logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

in-limine
ಕ್ರಿಯಾವಿಶೇಷಣ
ಮೊದಲಿಗೆ; ಪ್ರಥಮತಃ.

in-off
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಬಿಲಿಯರ್ಡ್ಸ್‍) ಒಂದರ ತರುವಾಯ ಇನ್ನೊಂದು ಚೆಂಡನ್ನು ಚೀಲಕ್ಕೆ ತಳ್ಳುವುದು, ತುಂಬುವುದು.

in-patient
ನಾಮವಾಚಕ
(in patient ಎಂದೂ ಪ್ರಯೋಗ) (ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವ) ಒಳರೋಗಿ.

in-tray
ನಾಮವಾಚಕ
(ಒಂದು ಕಚೇರಿ, ಸಂಸ್ಥೆ, ಮೊದಲಾದವುಗಳ) ಪ್ರವೇಶಪೆಟ್ಟಿಗೆ; ಒಳಕ್ಕೆ ಬರುವ ಕಾಗದಪತ್ರಗಳು ಮೊದಲಾದವುಗಳಿಗೆ ಇಟ್ಟಿರುವ ಟ್ರೇ, ಪೆಟ್ಟಿಗೆಖಾನೆ.

inability
ನಾಮವಾಚಕ
  • ಅಸಾಮರ್ಥ್ಯ; ಅಶಕ್ತತೆ; ಕೈಯಲ್ಲಾಗದಿರುವುದು.
  • ಅಧಿಕಾರರಾಹಿತ್ಯ ಯಾ ಸಾಧನರಾಹಿತ್ಯ; ಅಧಿಕಾರ, ಶಕ್ತಿ ಯಾ ಸಾಧನೋಪಾಯ – ಇಲ್ಲದಿರುವುದು.

  • inaccessibility
    ನಾಮವಾಚಕ
  • ತಲುಪಲಾಗದಿರುವುದು; ದುರ್ಗಮತೆ; ದುಷ್ಪ್ರಾಪ್ಯತೆ.
  • ಅಪ್ರವೇಶ್ಯತೆ.
  • (ವ್ಯಕ್ತಿಯ ವಿಷಯದಲ್ಲಿ) ಅಸುಲಭತೆ; ಸುಲಭವಲ್ಲದಿರುವುದು; ಸ್ನೇಹ, ಪ್ರಭಾವ, ಸಲಿಗೆಗಳಿಗೆ ಎಡೆಗೊಡದಿರುವುದು.

  • inaccessible
    ಗುಣವಾಚಕ
  • ಎಟುಕದ; ತಲುಪಲಾಗದ; ಮುಟ್ಟಲಾಗದ; ದುರ್ಗಮ.
  • ಅಪ್ರವೇಶ್ಯ; ಪ್ರವೇಶಿಸಲಾಗದ.
  • (ವ್ಯಕ್ತಿಗಳ ವಿಷಯದಲ್ಲಿ) ಸುಲಭವಲ್ಲದ; ಸಈಪಿಸಲಾಗದ; ಹತ್ತಿರ ಸೇರಿಸದ, ಬರಗೊಡಿಸದ; ಸಲಿಗೆ, ಪ್ರಭಾವ, ಸ್ನೇಹಗಳಿಗೆ – ಎಡೆಗೊಡದ, ಆಸ್ಪದವೀಯದ.

  • inaccessibly
    ಕ್ರಿಯಾವಿಶೇಷಣ
  • ತಲುಪಲಾಗದಂತೆ; ದುರ್ಗಮವಾಗಿ; ಮುಟ್ಟಲಾಗದ ರೀತಿಯಲ್ಲಿ.
  • ಪ್ರವೇಶಿಸಲಾಗದಂತೆ; ಅಪ್ರವೇಶ್ಯವಾಗಿ.
  • (ವ್ಯಕ್ತಿಗಳ ವಿಷಯದಲ್ಲಿ) ಸುಲಭನಾಗಿರದೆ; ಸಲಿಗೆ, ಪ್ರಭಾವ, ಸ್ನೇಹಗಳಿಗೆ ಎಡೆಗೊಡದಂತೆ.

  • inaccuracy
    ನಾಮವಾಚಕ
    ಸರಿಯಲ್ಲದಿರುವುದು; ತಪ್ಪಾಗಿರುವುದು; ಅನಿಷ್ಕೃಷ್ಟತೆ; ಕರಾರುವಾಕ್ಕಲ್ಲದಿರುವುದು.

    inaccurate
    ಗುಣವಾಚಕ
    ಸರಿಯಲ್ಲದ; ತಪ್ಪಾದ; ನಿಷ್ಕೃಷ್ಟವಲ್ಲದ; ಕರಾರುವಾಕ್ಕಾಗಿಲ್ಲದ.


    logo