logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಹರಿತವಸ್ತು
(ರ) ಯಾವುದೇ ಪದಾರ್ಥವನ್ನು ಲೀನಕಾರಿಗಳಿಂದ ಸಂಸ್ಕರಿಸಿ, ಬಾಷ್ಪೀಕರಿಸಿ ಪಡೆದ ಜಿಗುಟು ಅಥವಾ ಸಾಂದ್ರ ದ್ರವ್ಯ
extract

ಆಹಾರ
(ಪ್ರಾ) ಅನ್ನ, ಪೋಷಕ, ಉಣಿಸು, ಜೀವಾಧಾರ
aliment

ಆಹಾರ
(ವೈ) ದೇಹದ ಪೋಷಣೆಗೆ ಮತ್ತು ಬೆಳವಣಿಗೆಗೆ ಅವಶ್ಯವಾದ, ಜೀರ್ಣವಾಗುವಂಥ ಖಾದ್ಯ ವಸ್ತು
food

ಆಹಾರ ಕುಹರ
(ಪ್ರಾ) ಕೆಲವು ಆದಿಜೀವಿಗಳ ಕೋಶ ದ್ರವದಲ್ಲಿ ಆಹಾರ ಕಣದ ಸುತ್ತ ಇರುವ, ತರಲಯುಕ್ತ ಸ್ಥಳಾವಕಾಶ
food vacuola

ಆಹಾರ ಜಾಲ
(ಪವಿ) ಅಂತರ ಸಂಬಂಧಿತ ಆಹಾರ ಸರಣಿಗಳ ಮಾಲೆಯಿಂದ ರೂಪಿತವಾದ ಒಂದಕ್ಕೊಂದು ಹೆಣೆದುಕೊಂಡ ವಿನ್ಯಾಸ
food web

ಆಹಾರ ನಂಜು
(ಪವಿ) ರೋಗಕಾರಕ ಬ್ಯಾಕ್ಟೀರಿಯಗಳಿಂದ ಮತ್ತು ಅವು ಉತ್ಪಾದಿಸುವ ವಿಷದಿಂದ ಕಲುಷಿತ ಆಹಾರ ಸೇವನೆಯಿಂದ ಉಂಟಾದ ತೀವ್ರ ಅಸ್ವಸ್ಥತೆ
food poisioning

ಆಹಾರ ಪಿರಮಿಡ್
(ಪವಿ) ಆಹಾರ ಸರಪಣಿಯಲ್ಲಿ ವಿವಿಧ ಪೋಷಣಾಸ್ತರಗಳ ನಡುವೆ ಇರುವ ಸಂಬಂಧದ ಚಿತ್ರಣ
pyramid of food

ಆಹಾರ ಮಾಂದ್ಯ
(ಮ) ದೇಹತೂಕ ವೃದ್ಧಿ ಆದೀತೆಂಬ ಭಯದಿಂದ ಆಹಾರಾಪೇಕ್ಷೆಯನ್ನು ಸದಾ ಹತ್ತಿಕ್ಕಿ
anorexia nervosa

ಆಹಾರವಿಜ್ಞಾನ
(ಸಾ) ವ್ಯಕ್ತಿಯ ಆರೋಗ್ಯಕ್ಕೆ ಪೋಷಕವಾಗುವಂಥ ಅಥವಾ ಮಾರಕವಾಗುವಂಥ ಆಹಾರ ಪದಾರ್ಥಗಳ ವೈಜ್ಞಾನಿಕ ಅಧ್ಯಯನ
food science

ಆಹಾರ ಸಂರಕ್ಷಣೆ
(ತಂ) ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ವಿಘಟನೆಯನ್ನೂ ಹಾನಿಕಾರಕ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನೂ ತಡೆಯುವುದು. ಸಾಮಾನ್ಯವಾಗಿ ಭದ್ರವಾಗಿ ಮುಚ್ಚಿದ ಪಾತ್ರೆಗಳೊಳಗೆ ಆಹಾರ ಪದಾರ್ಥವನ್ನು ಕಾಸಿ ನಿರ್ಜೀವೀಕರಿಸುವ ಮೂಲಕ (ಅಂದರೆ ಬ್ಯಾಕ್ಟೀರಿಯಾಗಳ ನಿರ್ಮೂಲನ, ಕ್ಯಾನಿಂಗ್) ಅಥವಾ ಒಣಗಿಸುವ, ಶೀತಲಿಸುವ, ಧೂಮಿಸುವ, ಪಾಕಕ್ಕೆ ಹಾಕುವ ಮುಂತಾದ ವಿಧಾನಗಳಿಂದ ಬ್ಯಾಕ್ಟೀರಿಯಗಳ ಬೆಳವಣಿಗೆಗೆ ಅನುಕೂಲವಲ್ಲದ ಪರಿಸ್ಥಿತಿಗಳನ್ನು ಸೃಷ್ಟಿಸುವುದರ ಮೂಲಕ ಇದನ್ನು ಸಾಧಿಸಲಾಗುತ್ತದೆ
food preservation


logo