logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrel vault
ನಾಮವಾಚಕ
= barrel roof.

barrel-bulk
ನಾಮವಾಚಕ
ಪೀಪಾಯಿ ಗಾತ್ರ; ಐದು ಘನ ಅಡಿ.

barrel-chested
ಗುಣವಾಚಕ
ತುಂಬೆದೆಯ; ಉಬ್ಬೆದೆಯ; ಪೀನವಕ್ಷದ.

barrel-drain
ನಾಮವಾಚಕ
ಪೀಪಾಯಿ ಚರಂಡಿ; ದಂಬೆ ಚರಂಡಿ; ಉರುಳೆಯಾಕಾರದ ಚರಂಡಿ.

barrel-house
ನಾಮವಾಚಕ
(ಅಮೆರಿಕನ್‍ ಪ್ರಯೋಗ)
  • (ಸಾಮಾನ್ಯವಾಗಿ ಅಶಿಷ್ಟ) ಪೀಪಾಯಿ – ಮನೆ, ಗೃಹ; ಸಾಮಾನ್ಯವಾಗಿ ಕುಡಿತ, ಜೂಜುಗಳಗೆ ಹಾಗೂ ತಂಗುವುದಕ್ಕೆ ಅವಕಾಶವಿರುವ ಕೀಳು ದರ್ಜೆಯ ಪಾನದ ಮನೆ.
  • ಪೀಪಾಯಿ ಸಂಗೀತ; ನಯನಾಜೂಕಿಲ್ಲದ, ಬಿರುಸು ನಡೆಯ, ಸ್ವೇಚ್ಛಾಲಹರಿಯ ಒಂದು ಜಾಸ್‍ ಸಂಗೀತ ಶೈಲಿ.

  • barrel-organ
    ನಾಮವಾಚಕ
    ಉರುಳೆ ವಾದ್ಯ; ಬ್ಯಾರಲ್‍ ಆರ್ಗನ್‍ (ವಾದ್ಯ); ತಿರುಗುವ ಕೊಳವಿಯ ಮೇಲೆ ಅಳವಡಿಸಿರುವ ಲೋಹದ ಕೀಲಿಕೈಗಳನ್ನು ಚಾಲನ ಮಾಡಿ ನಾದವನ್ನು ಹೊರಡಿಸುವ ವರ್ತುಲನಾಳಿ ಆರ್ಗನ್‍ ವಾದ್ಯ.

    barrelful
    ನಾಮವಾಚಕ
    ಪೀಪಾಯಿ ತುಂಬ; ಪೀಪಾಯಿಭರ್ತಿ; ಪೀಪಾಯಿ ತುಂಬಿರುವ ವಸ್ತು ಮೊದಲಾದವು.

    barrelled
    ಗುಣವಾಚಕ
  • ಪೀಪಾಯಿಯಲ್ಲಿ – ತುಂಬಿಟ್ಟ, ಕೂಡಿಟ್ಟ.
  • ಪೀಪಾಯಿಯಂಥ; ಪೀಪಾಯಿಯಾಕಾರವುಳ್ಳ.

  • barren
    ಗುಣವಾಚಕ
  • ಬಂಜೆ; ಮಕ್ಕಳಾಗದ.
  • (ಪ್ರಾಣಿಗಳ ವಿಷಯದಲ್ಲಿ) ಗೊಡ್ಡು; ಬರಡು.
  • (ಭೂಮಿಯ ವಿಷಯದಲ್ಲಿ) ಬಂಜರು; ಬೆಳೆ ಕೊಡದ.
  • (ಗಿಡಮರಗಳ ವಿಷಯದಲ್ಲಿ) ಫಲ ಬಿಡದ.
  • (ಗಣಿ ಮೊದಲಾದವುಗಳ ವಿಷಯದಲ್ಲಿ) ಉತ್ಪನ್ನವಿಲ್ಲದ; ಲಾಭದಾಯಕವಲ್ಲದ.
  • ಒಣ; ಶುಷ್ಕ; ನೀರಸ; ನಿಸ್ಸಾರ; ಆಸಕ್ತಿ ಹುಟ್ಟಿಸದ; ಆಕರ್ಷಣೆಯಿಲ್ಲದ: a barren period ನೀರಸ ಕಾಲ.
  • ದಂಡದ; ವ್ಯರ್ಥ; ನಿಷ್ಪ್ರಯೋಜಕ; ನಿಷ್ಫಲ; ನಿರರ್ಥಕ: a barren effort ವ್ಯರ್ಥ ಪ್ರಯತ್ನ.
  • (ಮನುಷ್ಯರ ವಿಷಯದಲ್ಲಿ) ಜಡ; ಮೊದ್ದು; ಮಂಕು.
  • ಇಲ್ಲದ; ಇರದ; ರಹಿತ: barren of good ideas ಒಳ್ಳೆಯ ಅಭಿಪ್ರಾಯಗಳು ಇಲ್ಲದ.

  • barren
    ನಾಮವಾಚಕ
  • ಬಂಜರು ನೆಲ; ಬೆಳೆಯಾಗದ ಭೂಮಿ.
  • (ಬಹುವಚನದಲ್ಲಿ ಉತ್ತರ ಅಮೆರಿಕದ) ಕುರುಚಲು ಮೇಡು.


  • logo