logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Adamite
ನಾಮವಾಚಕ
  • ಆಡಂನ ಸಂತಾನ; ಮನುಷ್ಯ.
  • ಬತ್ತಲೆ ಮನುಷ್ಯ; ನಗ್ನ; ಆಡಂನಂತೆ ಬತ್ತಲೆಯಾಗಿ ವಾಸಿಸುವ ಪಂಥದವನು.
  • (ಬಹುವಚನ) ಆಡಂ ವಂಶಗಳು; ತಾವು ಮಾತ್ರ ಆಡಂನ ವಂಶೀಕರೆನ್ನುವ ಜನ.

  • adapt
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಪರಿಸ್ಥಿತಿಗಳಿಗೆ) ಹೊಂದಿಕೊ; ಹೊಂದಿಸಿಕೊ.
  • (ಒಂದು ವಸ್ತುವನ್ನು ಮತ್ತೊಂದಕ್ಕೆ) ಹೊಂದಿಸು; ಸರಿಹೊಂದಿಸು.
  • (ಯಾವುದಾದರೂ ಉದ್ದೇಶಕ್ಕಾಗಿ) ಸರಿ ಹೊಂದಿಸು; ಅನುಗೊಳಿಸು.
  • (ಯಾವುದೇ ಉದ್ದೇಶಕ್ಕಾಗಿ, ಉದ್ದೇಶಕ್ಕೆ ತಕ್ಕಂತೆ) ಬದಲಾಯಿಸು; ಪರಿವರ್ತನ ಮಾಡು; ಮಾರ್ಪಡಿಸು; ರೂಪಿಸು: the play is adapted for broadcasting ಆಕಾಶವಾಣಿಯ ಪ್ರಸಾರಕ್ಕೆ ತಕ್ಕಂತೆ ಆ ನಾಟಕವನ್ನು ಬದಲಾಯಿಸಲಾಗಿದೆ.

  • adaptability
    ನಾಮವಾಚಕ
    ಹೊಂದಾಣಿಕೆ; ಒಗ್ಗಿಕೊಳ್ಳುವ ಗುಣ; ಹೊಂದಿಕೊಳ್ಳುವ ಗುಣ.

    adaptable
    ಗುಣವಾಚಕ
  • ಹೊಂದಿಕೊಳ್ಳಬಲ್ಲ.
  • ಹೊಂದಿಸಬಲ್ಲ.

  • adaptation
    ನಾಮವಾಚಕ
  • (ಯಾವುದೇ ವಸ್ತುವನ್ನು, ಕೃತಿಯನ್ನು ಯಾವುದೇ ಉದ್ದೇಶಕ್ಕಾಗಿ) ಹೊಂದಿಸುವಿಕೆ; ಹೊಂದಾವಣೆ.
  • (ಯಾವುದೇ ಉದ್ದೇಶಕ್ಕಾಗಿ) ಬದಲಾಯಿಸುವಿಕೆ; ಪರಿವರ್ತನ; ಮಾರ್ಪಾಡು.
  • (ಮುಖ್ಯವಾಗಿ ಜೀವವಿಜ್ಞಾನ) ಅನುವರ್ತನ; ಅನುರೂಪಣೀಯತೆ; ಹೊಂದಿಕೊಳ್ಳುವಿಕೆ; ಯಾವುದೇ ಜೀವಿ ಯಾ ಜೀವಿಜಾತಿ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ.
  • ರೂಪಾಂತರ; ಬದಲಾಯಿಸಿದ್ದು.

  • adapter
    ನಾಮವಾಚಕ
    ಸಂಯೋಜಕ:
  • ಹೊಂದಾವಣೆಗಾರ; ಸರಿಹೊಂದಿಸುವ ಯಾ ಮಾರ್ಪಾಡು ಮಾಡುವ ವ್ಯಕ್ತಿ.
  • ಅಡಾಪ್ಟರ್‍; ಯಾವುದೇ ಉಪಕರಣದ ಎರಡು ಅಂಗಗಳನ್ನು ಜೋಡಿಸುವ ಸಲಕರಣೆ.

  • adaptive
    ಗುಣವಾಚಕ
    = adaptable.

    adaptor
    ನಾಮವಾಚಕ
    = adapter.

    ADC
    ಸಂಕ್ಷಿಪ್ತ
    aide-de-camp.

    add
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    (ಎರಡು ಯಾ ಹೆಚ್ಚಿನ ಸಂಖ್ಯೆ ಯಾ ಪರಿಮಾಣಗಳನ್ನು) ಕೂಡು; ಸಂಕಲನ ಮಾಡು.add insult to injury ಹುಣ್ಣಿನ ಮೇಲೆ ಬರೆ ಹಾಕು; ಗಾಯದ ಮೇಲೆ ಉಪ್ಪು ಸುರಿ; ಒಬ್ಬನಿಗೆ ಉಂಟು ಮಾಡಿರುವ ನೋವು, ಗಾಯ, ಅನ್ಯಾಯ, ಹಾನಿ, ಮೊದಲಾದವು ಸಾಲದೆಂದು ಅದಕ್ಕೆ ಅಪಮಾನವನ್ನೂ ಸೇರಿಸು.
  • (ಒಂದನ್ನು ಮತ್ತೊಂದಕ್ಕೆ) ಸೇರಿಸು; ಕೂಡಿಸು: add your efforts to mine ನನ್ನ ಪ್ರಯತ್ನಗಳೊಡನೆ ನಿನ್ನದನ್ನೂ ಸೇರಿಸು.
  • ಹೆಚ್ಚಿಸು; ಅಧಿಕಗೊಳಿಸಿ; ವೃದ್ಧಿಗೊಳಿಸು: this adds to our difficulties ಇದು ನಮ್ಮ ಕಷ್ಟಗಳನ್ನು ಹೆಚ್ಚಿಸುತ್ತದೆ.
  • (ಹೇಳಿಕೆಯನ್ನು ಮಾತಿನಲ್ಲಿ ಯಾ ಬರಹದಲ್ಲಿ) ಮುಂದುವರಿಸು: to his previous statement he added this remark ಅವನು ಮುಂಚೆ ಹೇಳಿದ್ದಕ್ಕೆ ಈ ಟೀಕೆಯನ್ನು ಸೇರಿಸಿದ.
  • (ಗಣಿತ) (ಎರಡು ಯಾ ಹೆಚ್ಚಿನ ಸಂಖ್ಯೆ ಯಾ ಪರಿಮಾಣಗಳನ್ನು) ಕೂಡು; ಸಂಕಲನ ಮಾಡು.


  • logo