logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

one-up
ಗುಣವಾಚಕ
(ಆಡುಮಾತು)
  • (ರೂಪಕವಾಗಿ) (ಎದುರಾಳಿಗಿಂತ) ಒಂದು ಕೈ ಮೇಲಾಗಿರುವ; ಒಂದು ಪಟ್ಟು ಮೇಲುಗೈಯಾಗಿರುವ; ಸ್ವಲ್ಪ ಉತ್ತಮ ಸ್ಥಿತಿಯಲ್ಲಿರುವ.
  • (ಎದುರಾಳಿಗಿಂತ) ಒಂದು ಪಾಯಿಂಟ್‍ ಯಾ ಪಟ್ಟು ಹೆಚ್ಚಾಗಿರುವ, ಹೆಚ್ಚಾಗಿ ಗಳಿಸಿರುವ.

  • one-upmanship
    ನಾಮವಾಚಕ
    (ಆಡುಮಾತು) ಮೇಲುಗೈತನ; ಮೇಲುಗೈ ನೀತಿ; ಎದುರಾಳಿಗಿಂತ ಮಾನಸಿಕವಾಗಿ ಒಂದು ಕೈ ಯಾ ಒಂದು ಪೆಟ್ಟು ಮೇಲುಗೈಯಾಗಿರುವ ಹವಣಿಕೆ.

    one-way
    ಗುಣವಾಚಕ
    ಒಮ್ಮಾರ್ಗದ; ಏಕ–ಮಾರ್ಗದ, ದಿಕ್ಕಿನ; ಒಂದೇ ದಿಕ್ಕಿನಲ್ಲಿ ನಡೆಯುವ, ಚಲಿಸುವ: one-way traffic ಒಮ್ಮಾರ್ಗದ ಸಂಚಾರ; ಒಂದೇ ದಿಕ್ಕಿನಲ್ಲಿ ವಾಹನಗಳು ಚಲಿಸಬಹುದಾದ ದಾರಿ. one-way ticket (ಅಮೆರಿಕನ್‍ ಪ್ರಯೋಗ) ಒಮ್ಮಾರ್ಗದ, ಏಕಮಾರ್ಗದ–ಟಿಕೆಟ್ಟು; ಹೋಗಲು ಮಾತ್ರ ಕೊಡುವ ಟಿಕೆಟ್‍; ಹೊರಟಿರುವ ಗುರಿಗೆ ಹೋಗಬಹುದಾದ, ಆದರೆ ಅಲ್ಲಿಂದ ಹಿಂದಿರುಗಲು ಅನುಮತಿಯಿಲ್ಲದ ರಹದಾರಿ ಚೀಟಿ. one-way street ಒಮ್ಮಾರ್ಗದ ಬೀದಿ; ಏಕ ದಿಕ್ಕಿನ ರಸ್ತೆ; ವಾಹನ ಸಂಚಾರವೆಲ್ಲ ಒಂದೇ ದಿಕ್ಕಿನಲ್ಲಿ ನಡೆಯಬೇಕಾದ ಬೀದಿ.

    onefold
    ಗುಣವಾಚಕ
  • ಒಮ್ಮಡಿ; ಒಪ್ಪಟ್ಟು; ಏಕಗುಣ; ಒಂದರಷ್ಟು.
  • ಒಂದೇ ಒಂದು ಘಟಕವುಳ್ಳ; ಸರಳ(ವಾದ).

  • oneiric
    ಗುಣವಾಚಕ
    ಕನಸಿನ; ಸ್ವಪ್ನದ ಯಾ ಸ್ವಪ್ನಗಳಿಗೆ ಸಂಬಂಧಿಸಿದ.

    oneiro-
    ಸಮಾಸ ಪೂರ್ವಪದ
    ಕನಸು, ಸ್ವಪ್ನ ಎಂಬ ಅರ್ಥದ ಸಮಾಸ ಪೂರ್ವಪದ: oneiromancy.

    oneirocritic
    ಗುಣವಾಚಕ
    ಸ್ವಪ್ನ ವ್ಯಾಖ್ಯಾತೃ; ಸ್ವಪ್ನ ವ್ಯಾಖ್ಯಾನಕಾರ; ಸ್ವಪ್ನಾರ್ಥಕಾರ; ಸ್ವಪ್ನಗಳ, ಕನಸುಗಳ ಅರ್ಥವನ್ನು ಹೇಳುವವನು.

    oneirocritical
    ಗುಣವಾಚಕ
    ಸ್ವಪ್ನಗಳ ಅರ್ಥ ಹೇಳುವ.

    oneirocriticism
    ನಾಮವಾಚಕ
    ಸ್ವಪ್ನ ವ್ಯಖ್ಯಾನ; ಸ್ವಪ್ನಗಳ ಅರ್ಥ ಹೇಳುವಿಕೆ.

    oneirology
    ನಾಮವಾಚಕ
    ಸ್ವಪ್ನಶಾಸ್ತ್ರ; ಕನಸುವಿದ್ಯೆ; ಸ್ವಪ್ನಗಳ ಅಧ್ಯಯನ ಮತ್ತು ಅರ್ಥ ವಿವರಣೆ.


    logo