(ಕ್ರೈಸ್ತಧರ್ಮ) ಆರಾಧನೆ ಮಾಡಿಸುವ ಲೌಕಿಕ; ಧರ್ಮಾರಾಧನೆಗಳನ್ನು ನಡೆಸಲು ಅಧಿಕಾರ ಪಡೆದಿರುವ ಲೌಕಿಕ.
ಸಾಮಾನ್ಯ ಓದುಗ; ಪಂಡಿತನಲ್ಲದ, ಪರಿಣತನಲ್ಲದ ಓದುಗ.
lay sister
ನಾಮವಾಚಕ
(ಕ್ರೈಸ್ತಧರ್ಮ) ಕಾಯಕದಕ್ಕ; ಕಾಯಕದ ತಂಗಿ; ಮತದೀಕ್ಷೆಯನ್ನು ಪಡೆದು ಪಾದ್ರಿ ಉಡುಪನ್ನು ಧರಿಸುವ, ಆದರೆ ಇತರ ಕರ್ತವ್ಯಗಳಿಂದ ವಿನಾಯಿತಿ ಪಡೆದು ದೈಹಿಕ ದುಡಿಮೆಯಲ್ಲಿ ನಿಯುಕ್ತಳಾಗಿರುವವಳು ಯಾ ತೊಡಗಿರುವವಳು.
lay-by
ನಾಮವಾಚಕ
(ಬ್ರಿಟಿಷ್ ಪ್ರಯೋಗ) ನಿಲುಗಡೆ ಪಕ್ಕ; ಪಾರ್ಶ್ವಪಥ:
ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳನ್ನು ನಿಲ್ಲಿಸಲು ಅಗಲ ಮಾಡಿದ ರಸ್ತೆಯ ಪಕ್ಕದ ಪಟ್ಟಿ, ಜಾಗ.
ಕಾಲುವೆಯ ಯಾ ರೈಲುಹಾದಿಯ ಮೇಲೆ ಮಾಡಿದ ಅಂಥದೇ ವ್ಯವಸ್ಥೆ.
(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್) ಮುಂಗಡ ಠೇವಣಿ; ಯಾವುದೇ ಪದಾರ್ಥವನ್ನು ಮುಂದೆ ಕೊಳ್ಳುವ ಸಲುವಾಗಿ ಅದನ್ನು ಕಾದಿರಿಸಲು ಮುಂಚೆ ಕೊಡುವ ಹಣ, ಇಡುವ ಠೇವಣಿ.
lay-off
ನಾಮವಾಚಕ
ಲೇಆಹ್:
ಹಂಗಾಮಿ ವಜಾ; ತಾತ್ಕಾಲಿಕ ನಿವೃತ್ತಿ; ಕೆಲಸಗಾರರನ್ನು ತಾತ್ಕಾಲಿಕವಾಗಿ ವಜಾ ಮಾಡುವುದು ಯಾ ಕೆಲಸದಿಂದ ತೆಗೆದುಹಾಕುವುದು.
ಹಂಗಾಮಿ ವಜಾಕಾಲ; ಹೀಗೆ ಕೆಲಸಗಾರರನ್ನು ತಾತ್ಕಾಲಿಕವಾಗಿ ವಜಾ ಮಾಡಿರುವ ಕಾಲ.