logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lay
ಗುಣವಾಚಕ
  • ಲೌಕಿಕ; ಅದೀಕ್ಷಿತ; (ಕ್ರೈಸ್ತ) ದೀಕ್ಷೆ ಪಡೆದಿಲ್ಲದ; ಕ್ರೈಸ್ತ ಪಾದ್ರಿಯಲ್ಲದ: lay-preachers (ಕ್ರೈಸ್ತ) ದೀಕ್ಷೆ ಪಡೆಯದ ಯಾ ಅದೀಕ್ಷಿತ ಧರ್ಮೋಪದೇಶಕರು.
  • (ಕ್ರೈಸ್ತಧರ್ಮ) ಅದೀಕ್ಷಿತ ಉಪದೇಶಕನ ಯಾ ಅವನು ಮಾಡಿದ.
  • (ಮುಖ್ಯವಾಗಿ ನ್ಯಾಯಶಾಸ್ತ್ರಕ್ಕೆ ಯಾ ವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ) ಕಸಬಿನವನಲ್ಲದ; ವೃತ್ತಿಗೆ ಸೇರದ; ಅಪರಿಣತ; ತಜ್ಞನಲ್ಲದ; ಅತಜ್ಞ; ಪರಿಶ್ರಮವಿಲ್ಲದ: the prevention of disease is too technical for lay interference ರೋಗ ನಿವಾರಣೆಯು ಅಪರಿಣತರು ತಲೆಹಾಕಕೂಡದಂಥ ತಾಂತ್ರಿಕ ವಿಷಯ.
  • (ವೃತ್ತಿ) ಪರಿಣತರಲ್ಲದವರ; ಅಪರಿಣತರ ಯಾ ಅವರು ಮಾಡಿದ.

  • lay
    ನಾಮವಾಚಕ
  • ಹಾಡುಗಬ್ಬ; ಗೀತಕವನ; ಕಥನ ಕವನ; ಹಾಡುವುದಕ್ಕಾಗಿ ರಚಿಸಿದ ಚಿಕ್ಕ ಭಾವಗೀತೆ ಯಾ ಕಥನಕವಿತೆ.
  • (ಕಾವ್ಯಪ್ರಯೋಗ) ಹಾಡು; ಗೀತೆ; ಕವನ; ಪದ್ಯ.
  • (ಕಾವ್ಯಪ್ರಯೋಗ) ಹಕ್ಕಿಗಳ ಹಾಡು, ಉಲಿ.

  • lay
    ಕ್ರಿಯಾಪದ
    1lie ಪದದ ಭೂತರೂಪ.

    lay brother
    ನಾಮವಾಚಕ
    ಕಾಯಕದಣ್ಣ; ಕಾಯಕದ ತಮ್ಮ; (ಕ್ರೈಸ್ತ)ಮತ ದೀಕ್ಷೆಯನ್ನು ಪಡೆದು ಪಾದ್ರಿ ಉಡುಪನ್ನು ಧರಿಸುವ, ಆದರೆ ಇತರ ಕರ್ತವ್ಯಗಳಿಂದ ವಿನಾಯತಿ ಪಡೆದು, ದೈಹಿಕ ದುಡಿಮೆಯಲ್ಲಿ ನಿಯುಕ್ತನಾಗಿರುವವನು ಯಾ ತೊಡಗಿರುವವನು.

    lay clerk
    ನಾಮವಾಚಕ
  • ಚರ್ಚುಗಾಯಕ; ಕೆಥೀಡ್ರಲ್‍ ಯಾ ಕೊಲಿಜಿಯೇಟ್‍ ಚರ್ಚಿನ ಗಾಯಕ; (ಕ್ರೈಸ್ತ) ಪ್ರಮುಖ ಆರಾಧನಾ ಮಂದಿರದ ಯಾ ಕಾಲೇಜು ಚರ್ಚಿನ ಗಾಯಕ.
  • ಪ್ಯಾರಿಷ್‍ ಅಧಿಕಾರಿ; ಪ್ರಾಂತ ಕ್ರೈಸ್ತಮಂದಿರದ ಲೌಕಿಕ ಅಧಿಕಾರ.

  • lay communion
    ನಾಮವಾಚಕ
  • (ಚರ್ಚಿನ) ಲೌಕಿಕ ಯಾ ದೀಕ್ಷೆ ಪಡೆಯದ ಸದಸ್ಯತ್ವ.
  • ಲೌಕಿಕ ಸಹಭಾಗಿತ್ವ; ಪ್ರಭುಭೋಜನದಲ್ಲಿ ಲೌಕಿಕರೂ ಭಾಗವಹಿಸುವಿಕೆ ಯಾ ಸಂಸ್ಕಾರ ಪಡೆಯುವಿಕೆ.

  • lay day
    ನಾಮವಾಚಕ
    ಹಡಗಿಗೆ ಸರಕನ್ನು ತುಂಬಲು ಯಾ ಹಡಗಿನಿಂದ ಸರಕನ್ನು ಇಳಿಸಲು ಕೊಡುವ ಒಂದು ದಿನದ ಅವಕಾಶ.

    lay deacon
    ನಾಮವಾಚಕ
    (ಕ್ರೈಸ್ತಧರ್ಮ) ಲೌಕಿಕ ಡೀಕನ್‍; ಡೀಕನ್‍ ವರ್ಗಕ್ಕೆ ಸೇರಿದ್ದು ಲೌಕಿಕ ಉದ್ಯೋಗವನ್ನೂ ಮಾಡುವವ.

    lay figure
    ನಾಮವಾಚಕ
  • ಮಾದರಿ ಗೊಂಬೆ; ಮಾನವ ವಿಗ್ರಹ, ಪ್ರತಿಮೆ; ಮನುಷ್ಯನ ಗೊಂಬೆ; ಮನುಷ್ಯಾಕೃತಿ ಮಾದರಿ; ಉಡುಪು ಮೊದಲಾದವನ್ನು ಹಾಕಿ ಮಾದರಿ ನೋಡುವುದಕ್ಕಾಗಿ ಮರದ ತುಂಡುಗಳನ್ನು ಸೇರಿಸಿ ರಚಿಸಿದ, ಕಲಾವಿದರು ಬಳಸುವ ಮನುಷ್ಯಾಕೃತಿ.
  • (ಕಾದಂಬರಿ ಮೊದಲಾದವುಗಳಲ್ಲಿನ) ಅವಾಸ್ತವಿಕ – ಪಾತ್ರ, ವ್ಯಕ್ತಿ.
  • ಅನಾಮಧೇಯ; ಅಗಣ್ಯ (ಮನುಷ್ಯ); ಅಪ್ರಧಾನ ವ್ಯಕ್ತಿ; ಲೆಕ್ಕಕ್ಕಿಲ್ಲದವನು; ಗಣನೆಗೆ ಬಾರದ ವ್ಯಕ್ತಿ.

  • lay lord
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಪಾರ್ಲಿಮಂಟಿನ ಶ್ರೀಮಂತ ಸಭೆಯ ನ್ಯಾಯವ್ಯವಹಾರ ಕಾರ್ಯದಲ್ಲಿ ಭಾಗವಹಿಸದ ‘ಪಿಯರ್‍’ ಅಂತಸ್ತಿನ ಸದಸ್ಯ; ‘ಲಾ ಲಾರ್ಡ್‍’ ಅಲ್ಲದ ‘ಪಿಯರ್‍’ ಅಂತಸ್ತಿನವನು.


    logo