logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lazaret
ನಾಮವಾಚಕ
  • ಬಡರೋಗಿಗಳ (ಮುಖ್ಯವಾಗಿ ಕುಷ್ಠರೋಗಿಗಳ) ಆಸ್ಪತ್ರೆ.
  • ಸೋಂಕು(ರೋಗಿ) – ಮನೆ ಯಾ ಹಡಗು; ಸಾಂಕ್ರಾಮಿಕ ರೋಗಗಳಿಂದ ಸಂಪರ್ಕ ನಿಷೇಧಿಸುವ ಕಟ್ಟಡ ಯಾ ಹಡಗು; ಸೋಂಕು ಜಾಡ್ಯಗಳನ್ನು ಹರಡಬಹುದಾದವರನ್ನು ಪ್ರತ್ಯೇಕವಾಗಿಟ್ಟಿರುವ ಕಟ್ಟಡ ಯಾ ಹಡಗು.
  • (ನೌಕೆಯ) ಕೋಷ್ಠ (ಭಾಗ); ಉಗ್ರಾಣ(ಸ್ಥಳ); ಸಾಮಾನು ವಿಭಾಗ; ಸಾಮಾನು ಸರಂಜಾಮುಗಳನ್ನಿಡಲು ಬಳಸುವ, ಹಡಗಿನ ಅಟ್ಟಗಳ ಮಧ್ಯದಲ್ಲಿರುವ ಹಡಗಿನ ಹಿಂಭಾಗದ ಜಾಗ.

  • lazaretto
    ನಾಮವಾಚಕ
    = lazaret.

    laze
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಸೋಮಾರಿಯಾಗಿ ಕಾಲತಳ್ಳು; ಮೈಗಳ್ಳನಾಗಿ ಕಾಲಕಳೆ; ಕಾಲಹರಣ ಮಾಡು. (ಆಡುಮಾತು) ಸೋಮಾರಿಯಾಗಿರು; ಮೈಗಳ್ಳನಾಗಿರು; ಕೆಲಸಗಳ್ಳನಾಗಿರು; ಅಲಸಿಯಾಗಿರು.

    laze
    ನಾಮವಾಚಕ
    (ಆಡುಮಾತು) ಸೋಮಾರಿತನದ – ಕಾಲ, ಅವಧಿ; ಸೋಮಾರಿಯಾಗಿ ಕಳೆದ ಕಾಲ.

    lazily
    ಕ್ರಿಯಾವಿಶೇಷಣ
    ಸೋಮಾರಿಯಾಗಿ; ಮೈಗಳ್ಳನಾಗಿ; ಆಲಸ್ಯದಿಂದ.

    laziness
    ನಾಮವಾಚಕ
    ಸೋಮಾರಿತನ; ಮೈಗಳ್ಳತನ; ಆಲಸ್ಯ.

    lazuli
    ನಾಮವಾಚಕ
    = lapis lazuli.

    lazy
    ಗುಣವಾಚಕ
  • ಮೈಗಳ್ಳನಾದ; ಕೆಲಸಗಳ್ಳನಾದ; ಸೋಮಾರಿಯಾದ; ದುಡಿಯಲು ಮನಸ್ಸಿಲ್ಲದ.
  • ಸೋಮಾರಿತನವನ್ನುಂಟುಮಾಡುವ; ಅಲಸತೆಯನ್ನು ಹುಟ್ಟಿಸುವ.
  • ಸೋಮಾರಿಗೆ – ಅರ್ಹವಾದ, ಸರಿಯಾದ; ಅಲಸಿಗನಿಗೆ ತಕ್ಕ.
  • (ನದಿಯ ವಿಷಯದಲ್ಲಿ) ಮಂದಗತಿಯ; ನಿಧಾನವಾಗಿ ಚಲಿಸುವ.

  • lazy bed
    ನಾಮವಾಚಕ
    ಆಲೂಗೆಡ್ಡೆ ಪಾತಿ; ಇಕ್ಕೆಡೆಯಲ್ಲೂ ಕಾಲುವೆಯಿರುವ ಆರಡಿ ಅಗಲದ ಆಲೂಗೆಡ್ಡೆಯ ಪಾತಿ.

    lazy pinion
    ನಾಮವಾಚಕ
    ಚಲನವಾಹಕ ಚಕ್ರ; ಎರಡು ಹಲ್ಲುಚಕ್ರಗಳ ಯಾ ಎರಡು ಚಕ್ರಗಳ ನಡುವೆ ಚಲನೆಯನ್ನು ಸಾಗಿಸುವ ಹಲ್ಲುಚಕ್ರ.


    logo