logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

addictive
ಗುಣವಾಚಕ
ಚಟ ಹಿಡಿದಿರುವ; ಗೀಳಿನ; ವ್ಯಸನಿಯಾದ.

Addison's disease
ನಾಮವಾಚಕ
ರಕ್ತಹೀನತೆ; ಅಧಿಕ ಸುಸ್ತು; ಚರ್ಮ ಕಂದುಬಣ್ಣಕ್ಕೆ ತಿರುಗುವುದು ಮೊದಲಾದ ಲಕ್ಷಣಗಳುಳ್ಳ ಅಡ್ರಿನಲ್‍ ಹಾರ್ಮೋನುಗಳ ಕೊರತೆಯಿಂದುಂಟಾಗುವ ವ್ಯಾಧಿ.

additament
ನಾಮವಾಚಕ
ಸೇರಿಸಿದುದು; ಕೂಡಿಸಿದುದು.

addition
ನಾಮವಾಚಕ ಪದಗುಚ್ಛ
in addition to ಅದರ ಜತೆಗೆ; ಇದೂ ಅಲ್ಲದೆ; ಮೇಲಾಗಿ.
  • ಕೂಡುವಿಕೆ; ಸಂಕಲನ.
  • ಸೇರಿಸಿದುದು; ಸೇರಿಸಿದ, –ವಸ್ತು, ವಿಷಯ; ಸೇರಿಕೆ: a useful addition ಉಪಯುಕ್ತ ಸೇರಿಕೆ.
  • ಹೆಚ್ಚಳ; ವೃದ್ಧಿ.
  • (ಗ್ರಂಥಗಳ ಕೊನೆಯ) ಅನುಬಂಧ; ಪರಿಶಿಷ್ಟ; ಸೇರ್ಪಡೆ.
  • (ರಸಾಯನವಿಜ್ಞಾನ) ಸಂಕಲನ ಕ್ರಿಯೆ; ಎರಡು ಯಾ ಹೆಚ್ಚಿನ ದ್ರವ್ಯಗಳು ಸೇರಿ ಒಂದೇ ಸಂಯುಕ್ತವಾಗುವ ರಾಸಾಯನಿಕ ಕ್ರಿಯೆ.

  • additional
    ಗುಣವಾಚಕ
    ಸೇರಿಸಿದ; ಅಧಿಕ; ಹೆಚ್ಚಿನ: additional information ಹೆಚ್ಚಿನ ಸಮಾಚಾರ.

    additionally
    ಕ್ರಿಯಾವಿಶೇಷಣ
    ಹೆಚ್ಚಿನದ್ದಾಗಿ; ಅಧಿಕವಾದದ್ದಾಗಿ.

    additive
    ಗುಣವಾಚಕ
  • ಸೇರಿಸಬೇಕಾದ; ಸೇರಿಸಲಿರುವ; ಸಂಯೋಜನೀಯ.
  • (ರಸಾಯನವಿಜ್ಞಾನ) ಸೇರಿ(ಸಿ)ಕೊಳ್ಳುವ; ಸೇರಿ(ಸಿ)ಕೊಳ್ಳುತ್ತಾ ಹೋಗುವ; ಸಂಕಲನವಾಗುವ; ಸಂಕಲಿತವಾಗುವ: additive process ಸಂಕಲನ ಪ್ರಕ್ರಿಯೆ.

  • additive
    ನಾಮವಾಚಕ
  • (ವಸ್ತು ಯಾ ವಿಷಯದಲ್ಲಿ) ಸೇರಿಸಬೇಕಾದುದು; ಸೇರ್ಪಡೆಯಾಗಬೇಕಾದುದು; ಸಂಯೋಜನೀಯ.
  • ಆಹಾರ ವಸ್ತುಗಳಿಗೆ ಬಣ್ಣ, ವಾಸನೆ, ರುಚಿ, ಮೊದಲಾದ ವಿಶಿಷ್ಟ ಗುಣಗಳನ್ನು ಕೊಡಲು ಅಲ್ಪ ಪ್ರಮಾಣದಲ್ಲಿ ಸೇರಿಸುವ ದ್ರವ.

  • addle
    ಗುಣವಾಚಕ
  • (ಮೊಟ್ಟೆಯ ವಿಷಯದಲ್ಲಿ) ಕೆಟ್ಟುಹೋದ; ಕೊಳೆತ ಯಾ ಗೊಡ್ಡಾದ: addle egg ಕೊಳೆತ, ಕೆಟ್ಟುಹೋದ ಯಾ ಮರಿಯಾಗದ ಮೊಟ್ಟೆ.
  • ಬರಡಾದ; ನಿರರ್ಥಕವಾದ; ಉಪಯುಕ್ತವಾಗದ; ವ್ಯರ್ಥವಾದ: addled parliament ವ್ಯರ್ಥವಾದ ಪಾರ್ಲಿಮೆಂಟ್‍.
  • (ಮನಸ್ಸಿನ ವಿಷಯದಲ್ಲಿ) ಅಸ್ತವ್ಯಸ್ತ; ಗೊಂದಲದಿಂದ ಕೂಡಿದ; ಸಂದೇಹಗಳಿಂದ ಏನೂ ತೋಚದಂತಾದ.

  • addle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮನಸ್ಸಿನ ವಿಷಯದಲ್ಲಿ) ಗೊಂದಲಗೊಳಿಸು; ತಲೆಕೆಡಿಸು.(ಮೊಟ್ಟೆಗಳ ವಿಷಯದಲ್ಲಿ) ಕೊಳೆ; ಕೆಡು; ಗೊಡ್ಡಾಗು.


    logo