logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

addle pate
ನಾಮವಾಚಕ
= addle-head.

addle pated
ಗುಣವಾಚಕ
= addle-headed.

addle-brained
ಗುಣವಾಚಕ
ಅಸ್ತವ್ಯಸ್ತ ಬುದ್ಧಿಯ; ಗೊಂದಲಮಯ ಬುದ್ಧಿಯ; ತಲೆ ಕೆಟ್ಟ; ಬುದ್ಧಿಕೆಟ್ಟ.

addle-head
ನಾಮವಾಚಕ
ತಲೆಕೆಟ್ಟವನು; ಗೊಂದಲದ ತಲೆಯವನು.

addle-headed
ಗುಣವಾಚಕ
ಗೊಂದಲ ತುಂಬಿದ ತಲೆಯ; ಅಸ್ತವ್ಯಸ್ತ ಬುದ್ಧಿಯ.

addled
ಗುಣವಾಚಕ
  • ಕೆಟ್ಟುಹೋದ; ಕೊಳೆತುಹೋದ; ಮರಿಯಾಗದ.
  • = 1addle(3).

  • address
    ಸಕರ್ಮಕ ಕ್ರಿಯಾಪದ ಪದಗುಚ್ಛ
  • (ಅರ್ಜಿ, ಅಭಿಪ್ರಾಯ, ಟೀಕೆ, ಪ್ರತಿಭಟನೆ, ಮೊದಲಾದವನ್ನು ಮುಖತಃ ಯಾ ಲಿಖಿತವಾಗಿ ಸಂಬಂಧಪಟ್ಟ ವ್ಯಕ್ತಿಗೆ) ತಿಳಿಸು; ಹೇಳು: address remarks to ಟೀಕೆಗಳನ್ನು (ಸಂಬಂಧಪಟ್ಟ ವ್ಯಕ್ತಿಗೆ ನೇರವಾಗಿ ಯಾ ಪತ್ರದಲ್ಲಿ) ತಿಳಿಸು. address your complaint to him ನಿನ್ನ ದೂರನ್ನು ಅವನಿಗೆ ಹೇಳು.
  • (ಪತ್ರ, ಪಾರ್ಸಲ್‍, ಮೊದಲಾದವುಗಳ ಮೇಲೆ) ವಿಳಾಸ ಬರೆ.
  • (ವ್ಯಕ್ತಿಯನ್ನು, ಸಭೆಯನ್ನು ಉದ್ದೇಶಿಸಿ) ಹೇಳು; ಮಾತನಾಡು; (ಮುಖ್ಯವಾಗಿ) ಭಾಷಣ ಮಾಡು.
  • (ವ್ಯಕ್ತಿಯನ್ನು, ಸಭೆಯನ್ನು ಉದ್ದೇಶಿಸಿ) ಬರೆ.
  • (ಹೆಸರು, ಅಧಿಕಾರನಾಮ, ಬಿರುದು, ಮೊದಲಾದವುಗಳಿಂದ ವ್ಯಕ್ತಿಯನ್ನು) ಸಂಬೋಧಿಸು; ಕರೆ.
  • (ಅಮೆರಿಕನ್‍ ಪ್ರಯೋಗ) ಪ್ರಣಯ ಯಾಚಿಸು; ಒಲವು ಬೇಡು: she accepted him when he addressed her ಆತನು ಪ್ರಣಯ ಯಾಚಿಸಿದಾಗ ಆಕೆ ಆತನನ್ನು ವರಿಸಿದಳು.
  • (ಗಾಲ್‍ ಆಟದಲ್ಲಿ ಚೆಂಡಿನ ಬೆನ್ನಿಗೆ ಕ್ಲಬ್ಬನ್ನು ಸರಿಯಾಗಿ ಹೊಂದಿಸಿ) ಗುರಿಯಿಟ್ಟು ಹೊಡೆಯಲು ಸಿದ್ಧನಾಗು.

  • address
    ನಾಮವಾಚಕ
  • (ಕಾಗದದ ಮೇಲೆ ಬರೆದ) ವಿಳಾಸ; ಪತ್ತೆ; ಅಡ್ರೆಸ್ಸು:
    1. ವ್ಯಕ್ತಿ ಯಾ ಸಂಸ್ಥೆಗೆ ಕಾಗದ ಮೊದಲಾದವನ್ನು ಕಳುಹಿಸಬೇಕಾದ ಸ್ಥಳದ ಹೆಸರು.
    2. (ವ್ಯಕ್ತಿ) ವಾಸ ಮಾಡುವ ಸ್ಥಳ; ನಿವಾಸ.
  • (ಸಭೆಯನ್ನು ಉದ್ದೇಶಿಸಿ ಮಾಡಿದ) ಭಾಷಣ; ಉಪನ್ಯಾಸ.
  • (ಪ್ರಾಚೀನ ಪ್ರಯೋಗ) ಮಾತುಗಾರಿಕೆ; ಮಾತಿನ ರೀತಿ: a man of pleasing address ಸಂತೋಷವನ್ನುಂಟುಮಾಡುವ ಮಾತುಗಾರಿಕೆಯವ.
  • ಚಾಕಚಕ್ಯತೆ; ಜಾಣ್ಮೆ; ಸಿದ್ಧತೆ; ಕೌಶಲ; ಚಾತುರ್ಯ: handle a task with address ಯಾವುದೇ ಕೆಲಸವನ್ನು ಚಾಕಚಕ್ಯತೆಯಿಂದ ನಿರ್ವಹಿಸು.
  • ಬಿನ್ನವತ್ತಳೆ; ಬಿನ್ನಹ.
  • ಮಾನಪತ್ರ; ಅಭಿನಂದನ ಪತ್ರ.
  • (ಬಹುವಚನ) ಪ್ರಣಯ ಯಾಚನೆ; ಒಲವು ಬೇಡಿಕೆ; ಅನುನಯ: pay one’s address to (ಒಬ್ಬಳ) ಪ್ರಣಯ ಯಾಚಿಸು.
  • ಗಣಕಯಂತ್ರದ ವಿಳಾಸ; ಗಣಕಯಂತ್ರದಲ್ಲಿ ಮಾಹಿತಿಯಿರುವ ಸ್ಥಾನವನ್ನು ಸೂಚಿಸುವ ಸಂಖ್ಯೆ, ಸಂಕೇತ, ಮೊದಲಾದವು.
  • ಸಂಬೋಧನೆ: form of address ಸಂಬೋಧನ ಕ್ರಮ, ಒಕ್ಕಣೆ.

  • addressee
    ನಾಮವಾಚಕ
    ವಿಳಾಸದಾರ.

    Addressograph
    ನಾಮವಾಚಕ
    (a Addressograph) ವಿಳಾಸಲೇಖ; ವಿಳಾಸಮುದ್ರಣಯಂತ್ರ; ಲಕೋಟೆಗಳ ಮೇಲೆ ವಿಳಾಸವನ್ನು ಮುದ್ರಿಸುವ ಯಂತ್ರ.


    logo