logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

addax
ನಾಮವಾಚಕ
ಆಡ್ಯಾಕ್ಸ್‍; ಉತ್ತರ ಆಹ್ರಿಕ ಮತ್ತು ಅರೇಬಿಯಗಳ ತಿರುಮುರಿ ಕೊಂಬಿನ ಒಂದು ಜಾತಿಯ ಎರಳೆ.

added
ಗುಣವಾಚಕ
ಹೆಚ್ಚಿದ; ಅಧಿಕಗೊಂಡ; ವೃದ್ಧಿಯಾದ: added expenditure ಹೆಚ್ಚಿದ ಖರ್ಚು.

added value tax
ನಾಮವಾಚಕ
= value-added tax.

addendum
ನಾಮವಾಚಕ
  • ಪರಿಶಿಷ್ಟ; ಅನುಬಂಧ; ಸೇರ್ಪಡೆ.
  • (ಬಹುವಚನದಲ್ಲಿ) ಮುಖ್ಯವಾಗಿ ಗ್ರಂಥ ಮೊದಲಾದವುಗಳ ಕೊನೆಯಲ್ಲಿ ಸೇರಿಸಿದ ಟಿಪ್ಪಣಿ ಮೊದಲಾದವು.
  • (ಮುಖ್ಯವಾಗಿ ಬಿಟ್ಟುಹೋದದ್ದು ಆದರೆ) ಸೇರಿಸಬೇಕಾದ ವಸ್ತು.

  • adder
    ನಾಮವಾಚಕ ಪದಗುಚ್ಛ ನುಡಿಗಟ್ಟು
    ಆಡರ್‍; ಒಂದು ಜಾತಿಯ ಸಣ್ಣ ವಿಷಸರ್ಪ, ಮುಖ್ಯವಾಗಿ ಮಂಡಲದ ಹಾವು ಯಾ ಸಾಮಾನ್ಯ ವೈಪರ್‍.deaf as an adder ಸಂಪೂರ್ಣ ಕಿವುಡು.
  • flying adder ಕೊಡತಿ ಹುಳು; ತೂಕದ ಹುಳು.
  • puff, death, horned adder ನಾನಾ ಜಾತಿಯ ಮಂಡಲದ ಹಾವುಗಳು.

  • adder
    ನಾಮವಾಚಕ
    ಕೂಡುವವನು; ಕೂಡುವುದು; ಸಂಕಲನಕಾರ; ಮುಖ್ಯವಾಗಿ ಸಂಕಲನ ಯಂತ್ರ ಯಾ ಗಣಕಯಂತ್ರ.

    adder's tongue
    ನಾಮವಾಚಕ
    ಅಹಿಯೊಗ್ಲಾಸಮ್‍ ವಂಶಕ್ಕೆ ಸೇರಿದ, ಒಂದು ಜಾತಿಯ ಜರೀಗಿಡ (ಹರ್ನ್‍).

    addict
    ಸಕರ್ಮಕ ಕ್ರಿಯಾಪದ
  • (ವಿಶೇಷವಾಗಿ ಕರ್ಮಣಿಪ್ರಯೋಗ) ಕೆಟ್ಟಚಾಳಿ ಹಿಡಿಸು; ಚಟ ಹಿಡಿಸು; ದುರಭ್ಯಾಸಕ್ಕೆ ಬಲಿಬೀಳಿಸು; ವ್ಯಸನಿಯಾಗಿಸು: he is addicted to drink ಆತ ಕುಡಿತದ ಚಟಕ್ಕೆ ಬಿದ್ದಿದ್ದಾನೆ.
  • (ನ್ಯಾಯಶಾಸ್ತ್ರ) ದಾಸ್ಯವಿಮೋಚನ ಮಾಡು; (ನ್ಯಾಯಾಧಿಪತಿಯ ತೀರ್ಪಿನಂತೆ) ಮಾಲೀಕನ ವಶದಿಂದ ಗುಲಾಮನನ್ನು ಬಿಟ್ಟುಕೊಡು; ಜೀತದಿಂದ ಬಿಡುಗಡೆ ಮಾಡು.

  • addict
    ನಾಮವಾಚಕ
  • (ಯಾವುದೇ ಕೆಟ್ಟ ಅಭ್ಯಾಸದ, ಮುಖ್ಯವಾಗಿ ಅಹೀಮು, ಗಾಂಜಾ, ಮೊದಲಾದ ಮಾದಕ ದ್ರವ್ಯಗಳ) ಚಟ, ಗೀಳು-ಹಿಡಿದವನು; ವ್ಯಸನಿ: morphine addict ಮಾರ್ಹೀನ್‍–ವ್ಯಸನಿ, ಚಟದವನು.
  • (ಆಡುಮಾತು) (ಆಟಗಳ ಯಾ ಗತಕಾಲದ ಬಗ್ಗೆ) ಅತ್ಯಾಸಕ್ತಿಯುಳ್ಳವನು; ಅತ್ಯುತ್ಸಾಹಿ; ಪ್ರೇಮಿ: film addict ಚಿತ್ರಪ್ರೇಮಿ.

  • addiction
    ನಾಮವಾಚಕ
  • (ಸಾಮಾನ್ಯವಾಗಿ ಕೆಟ್ಟ) ಚಟ; ಗೀಳು; ಚಾಳಿ; ವ್ಯಸನ; ದುರಭ್ಯಾಸ; ದುಶ್ಚಟ; ಮುಖ್ಯವಾಗಿ ಅಹೀಮು ಮೊದಲಾದ ಮಾದಕ ವಸ್ತುವಿನ ಅತಿ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ.
  • (ನ್ಯಾಯಶಾಸ್ತ್ರ) ದಾಸ್ಯ ವಿಮೋಚನ; ಜೀತದಿಂದ ಬಿಡುಗಡೆ ಮಾಡುವಿಕೆ.


  • logo