ಶಿಶು, ಕೂಸು – ಸಜ್ಜು; ಶಿಶುವಿನ ಬಟ್ಟೆಬರೆ; ಆಗತಾನೇ ಹುಟ್ಟಿದ ಮಗುವಿಗೆ ಆವಶ್ಯಕವಾದ ಬಟ್ಟೆ, ಹಾಸಿಗೆ, ಪ್ರಸಾಧನ ವಸ್ತುಗಳು.
laylock
ನಾಮವಾಚಕ
lilacನ ಪ್ರಾದೇಶಿಕ ರೂಪ.
layman
ನಾಮವಾಚಕ
ಲೌಕಿಕ; ಪಾದ್ರಿಯ ದೀಕ್ಷೆ ಪಡೆದಿಲ್ಲದ ಚರ್ಚಿನ ಸದಸ್ಯ.
ಅಪರಿಣತ; ಪ್ರವೀಣನಲ್ಲದವ; ತಜ್ಞನಲ್ಲದವ; ಸಾಮಾನ್ಯ (ವ್ಯಕ್ತಿ); ಯಾವುದೇ ವೃತ್ತಿಯ, ಕಲೆಯ ಯಾ ಶಾಸ್ತ್ರದ (ಮುಖ್ಯವಾಗಿ ನ್ಯಾಯಶಾಸ್ತ್ರ ಯಾ ವೈದ್ಯಶಾಸ್ತ್ರದ) ಪರಿಶ್ರಮ, ವಿಶೇಷಜ್ಞಾನ – ಇಲ್ಲದವನು.
layout
ನಾಮವಾಚಕ
(ನಿವೇಶನ, ಭೂಮಿ, ಮೊದಲಾದವುಗಳ) ವಿನ್ಯಾಸರಚನೆ; ವಿನ್ಯಾಸ – ಮಾಡುವುದು, ರೂಪಿಸುವುದು.
(ನಕಾಸೆ, ಮುದ್ರಿತ ವಿಷಯ, ಜಾಹೀರಾತು, ಮೊದಲಾದವುಗಳ) ವಿನ್ಯಾಸ (ಕ್ರಮ); (ಅವನ್ನು) ಜೋಡಣೆ ಮಾಡಿರುವ ಯಾ ರೂಪಿಸಿರುವ ರೀತಿ, ವಿಧಾನ.
ವಿನ್ಯಸ್ತ ಯಾ ವಿನ್ಯಾಸಗೊಂಡ ಯಾ ವಿನ್ಯಾಸ ಪಡೆದ ವಸ್ತು.
(ಪುಸ್ತಕ, ವೃತ್ತ ಪತ್ರಿಕೆ, ಮೊದಲಾದವುಗಳ) ವಿನ್ಯಾಸ; ರೂಪ; ರಚನೆ.
layover
ನಾಮವಾಚಕ
(ಪ್ರಯಾಣ ಮೊದಲಾದವುಗಳಲ್ಲಿ ಮುಂದಿನ ಸ್ಥಳಕ್ಕೆ ಹೊರಡುವುದಕ್ಕೆ ಮುಂಚಿನ) ಬಿಡುವು; ಕಾಯುವ ಕಾಲ.
layshaft
ನಾಮವಾಚಕ
ಉಪ ಚಾಲಕದಂಡ; ಆವರ್ತದಂಡ; ಯಂತ್ರದ ಪ್ರಮುಖ ಶಕ್ತಿಪ್ರಸರಣ ವಿಧಾನಕ್ಕೆ ಸೇರಿರದ ಎರಡನೆಯ ಚಾಲಕದಂಡ.