(ಆಡುಮಾತು) ಏಕಪಂಕ್ತಿ; ಒಂದೇ ಮಾತು; ಸಂಕ್ಷಿಪ್ತವಾದ ಒಂದೇ ಸಾಲು; ಅನೇಕ ವೇಳೆ ಚತುರವಾದ ಯಾ ಸಮಂಜಸವಾದ ಸಂಗ್ರಹ ವಾಕ್ಯ.
one-man
ಗುಣವಾಚಕ
ಪದಗುಚ್ಛ
ಏಕವ್ಯಕ್ತಿಯ; ಒಂದಾಳಿನ; ಒಬ್ಬನೇ ವ್ಯಕ್ತಿ ಮಾಡುವ ಯಾ ನಿರ್ವಹಿಸುವ; ಒಬ್ಬ ಕೆಲಸಗಾರ, ನೌಕರ ಮಾತ್ರ ಇರುವ; ಒಂದಾಳು ಮಾತ್ರವೇ ಅಗತ್ಯವಾದ: a one-man job ಒಂದೇ ಆಳಿನ ಕೆಲಸ (ಇಬ್ಬರು ಬೇಕಿಲ್ಲದ). a one-man bus ಒಬ್ಬನೇ ನಡೆಸುವ ಬಸ್ಸು. a one-man show ಏಕಾಪಾತ್ರಭಿನಯ; ಏಕನಟಾಭಿನಯ; ಒಬ್ಬನೇ ವ್ಯಕ್ತಿಯ ಏರ್ಪಾಡು, ಆಟ, ಪ್ರದರ್ಶನ: it is all a one-man show ಇದೆಲ್ಲ ಒಬ್ಬನೇ ಕಟ್ಟಿದ ಆಟ, ಪ್ರದರ್ಶನ.
one-night stand
ನಾಮವಾಚಕ
ಒಂದೇ ರಾತ್ರಿಯ ಬಿಡಾರ, ಮುಕ್ಕಾಮು, ಕ್ಯಾಂಪು.
ಒಂದು ಊರಿನಲ್ಲಿ (ಸಂಗೀತದ ಕಚೇರಿ, ನೃತ್ಯ, ಮೊದಲಾದವುಗಳ) ಒಂದೇ ಪ್ರದರ್ಶನ; ಏಕಮಾತ್ರ ಪ್ರದರ್ಶನ.
(ಆಡುಮಾತು) ಒಂದೇ ರಾತ್ರಿಯ ಸಂಭೋಗ, ಲೈಂಗಿಕ ಸಂಬಂಧ.
one-off
ಗುಣವಾಚಕ
(ಆಡುಮಾತು) (ವಸ್ತು ಇತ್ಯಾದಿ) ಏಕಮಾತ್ರವಾಗಿ ಮಾಡಿದ; ಅನನ್ಯವಾಗಿ ಮಾಡಿದ, ಮತ್ತೆ ಯಾ ಇನ್ನೊಂದು ಸಲ ಮಾಡದ.
one-one
ಗುಣವಾಚಕ
= one-to-one.
one-piece
ಗುಣವಾಚಕ
(ಈಜುಡುಪು ಮೊದಲಾದವುಗಳ ವಿಷಯದಲ್ಲಿ) ಒಂದೇ–ತುಣುಕಿನ, ತುಂಡಿನ; ಎರಡಾಗಿ ಬೇರೆ ಬೇರೆ ತಯಾರಿಸದೆ ಒಂದೇ ಆಗಿ, ಏಕವಾಗಿ, ಅಖಂಡವಾಗಿ–ತಯಾರಿಸಿದ.