ಎರಡು ಬಗೆಗಳುಂಟು. ಆಹಾರ ಸಸ್ಯಗಳಲ್ಲಿ ತರಕಾರಿಗಳು ಅತಿ ಮುಖ್ಯ. ಇವುಗಳಲ್ಲಿ ನಾಲ್ಕು ಬಗೆಗಳುಂಟು: ಗೆಡ್ಡೆ-ಗೆಣಸು (ಬೀಟ್‌ರೂಟ್, ಕ್ಯಾರೆಟ್, ಮೂಲಂಗಿ ಇತ್ಯಾದಿ). ಕಾಂಡ-ಎಲೆ (ಪುದೀನ, ಎಲೆಕೋಸು, ದಂಟು, ಬಸಳೆ ಇತ್ಯಾದಿ) ಕಾಯಿ-ಹಣ್ಣು (ಬದನೆ, ಬೆಂಡೆ, ಟೊಮ್ಯಾಟೊ ಇತ್ಯಾದಿ) ಮತ್ತು ಹೂ (ಹೂಕೋಸು, ಬಾಳೆಯ ಮೋತೆ ಇತ್ಯಾದಿ) ಇವಲ್ಲದೆ ಮೆಣಸಿನಕಾಯಿ, ಏಲಕ್ಕಿ, ಲವಂಗ, ಈರುಳ್ಳಿ ಬೆಳ್ಳುಳ್ಳಿಗಳೂ ರುಚಿ ನೀಡುವ ಆಹಾರ ಸಸ್ಯಗಳು
food plants
ಆಹಾರಾನುವರ್ತನೆ
(ಸ) ಪೌಷ್ಟಿಕತೆಯ ದೃಷ್ಟಿ ಯಿಂದ ಆಹಾರ ಕುರಿತಂತೆ ಜೀವಿಗಳ ಸ್ವಾಭಾವಿಕ ಪ್ರತಿಕ್ರಿಯೆ. ಒಂದು ರೀತಿಯ ಕೆಮೊಟ್ರಾಪಿಸಮ್ (ರಾಸಾಯನಿಕ ದಿಕ್ಚ್ಯುತಿ)
trophotropism
ಆಳ ಕೊರಕಲು
(ಸಾ) ನೋಡಿ: ಬಿರುಕು
cleft
ಆಳುಗುಂಡಿ
(ತಂ) ತೊಟ್ಟಿ, ಬಾಯಿಲರ್, ನೆಲದಡಿ ಮಾರ್ಗ, ಚರಂಡಿ ಇತ್ಯಾದಿಗಳಿಗೆ ಒಳ ಹೋಗಲು ದಾರಿ ಮಾಡಿ ಕೊಡುವ ಕಂಡಿ. ಸಾಮಾನ್ಯವಾಗಿ ಎರಕದ ಕಬ್ಬಿಣದ, ಉಕ್ಕಿನ ಅಥವಾ ಸಿಮೆಂಟ್ ಕಾಂಕ್ರೀಟಿನ ಫಲಕದಿಂದ ಮುಚ್ಚಲಾಗಿರುತ್ತದೆ
manhole
ಆಂಟಿಟಾಕ್ಸಿನ್
(ವೈ) ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ಉತ್ಪಾದಿಸುವ ಜೈವ ವಿಷಗಳನ್ನು ತಟಸ್ಥೀಕರಿಸಬಲ್ಲ ಪ್ರತಿಕಾಯ. ಉದಾ: ಟಿಟನಸ್ ವಿಷಹಾರಿಗಳು, ಡಿಫ್ತೀರಿಯ ವಿಷಹಾರಿಗಳು. ಪ್ರತಿವಿಷ. ವಿಷನಿವಾರಕ
antitoxin
ಆಂಟಿಲಾಗರಿತಮ್
(ಗ) ದತ್ತ ಸಂಖ್ಯೆ ೫ ಆಗಿರಲಿ; ಇದರ ಲಾಗರಿತಮ್ (ಅಂದರೆ log10 ೫)=೦.೬೯೯; ಈಗ ೦.೬೯೯ರ ಆಂಟಿಲಾಗರಿತಮ್ (ಅಂದರೆ antilog10 ೦.೬೯೯)=೫
antilogarithm
ಆಂಥೊಜೋವ
(ಪ್ರಾ) ಕುಟುಕು ಕಣವಂತಗಳ (ಸೀಲೆಂಟಿರೇಟಾ) ಒಂದು ಮುಖ್ಯ ವರ್ಗ. ಇದರಲ್ಲಿ ಪ್ರಾಣಿಗಳು ಪಾಲಿಪ್ ಅವಸ್ಥೆಯಲ್ಲಿಯೇ ಇರುತ್ತವೆ. ಸಮುದ್ರದ ಆನಿಮನಿ, ಪೆನ್, ಬೀಸಣಿಗೆ ಹಾಗೂ ಹವಳದ ಹುಳುಗಳು ಈ ವರ್ಗಕ್ಕೆ ಸೇರಿವೆ. ಆಂಥೊಜೋವವನ್ನು ಅಲ್ ಸಿಯೊನೇರಿಯ ಹಾಗೂ ಜುಆಂಥೇರಿಯ ಎಂದು ಎರಡು ವಿಶಾಲ ವಿಭಾಗಗಳಾಗಿ ವಿಂಗಡಿಸಲಾಗಿದೆ
anthozoa
ಆಂಥ್ರಕ್ವಿನೋನ್
(ರ) ಡೈಫೆನಿಲಿನ್ ಡೈಕ್‌ಟೋನ್. C6H4 (CO)2 C6H4. ಸುಲಭವಾಗಿ ಉತ್ಪತನಿಸುವ ಹಳದಿ ಸೂಜಿಗಳು ಅಥವಾ ಅಶ್ರಗಗಳು. ಡೈಕಿಟೋನ್ ರಂಗುಗಳ ತಯಾರಿಕೆಯಲ್ಲಿ ಮಧ್ಯವರ್ತಿಯಾಗಿ ಬಳಕೆ
anthraquinon
ಆಂಥ್ರಸೀನ್
(ರ) C14H10 ನಿರ್ವರ್ಣ ನೀಲ ಪ್ರತಿದೀಪ್ತಶೀಲ ಸ್ಫಟಿಕಗಳು; ದ್ರಬಿಂ ೨೧೮0 ಸೆ, ಕುಬಿಂ ೩೪೦0 ಸೆ, ಸಾಸಾಂ ೧.೨೫; ವರ್ಣದ್ರವ್ಯಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾ ಸಾಮಗ್ರಿ; ಕಲ್ಲಿದ್ದಲ ಡಾಂಬರನ್ನು ೨೭೦0 ಸೆ.ಗಿಂತ ಮೇಲಿನ ಉಷ್ಣತೆ ಯಲ್ಲಿ ಕುದಿಸುವಾಗ ದೊರೆಯುವ ಅಂಶ
anthracene
ಆಂಥ್ರಸೈಟ್
(ಭೂವಿ) ಬಲು ಗಡಸಾದ ಉತ್ಕೃಷ್ಟ ಕಲ್ಲಿದ್ದಲು. ಹೆಚ್ಚು ಕಡಿಮೆ ಪೂರ್ತಿ ಕಾರ್ಬನ್ ಪದಾರ್ಥವೇ. ಲೋಹದಂತೆ ಹೊಳಪಾಗಿದ್ದು ಹೊಗೆ ಇಲ್ಲದೆ ಉರಿದು ಅಧಿಕ ಶಾಖ ಕೊಡುತ್ತದೆ