logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inanely
ಕ್ರಿಯಾವಿಶೇಷಣ
ಶುದ್ಧ ಪೊಳ್ಳಾಗಿ; ಅರ್ಥಶೂನ್ಯವಾಗಿ; ಹೆಡ್ಡುಹೆಡ್ಡಾಗಿ.

inanga
ನಾಮವಾಚಕ
(ನ್ಯೂಸಿಲಂಡ್‍) ಗ್ಲ್ಯಾಕ್ಸಿಡೇ ವಂಶದ ಸಿಹಿನೀರು ಈನು.

inanimate
ಗುಣವಾಚಕ
  • ಪ್ರಾಣರಹಿತ; ನಿಷ್ಪ್ರಾಣ.
  • ಜೀವವಿಲ್ಲದ; ನಿರ್ಜೀವ; ಅಜೀವ; ಅಚೇತನ; ಜಡ: inanimate nature ಅಚೇತನ ಪ್ರಕೃತಿ; ಜಡಪ್ರಕೃತಿ.
  • ಉತ್ಸಾಹಶೂನ್ಯ; ಗೆಲುವಿಲ್ಲದ; ಲವಲವಿಕೆಯಿಲ್ಲದ: ಜಡ: her inanimate movement on the stage ರಂಗಸ್ಥಲದಲ್ಲಿ ಲವಲವಿಕೆಯಿಲ್ಲದ ಅವಳ ಓಡಾಟ.

  • inanimate nature
    ನಾಮವಾಚಕ
    ನಿರ್ಜೀವ ನಿಸರ್ಗ; ಅಜೀವ ಪ್ರಕೃತಿ; ಜಡ ಪ್ರಕೃತಿ; ಪ್ರಾಣಿಜಗತ್ತನ್ನು ಬಿಟ್ಟು ಉಳಿದೆಲ್ಲ ವಸ್ತುಗಳು.

    inanimately
    ಕ್ರಿಯಾವಿಶೇಷಣ
    ಉತ್ಸಾಹಶೂನ್ಯವಾಗಿ; ಗೆಲುವಿಲ್ಲದೆ; ಲವಲವಿಕೆಯಿಲ್ಲದೆ; ಜಡತೆಯಿಂದ.

    inanimation
    ನಾಮವಾಚಕ
    ಉತ್ಸಾಹಶೂನ್ಯತೆ; ಗೆಲುವಿಲ್ಲದಿರುವಿಕೆ; ನಿರುತ್ಸಾಹ; ಲವಲವಿಕೆಯಿಲ್ಲದಿರುವಿಕೆ; ಜಡತೆ.

    inanition
    ನಾಮವಾಚಕ
  • (ಮುಖ್ಯವಾಗಿ ಪುಷ್ಟಿಕರವಾದ ಆಹಾರವಿಲ್ಲದಿದ್ದರಿಂದ ಉಂಟಾಗುವ) ನಿಶ್ಯಕ್ತಿ; ನಿತ್ರಾಣ; ಶೂನ್ಯಭಾವ; ಬರಿದಾದ ಸ್ಥಿತಿ.
  • (ಬೌದ್ಧಿಕ ಯಾ ನೈತಿಕವಾದ) ಕ್ಲೈಬ್ಯ; ದೌರ್ಬಲ್ಯ; ಸತ್ತ್ವಶೂನ್ಯತೆ: the inanition of a decadent society ಅವನತಿ ಸ್ಥಿತಿಯಲ್ಲಿರುವ ಸಮಾಜದ ಸತ್ತ್ವಶೂನ್ಯತೆ.

  • inanity
    ನಾಮವಾಚಕ
    ಪೊಳ್ಳುತನ; ಅರ್ಥಶೂನ್ಯತೆ; ದಡ್ಡತನ; ಹೆಡ್ಡತನ.

    inappeasable
    ಗುಣವಾಚಕ
    ತಣಿಸಲಾಗದ; ತೃಪ್ತಿಪಡಿಸಲಾಗದ; ಸಮಾಧಾನಪಡಿಸಲಾಗದ.

    inappellable
    ಗುಣವಾಚಕ
    ಅಪೀಲಿಲ್ಲದ; ಮೇಲ್ಮನವಿಗೆ, ಅಪೀಲಿಗೆ – ಅವಕಾಶವಿಲ್ಲದ, ಎಡೆಯಿಲ್ಲದ; ತೀರ್ಪಿನ ವಿರುದ್ಧ ಮೇಲ್ಮನವಿ ಮಾಡಿಕೊಳ್ಳಲಾಗದ.


    logo