logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oneiromancy
ನಾಮವಾಚಕ
ಕನಸುಕಣಿ; ಸ್ವಪ್ನ ಭವಿಷ್ಯ; ಸ್ವಪ್ನಗಳಿಂದ ಭವಿಷ್ಯ ಹೇಳುವುದು, ಊಹಿಸುವುದು.

oneness
ನಾಮವಾಚಕ
  • ಒಂದುತನ; ಒಂದಾಗಿರುವಿಕೆ; ಏಕತ್ವ.
  • ಒಂದೇ ಆಗಿರುವಿಕೆ; ಅದ್ವಿತೀಯತೆ; ಅಸದೃಶತೆ; ಏಕಮಾತ್ರವಾಗಿರುವಿಕೆ.
  • ಐಕಮತ್ಯ; ಏಕಾಭಿಪ್ರಾಯ.
  • ಅಭೇದ; ಬೇರೆಯಲ್ಲದಿರುವುದು.
  • ಏಕತೆ; ಏಕಾತ್ಮತೆ; ಏಕರೂಪತೆ; ಬದಲಾವಣೆಯಿಲ್ಲದಿರುವಿಕೆ.
  • ಪೂರ್ಣತೆ; ಸಮಗ್ರತೆ.
  • ಏಕತೆ; ಐಕ್ಯ; ಏಕೀಭವನ.
  • ಹೊಂದಿಕೆ; ಸಾಮರಸ್ಯ; ಸಾಂಗತ್ಯ; ಸಮನ್ವಯ.
  • ತಾದಾತ್ಮ್ಯ; ಅಭೇದ.
  • ವೈಶಿಷ್ಟ್ಯ; ವೈಲಕ್ಷಣ್ಯ.

  • oner
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
  • ಒಂದು ಪೌಂಡು (ಹಣ).
  • ಅಸಾಧಾರಣ, ಅದ್ವಿತೀಯ ವ್ಯಕ್ತಿ ಯಾ ವಸ್ತು; ಲೋಕೋತ್ತರ (ಪುರುಷ, ವಸ್ತು): a oner at (ಅಶಿಷ್ಟ) (ಯಾವುದೇ ವಿಷಯದಲ್ಲಿ) ನಿಪುಣ, ಪ್ರವೀಣ, ಚತುರ, ಪಟು.
  • ಭಾರೀ–ಹೊಡೆತ, ಪೆಟ್ಟು, ಏಟು: gave him a oner ಕೊಟ್ಟೆ ಅವನಿಗೊಂದು; ಒಂದು ಭಾರೀ ಹೊಡೆತ ಕೊಟ್ಟೆ ಅವನಿಗೆ.
  • ಭಾರೀ ಸುಳ್ಳು.
  • (ಆಡುಮಾತು) (ಮುಖ್ಯವಾಗಿ ಕ್ರಿಕೆಟ್‍ನಲ್ಲಿ) ಒಂದು ರನ್ನಿನ ಹೊಡೆತ.

  • onerous
    ಗುಣವಾಚಕ
  • ಹೊರೆಯಾದ; ಭಾರವಾದ; ಗುರುತರ; ಶ್ರಮಸಾಧ್ಯ; ಕಷ್ಟಸಾಧ್ಯ; ದುರ್ಭರ.
  • (ನ್ಯಾಯಶಾಸ್ತ್ರ) ತುಂಬ ಹೊಣೆಗಾರಿಕೆಯ; ಗುರುತರ ಕರ್ತವ್ಯಭಾರ ಉಳ್ಳ: onerous property ತುಂಬ ಹೊಣೆಗಾರಿಕೆಯ ಆಸ್ತಿ.

  • onerously
    ಕ್ರಿಯಾವಿಶೇಷಣ
    ತುಂಬ–ಹೊಣೆಗಾರಿಕೆಯಿಂದ, ಜವಾವ್ದಾರಿಯಿಂದ.

    onerousness
    ನಾಮವಾಚಕ
    ಗುರುತರವಾದ ಕರ್ತವ್ಯಭಾರದಿಂದ ಕೂಡಿರುವಿಕೆ; ಭಾರೀ ಜವಾಬ್ದಾರಿ ಹೊಂದಿರುವಿಕೆ.

    oneself
    ಸರ್ವನಾಮ
    one ಎಂಬ ಅನಿರ್ದೇಶಕ ಸರ್ವನಾಮದ
  • (ಆತ್ಮಾರ್ಥಕ ರೂಪ) ತನ್ನನ್ನೆ; ತನಗೇ: one must not deceive oneself ಯಾವನೇ ಆಗಲಿ ತನ್ನನ್ನೇ ವಂಚಿಸಿಕೊಳ್ಳಬಾರದು. one must not grab everything for oneself ಯಾರೇ ಆಗಲಿ ಎಲ್ಲವನ್ನೂ ತನಗೇ ದೋಚಿಕೊಳ್ಳಬಾರದು.
  • (ಅವಧಾರಣಾರ್ಥಕ ರೂಪ) ತಾನೇ; ತಾನಾಗಿಯೇ; ತಾನೊಬ್ಬನೇ(ಳೇ): one must do one’s work oneself ಯಾರೇ ಆಗಲಿ ತನ್ನ ಸ್ವಂತ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು. must do one’s portion all by oneself ಯಾರೇ ಆಗಲಿ ತನ್ನ ಪಾಲಿನ ಕೆಲಸವನ್ನು ತಾನೇ ಮಾಡಬೇಕು.

  • onflow
    ನಾಮವಾಚಕ
    ಮುಂಬರಿವು; ಪುರಃ ಪ್ರವಾಹ; ಮುಂದಕ್ಕೆ ಹರಿಯುವುದು.

    onglaze
    ಗುಣವಾಚಕ
    (ವರ್ಣಚಿತ್ರಣ ಮೊದಲಾದವುಗಳ ವಿಷಯದಲ್ಲಿ) ಮೆರುಗು ತಲ ಯಾ ಹೊಳಪು ಮೇಲ್ಮೈ ಮೇಲೆ ಮಾಡಿದ.

    ongoing
    ಗುಣವಾಚಕ
  • ಅಸ್ತಿತ್ವದಲ್ಲಿ ಯಾ ಚಾಲ್ತಿಯಲ್ಲಿ ಇರುವ.
  • ನಡೆಯುತ್ತಿರುವ; ಕೆಲಸ ಮಾಡುತ್ತಿರುವ.
  • ಮುಂದುವರಿಯುತ್ತಿರುವ; ಪ್ರಗತಿಯಲ್ಲಿರುವ: ongoing discussions ಮುಂದುವರಿಯುತ್ತಿರುವ ಚರ್ಚೆಗಳು.


  • logo