logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrenly
ಕ್ರಿಯಾವಿಶೇಷಣ
  • ಬಂಜೆಯಂತೆ; ಗೊಡ್ಡಾಗಿ.
  • ಬಂಜರಾಗಿ.
  • ನೀರಸವಾಗಿ.
  • ಉತ್ಪನ್ನವಿಲ್ಲದೆ.
  • ವ್ಯರ್ಥವಾಗಿ.
  • ಜಡವಾಗಿ; ಜಡತೆಯಿಂದ.

  • barrenness
    ನಾಮವಾಚಕ
  • ಬಂಜೆತನ; ಬರಡುತನ; ಗೊಡ್ಡುತನ.
  • ಬಂಜರುತನ.
  • ಆಸಕ್ತಿ ಹುಟ್ಟಿಸದಿರುವಿಕೆ; ನೀರಸತೆ.
  • ನಿಷ್ಫಲತೆ.
  • ಜಡತೆ; ಮೊದ್ದುತನ.
  • ಅಭಾವ; ರಾಹಿತ್ಯ; ಇಲ್ಲದಿರುವಿಕೆ.

  • barrenwort
    ನಾಮವಾಚಕ
    (ಸಸ್ಯವಿಜ್ಞಾನ) ಬಂಜೆಗಿಡ; ಊದಾ ಹಳದಿ ಮಿಶ್ರಿತ ಪುಷ್ಪಗಳನ್ನು ಬಿಡುವ, ಕಹಿ ಎಲೆಗಳುಳ್ಳ, ಬಂಜೆತನವನ್ನುಂಟು ಮಾಡುವುದೆಂದು ನಂಬಲಾಗಿರುವ, ಸಸ್ಯ.

    barret
    ನಾಮವಾಚಕ
    (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ಪಾದ್ರಿಗಳು ಧರಿಸುವಂಥ) ಚಪ್ಪಟೆ, ಚೌಕ – ಟೋಪಿ.

    barrette
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಹೆಂಗಸರ) ಕೂದಲ ಹಿಡಿಕೆ; ಕೇಶಬಂಧನಿ; ಕಂಬಿಯಾಕಾರದ, ತಲೆಗೆ ಸಿಕ್ಕಿಸಿಕೊಳ್ಳುವ, ಅಲಂಕಾರದ – ಹಿಡಿಕೆ, ಕ್ಲಿಪ್ಪು.

    barricade
    ನಾಮವಾಚಕ
    (ವಿರಳ ಪ್ರಯೋಗ)
  • (ಪೀಪಾಯಿ, ಬಂಡಿ, ಕಲ್ಲುಬಂಡೆ, ಸಿಕ್ಕಿಸಿಕ್ಕಿದ ಸಾಮಾನುಗಳಿಂದ ದಾರಿ ಮೊದಲಾದವುಗಳಿಗೆ ಅಡ್ಡಲಾಗಿ, ಮುಖ್ಯವಾಗಿ ಕ್ರಾಂತಿಯ ಸಮಯದಲ್ಲಿ ಕಟ್ಟಿದ) ಅವಸರದ – ತಡೆ, ಅಡ್ಡಗಟ್ಟು, ಪ್ರತಿಬಂಧಕ.
  • (ರೂಪಕವಾಗಿ) (ಯಾವುದೇ) ತಡೆಗಟ್ಟು; ಪ್ರತಿಬಂಧಕ.

  • barricade
    ಸಕರ್ಮಕ ಕ್ರಿಯಾಪದ
  • (ರಸ್ತೆ ಮೊದಲಾದವುಗಳಿಗೆ) ಅಡ್ಡಹಾಕು; ತಡೆಗಟ್ಟುಹಾಕು; ಪ್ರತಿಬಂಧಿಸು.
  • (ಸ್ಥಳವನ್ನೋ, ವ್ಯಕ್ತಿಯನ್ನೋ) ಅಡ್ಡಗಟ್ಟು ಹಾಕಿ – ರಕ್ಷಿಸು, ಕಾಯು.

  • barrier
    ನಾಮವಾಚಕ
  • ಬೇಲಿ; ತಡೆ; ತಡೆಗಟ್ಟು.
  • (ಪ್ರಾಚೀನ ರಥಪಂದ್ಯಗಳಲ್ಲಿ, ಪಂದ್ಯಕ್ಕೆ ಹೊರಡುವ ಮುಂಚೆ ರಥಗಳು ನಿಲ್ಲುವ) ಕಂಬಿ ಹಾಕಿದ ಕೋಣೆಗಳು.
  • (ಯೂರೋಪಿನ ನಗರಗಳಲ್ಲಿ) ಉಕ್ಕಡ; ಸುಂಕದ ಕಟ್ಟೆ.
  • (ಕತ್ತಿವರಿಸೆಯಲ್ಲಿ) ಸುತ್ತುವರಿದ ದಸಿಬೇಲಿ; ಕಬ್ಬಿಣದ ಕಟಕಟೆ.
  • (ಕತ್ತಿವರಿಸೆಯಲ್ಲಿ, ಇಬ್ಬರಿಗೂ ಮಧ್ಯದ) ಸಮಾನಾಂತರ ಕಂಬಿಗಳ ಬೇಲಿ.
  • (ಯಾವುದೇ) ತಡೆ; ಅಡ್ಡಿ; ಪ್ರತಿಬಂಧಕ: a trade barrier ವ್ಯಾಪಾರಕ್ಕೆ ತಡೆ.
  • ಗಡಿ; ಎಲ್ಲೆ; ಮೇರೆ; ಸರಹದ್ದು: the barriers of class ವರ್ಗದ ಎಲ್ಲೆಗಳು.
  • ಯಾವುದೇ ಪ್ರತ್ಯೇಕಿಸುವ ಸಾಧನ.
  • (ಪ್ರಾಚೀನ ಪ್ರಯೋಗ) ಗಡಿದುರ್ಗ; ಗಡಿಕೋಟೆ; ದೇಶವನ್ನು ಪ್ರವೇಶಿಸುವ ಮಾರ್ಗವನ್ನು ಕಾಯಲು ಕಟ್ಟಿದ ಕೋಟೆ ಯಾ ಕೋಟೆಯುಳ್ಳ ಊರು.
  • (ಪ್ರಾಚೀನ ಪ್ರಯೋಗ) ದಸಿಕೋಟೆ; ಊರಬಾಗಿಲ ರಕ್ಷಣೆಗಾಗಿ ಅದರ ಮುಂದೆ ದಸಿಗಳನ್ನು ನೆಟ್ಟು ಮಾಡಿದ ಅಡ್ಡಗಟ್ಟು.
  • (ಯಾವುದೇ) ನೈಸರ್ಗಿಕ – ತಡೆ, ಪ್ರತಿಬಂಧಕ: a mountain barrier ಪರ್ವತದ ತಡೆ.
  • (ರೈಲು ನಿಲ್ದಾಣದಲ್ಲಿ ಟಿಕೆಟ್ಟುಗಳನ್ನು ತೋರಿಸಬೇಕಾದ) ಗೇಟು; ತಡೆ; ಕಟಕಟೆ.

  • barrier
    ಸಕರ್ಮಕ ಕ್ರಿಯಾಪದ
    (ಸುತ್ತಲೂ) ಬೇಲಿ, ಕಟಕಟೆ – ಹಾಕು; ತಡೆ ನಿರ್ಮಿಸು; ಪ್ರತಿಬಂಧಿಸು; ತಡೆಗಟ್ಟು ಹಾಕಿ – ಒಳಗಿಡು, ಹೊರದೂಡು ಯಾ ಪ್ರತ್ಯೇಕಿಸು.

    barrier beach
    ನಾಮವಾಚಕ
    ಮರಳು – ದಿಬ್ಬ, ಕಟ್ಟೆ, ದಂಡೆ; ತೀರಕ್ಕೆ ಸಮಾನಾಂತರವಾಗಿ ನೀರಿನಿಂದೆದ್ದ ಮರಳ ರಾಶಿ.


    logo