logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inadequately
ಕ್ರಿಯಾವಿಶೇಷಣ
  • (ಉದ್ದೇಶಕ್ಕೆ, ಕಾರ್ಯಕ್ಕೆ) ಸಾಕಷ್ಟಿಲ್ಲದಂತೆ; ಸಾಲದೆ ಹೋಗುವಂತೆ; ಸಾಕಾಗದಂತೆ; ಕೊರೆಯಾಗಿ; ಕಡಮೆಯಾಗಿ; ಅಪರ್ಯಾಪ್ತವಾಗಿ.
  • ಅಸಮರ್ಪಕವಾಗಿ.

  • inadhesive
    ಗುಣವಾಚಕ
    ಅಂಟದ; ಅಂಟಿರದ; ಅಂಟಿಕೊಳ್ಳದ; ಅಸಂಸಕ್ತ.

    inadmissibility
    ನಾಮವಾಚಕ
  • ಅಗ್ರಾಹ್ಯತೆ; ಅಸ್ವೀಕಾರ್ಯತೆ; ಅನಂಗೀಕಾರ್ಯತೆ; ಒಪ್ಪಲಾಗದಂತಿರುವುದು; ಅಂಗೀಕಾರಾರ್ಹವಾಗಿಲ್ಲದಿರುವುದು.
  • ನಿರವಕಾಶತೆ; ಎಡೆಗೊಡಲು ಸಾಧ್ಯವಾಗದಿರುವುದು.

  • inadmissible
    ಗುಣವಾಚಕ
  • ಒಪ್ಪಲಾಗದ; ಅಗ್ರಾಹ್ಯ; ಅಸ್ವೀಕಾರ್ಯ; ಅನಂಗೀಕಾರ್ಯ; ಅಂಗೀಕರಿಸಲಾಗದ: inadmissible behaviour ಒಪ್ಪಲಾಗದ ನಡವಳಿಕೆ; ಅಗ್ರಾಹ್ಯ ವರ್ತನೆ.
  • ಎಡೆಗೊಡಲಾಗದ; ಆಸ್ಪದವೀಯಲಾಗದ; ಅವಕಾಶ ಕೊಡಲಾಗದ: liquor is inadmissible ಮದ್ಯಕ್ಕೆ ಅವಕಾಶವಿಲ್ಲ.

  • inadmissibly
    ಕ್ರಿಯಾವಿಶೇಷಣ
  • ಅಂಗೀಕಾರಾರ್ಹವಾಗಿರದೆ.
  • ಎಡೆಗೊಡಲು ಸಾಧ್ಯವಿಲ್ಲದೆ.

  • inadvertence
    ನಾಮವಾಚಕ
  • ಗಮನ ಕೊಡದಿರುವುದು; ಲಕ್ಷ್ಯ ಇಡದಿರುವುದು; ಅನವಧಾನ.
  • ಅಸಡ್ಡೆ; ಉಪೇಕ್ಷೆ; ಅಲಕ್ಷ್ಯ; ಅಜಾಗರೂಕತೆ; ಬೇಹುಷಾರಿ; ಪ್ರಮಾದ; ತಿಳಿಯದೆ ಆದದ್ದು.
  • (ಕಾರ್ಯದ ವಿಷಯದಲ್ಲಿ) ಅನುದ್ದಿಷ್ಟತೆ; ಉದ್ದೇಶರಾಹಿತ್ಯ; ಉದ್ದೇಶದಿಂದ ಮಾಡಿರದುದು.

  • inadvertency
    ನಾಮವಾಚಕ
    = inadvertence.

    inadvertent
    ಗುಣವಾಚಕ
  • ಲಕ್ಷ್ಯಕೊಡದ; ಅನವಧಾನದ; ಸರಿಯಾಗಿ ಗಮನಕೊಡದ.
  • (ವ್ಯಕ್ತಿಗಳ ವಿಷಯದಲ್ಲಿ) ಅಲಕ್ಷ್ಯದ; ಎಚ್ಚರಿಕೆಯಿಲ್ಲದ; ಅಸಡ್ಡೆಯ; ಉಪೇಕ್ಷೆಯಿಂದ ಕೂಡಿದ.
  • (ಕೆಲಸಗಳ ವಿಷಯದಲ್ಲಿ) ಅನುದ್ದಿಷ್ಟ; ಬುದ್ಧಿಪೂರ್ವಕವಲ್ಲದ; ಉದ್ದೇಶಪೂರ್ವಕವಲ್ಲದ; ತಿಳಿಯದೆ, ಪ್ರಮಾದವಶಾತ್‍ – ಆದ.

  • inadvertently
    ಕ್ರಿಯಾವಿಶೇಷಣ
  • ಗಮನಕೊಡದೆ; ಲಕ್ಷ್ಯಕೊಡದೆ; ಅನವಧಾನದಿಂದ.
  • ಅಲಕ್ಷ್ಯದಿಂದ; ಅಸಡ್ಡೆಯಿಂದ; ಉಪೇಕ್ಷೆಯಿಂದ; ಅಜಾಗರೂಕತೆಯಿಂದ.
  • ಪ್ರಮಾದವಶಾತ್‍; ತಿಳಿಯದೆ; ಅನುದ್ದಿಷ್ಟವಾಗಿ.

  • inadvisable
    ಗುಣವಾಚಕ
    ತಕ್ಕುದಲ್ಲದ; ಯುಕ್ತವಲ್ಲದ; ಸೂಕ್ತವಲ್ಲದ; ಸಮುಚಿತವಲ್ಲದ.


    logo