(ಆಡುಮಾತು) ಒಂದೇ ಏಟಿನ; ಏಕಪ್ರಯತ್ನದ: ಏಕಕ್ರಿಯೆಯ; ಒಂದೇ ಪ್ರಯತ್ನ ಅಗತ್ಯವಾದ ಯಾ ಒಂದೇ ಕ್ರಿಯೆಯನ್ನೊಳಗೊಂಡ: a one-shot success ಒಂದೇ ಏಟಿಗೆ ಗಳಿಸಿದ ಜಯ; ಒಂದೇ ಬಾರಿಗೆ, ಪ್ರಯತ್ನಕ್ಕೆ, ದೊರೆತ ಜಯ. a one-shot job ಒಂದೇ ಕ್ರಿಯೆಯನ್ನೊಳಗೊಂಡ ಕೆಲಸ.
one-sided
ಗುಣವಾಚಕ
(ವಿವಾದದಲ್ಲಿ) ಏಕಪಕ್ಷೀಯ; ಪಕ್ಷಪಾತದ; ಒಂದು ಕಡೆ ಓಲುವ; ಅನ್ಯಾಯವಾದ; ಪೂರ್ವಗ್ರಹಪೀಡಿತ; ರಾಗದ್ವೇಷಗಳಿಂದ ಕೂಡಿದ: a one-sided judgement ಪಕ್ಷಪಾತದ, ಏಕಪಕ್ಷೀಯವಾದ, ಅನ್ಯಾಯವಾದ –ತೀರ್ಪು.
ಒಂದು ಕಡೆ ಮಾತ್ರ ಇರುವ ಯಾ ನಡೆಯುವ.
ಒಂದೇ ಕಡೆ ದೊಡ್ಡದಾದ; ಒಂದು ಕಡೆ ಯಾ ಪಕ್ಕ ಇನ್ನೊಂದು ಕಡೆಗಿಂತ ಯಾ ಪಕ್ಕಕ್ಕಿಂತ ದೊಡ್ಡದಾದ.
ಒಮ್ಮೊಗದ; ಒಮ್ಮಗ್ಗುಲಿನ; ಏಕಪಾರ್ಶ್ವದ; ಒಂದು ಮುಖದ: a one-sided street ಒಮ್ಮೊಗದ ಬೀದಿ; ಒಂದೇ ಸಾಲು ಮನೆಗಳಿರುವ ಬೀದಿ. a one-sided plant (ಎಲೆಗಳು ಯಾ ಹೂವುಗಳು ಕಾಂಡದ ಒಂದೇ ಕಡೆಬಿಡುವ) ಒಮ್ಮೊಗದ ಗಿಡ; ಏಕಮುಖದ ಸಸ್ಯ.
ಮಾಜಿ; ಹಿಂದಿನ; ಹಿಂದೊಮ್ಮೆ–ಆದ, ಅಧಿಕಾರದಲ್ಲಿದ್ದ, ಸಂಭವಿಸಿದ, ಇತ್ಯಾದಿ.
one-time pad
ನಾಮವಾಚಕ
ಒಂದು ಸಲದ ಕಟ್ಟು; ಒಂದೊಂದನ್ನು ಒಂದೇ ಸಲ ಬಳಸಬಹುದಾದ ಗುಪ್ತ ಸಂಕೇತಗಳ ಕಟ್ಟು.
one-to-one
ಗುಣವಾಚಕ
ಒಂದಕ್ಕೊಂದು; ಒಂದು ತಂಡದ ಒಂದು ವಸ್ತು ಇನ್ನೊಂದು ತಂಡದ ಒಂದಕ್ಕೆ ಸಾಟಿಯಾಗಿರುವ, ಅನುರೂಪವಾಗಿರುವ.
one-track
ಗುಣವಾಚಕ
(ಮನಸ್ಸು ಮೊದಲಾದವುಗಳ ವಿಷಯದಲ್ಲಿ) ಒಂದೇ ಜಾಡಿನ, ಹಾದಿಯ; ಏಕಮಾರ್ಗಿ: a one-track mind ಏಕಮಾರ್ಗಿಯಾದ, ಏಕಮುಖಿ ಮನಸ್ಸು; ಒಂದೇ ವಿಷಯಕ್ಕೆ ಅಂಟಿಕೊಂಡಿರುವ ಯಾ ಒಂದೇ ದಿಕ್ಕಿನಲ್ಲಿ ಹರಿಯುವ ಮನಸ್ಸು.
one-two
ನಾಮವಾಚಕ
(ಆಡುಮಾತು)
(ಮುಷ್ಟಿಕಾಳಗ) ಒಂದು ಮತ್ತೊಂದು; ಒಂದರ ಮೇಲೊಂದು; ಒಂದಾದ ಮೇಲೊಂದು; ಎಡೆಬಿಡದೆ ಒಂದಾದ ಕೂಡಲೇ ಇನ್ನೊಂದರಂತೆ ಗುದ್ದಿದ ಗುದ್ದುಗಳು.
(ಕಾಲ್ಚೆಂಡು ಮೊದಲಾದವು) ಮುಂದುವರಿಯುತ್ತಿರುವ ಆಟಗಾರರಿಬ್ಬರು ಒಬ್ಬರಿಗೊಬ್ಬರು ಚೆಂಡನ್ನು ‘ಪಾಸ್’ ಮಾಡುತ್ತಿರುವ ಸರಣಿ.