logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ongoingness
ನಾಮವಾಚಕ
  • ಅಸ್ತಿತ್ವದಲ್ಲಿ, ಚಾಲ್ತಿಯಲ್ಲಿ ಯಾ ಚಾಲುವಿನಲ್ಲಿ–ಇರುವಿಕೆ.
  • ನಡೆಯುತ್ತಿರುವಿಕೆ; ಕೆಲಸ ಮಾಡುತ್ತಿರುವಿಕೆ.
  • ಮುಂದುವರಿಯುತ್ತಿರುವಿಕೆ; ಪ್ರಗತಿಯಲ್ಲಿರುವಿಕೆ.

  • onion
    ನಾಮವಾಚಕ ಪದಗುಚ್ಛ
  • ನೀರುಳ್ಳಿ ಯಾ ಈರುಳ್ಳಿ ಗಿಡ.
  • ನೀರುಳ್ಳಿ ಯಾ ಈರುಳ್ಳಿ (ಗೆಡ್ಡೆ).

  • onion dome
    ನಾಮವಾಚಕ
    ಈರುಳ್ಳಿ ಯಾ ನೀರುಳ್ಳಿ ಗುಮ್ಮಟ; ರಷ್ಯಾದ ಚರ್ಚು ಮೊದಲಾದವುಗಳಲ್ಲಿ ಕಂಡುಬರುವ ಈರುಳ್ಳಿ ಗೆಡ್ಡೆಯಾಕಾರದ ಗುಮ್ಮಟ.

    onion-shell
    ನಾಮವಾಚಕ
    ಈರುಳ್ಳಿ ಸಿಂಪಿ; ತೆಳು ಚಿಪ್ಪುಳ್ಳ ಮೃದ್ವಂಗಿ ಜಾತಿಯ ಪ್ರಾಣಿಗಳು.

    onion-skin
    ನಾಮವಾಚಕ
  • ಈರುಳ್ಳಿ ಸಿಪ್ಪೆ.
  • ನುಣಪಾದ, ಅರೆಪಾರದರ್ಶಕ ತೆಳು ಕಾಗದ.

  • onion-twitch
    ನಾಮವಾಚಕ
    ಈರುಳ್ಳಿ ಗೋಧಿ; ಕಾಡು ತೋಕೆಯ, ಗೋಧಿ ಜಾತಿ ಯಾ ಆ ಜಾತಿಯ ಗಿಡ.

    oniony
    ಗುಣವಾಚಕ
    ಈರುಳ್ಳಿಯಂಥ; ಈರುಳ್ಳಿ ವಾಸನೆಯ ಯಾ ರುಚಿಯ: an oniony breath ಈರುಳ್ಳಿ ವಾಸನೆಯ ಉಸಿರು.

    only
    ಕ್ರಿಯಾವಿಶೇಷಣ ಪದಗುಚ್ಛ
  • ಕೇವಲ; ಮಾತ್ರ; ಅಷ್ಟೇ; ಬರಿದೆ; ಸುಮ್ಮನೆ: only you can guess ನೀನೊಬ್ಬನೇ, ನೀನೊಬ್ಬ ಮಾತ್ರ, ಅದನ್ನು ಊಹಿಸಬಲ್ಲೆ. I only thought I would do it ಅದನ್ನು ಮಾಡಬೇಕೆಂದು ನಾನು ಸುಮ್ಮನೆ, ಬರಿದೆ ಯೋಚಿಸಿದೆ, ಅಷ್ಟೆ. I not only heard it but I saw it ನಾನದನ್ನು ಕೇಳಿದ್ದಷ್ಟೇ ಅಲ್ಲ, ನೋಡಿಯೂ ನೋಡಿದೆ. will only make matters worse ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ, ಅಷ್ಟೆ. needed six runs only ಕೇವಲ ಆರು ರನ್ನುಗಳು ಬೇಕಿತ್ತು. is only a child ಕೇವಲ ಮಗು.
  • ಆಗತಾನೇ; ಆಗಷ್ಟೇ; ಆಗ ಮಾತ್ರ; ಹಿಂದೆ ಆಗಿರದೆ: saw them only yesterday ಅವರನ್ನು ಕೇವಲ ನಿನ್ನೆ ನೋಡಿದೆ, ನಿನ್ನೆಯಷ್ಟೇ ನೋಡಿದೆ (ಹಿಂದೆ ಅಲ್ಲ).
  • ಅಲ್ಲಿಯವರೆಗೆ, ಮುಂಚೆ–ಅಲ್ಲದೆ; -ನೇ; -ವೇ: arrives only on Tuesday ಮಂಗಳವಾರವೇ ಬರುವುದು (ಅದಕ್ಕೆ ಮುಂಚೆ ಅಲ್ಲ).
  • ಕೇವಲ; ಅದಕ್ಕಿಂತ ಹೆಚ್ಚಿನ ಪ್ರಯೋಜನವಿಲ್ಲದೆ: hurried home only to find her gone ಅವಳು ಹೊರಟು ಹೋಗಿದ್ದನ್ನು ಕಂಡುಕೊಳ್ಳಲಷ್ಟೇ ಮನಗೆ ಬೇಗ ಹೋಗಿದ್ದಾಯಿತು.

  • only
    ಗುಣವಾಚಕ
  • ಒಬ್ಬನೇ; ಒಬ್ಬಳೇ; ಒಂದೇ; ಏಕಮಾತ್ರ; ಏಕೈಕ: only way is to die ಸಾಯುವುದೊಂದೇ ದಾರಿ. the only child of his parents ಅವನ ತಂದೆತಾಯಿಗಳ ಒಬ್ಬನೇ ಮಗ, ಏಕಮಾತ್ರ ಪುತ್ರ. my one and only hope ನನ್ನ ಒಂದೇ ಒಂದು ನಿರೀಕ್ಷೆ, ಆಶೆ.
  • ಅತ್ಯುತ್ತಮ ಯಾ ಗಮನಾರ್ಹವಾದ ಒಂದೇ ಒಂದು: motley is the only wear ವಿದೂಷಕನ ಬಣ್ಣ ಬಣ್ಣದ ಉಡುಪೊಂದೇ ಸರಿಯಾದದ್ದು. gliding is the only sport ಗ್ಲೈಡಿಂಗ್‍ ಒಂದೇ ಅತ್ಯತ್ತಮ ಆಟ.

  • only
    ಸಂಯೋಜಕಾವ್ಯಯ
    (ಆಡುಮಾತು)
  • ಅದೊಂದು ಬಿಟ್ಟರೆ; ಹಾಗೆ ಮಾತ್ರ ಅಲ್ಲದಿದ್ದರೆ; ಅದೊಂದು ಇಲ್ಲದಿದ್ದರೆ: he does well, only that he is nervous at the start ಅವನು ಚೆನ್ನಾಗಿಯೇ ಮಾಡುತ್ತಾನೆ, ಆದರೆ ಪ್ರಾರಂಭದಲ್ಲಿ ಸ್ವಲ್ಪ ಅಳುಕುತ್ತಾನೆ.
  • ಆದರೆ; ಆದರೆ ಮಾತ್ರ; ಅಂದರೆ ಮಾತ್ರ: he makes good resolutions, only he never keeps them ಅವನು ಒಳ್ಳೆಯ ಸಂಕಲ್ಪಗಳನ್ನೇನೋ ಮಾಡುತ್ತಾನೆ, ಆದರೆ ಮಾತ್ರ ಅವುಗಳನ್ನು ನೆರವೇರಿಸುವುದಿಲ್ಲ.


  • logo