logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrier cream
ನಾಮವಾಚಕ
ತಡೆ ಮುಲಾಮು; ಚರ್ಮ ರೋಗಗಳನ್ನು ತಡೆಯಲು ಬಳಸುವ ಪ್ರಸಾಧನ ಮುಲಾಮು.

barrier reef
ನಾಮವಾಚಕ
(ಸಮುದ್ರದ ದಂಡೆಗೆ ಸುಮಾರಾಗಿ ಸಮಾನಾಂತರದಲ್ಲಿ ನೀರಿನ ನಡುವೆ ಇರುವ) ಹವಳದ – ದಿಣ್ಣೆ, ದಿಬ್ಬ, ದಂಡೆ, ಕಟ್ಟೆ.

barrier-gate
ನಾಮವಾಚಕ
ತಡೆಬಾಗಿಲು; ಹೆಬ್ಬಾಗಿಲು.

barrier-treaty
ನಾಮವಾಚಕ
ಗಡಿ, ಸರಹದ್ದು – ಕರಾರು; ಎಲ್ಲೆ ಒಪ್ಪಂದ.

barring
ಉಪಸರ್ಗ
ವಿನಾ; ಹೊರತು; ಬಿಟ್ಟು; ಉಳಿದು; ಶಿವಾಯಿ.

barrio
ನಾಮವಾಚಕ
ಸ್ಪ್ಯಾನಿಷ್‍ – ಭಾಗ, ಪ್ರಾಂತ; ಅಮೆರಿಕನ್‍ ಪ್ರಯೋಗದ ಸಂಯುಕ್ತ ಸಂಸ್ಥಾನಗಳ ನಗರಗಳಲ್ಲಿ ಸ್ಪ್ಯಾನಿಷ್‍ ಭಾಷೆಯನ್ನು ಮಾತಾಡುವವರ ವಿಭಾಗ.

barrister
ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಬ್ಯಾರಿಸ್ಟರು; ಉಚ್ಚ ನ್ಯಾಯಸ್ಥಾನಗಳಲ್ಲಿ ವಾದಿಸುವ ಅಧಿಕಾರ ಪಡೆದವ.
  • (ಅಮೆರಿಕನ್‍ ಪ್ರಯೋಗ) ಲಾಯರು; ವಕೀಲ; ನ್ಯಾಯವಾದಿ.

  • barrister-at-law
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) = barrister.

    barristerial
    ಗುಣವಾಚಕ
    ಬ್ಯಾರಿಸ್ಟರನ; ಬ್ಯಾರಿಸ್ಟರನಿಗೆ ಸಂಬಂಧಿಸಿದ.

    barristership
    ನಾಮವಾಚಕ
    ಬ್ಯಾರಿಸ್ಟರ್‍ – ಗಿರಿ, ಪದವಿ.


    logo