logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrater
ನಾಮವಾಚಕ
= barrator.

barrator
ನಾಮವಾಚಕ
  • (ನ್ಯಾಯಶಾಸ್ತ್ರ) ವ್ಯಾಜ್ಯ – ಕೋರ, ಕುಳಿ; ವ್ಯಾಜ್ಯ ಹೂಡಿ ಪೀಡಿಸುವವನು.
  • ಜಗಳ ತಂದಿಕ್ಕುವವ; ಕಲಹ – ಪ್ರೇರಕ, ಚೋದಕ; ಕಲಹೋತ್ಪಾದಕ.
  • ಹುದ್ದೆ ವ್ಯಾಪಾರಿ; ಚರ್ಚಿನ, ಸರ್ಕಾರದ ಹುದ್ದೆಯನ್ನು ಯಾ ಹುದ್ದೆಯಲ್ಲಿ ಬಡತಿಯನ್ನು ಮಾರುವವನು ಯಾ ಕೊಳ್ಳುವವನು.
  • (ನೌಕಾಯಾನ, ನ್ಯಾಯಶಾಸ್ತ್ರ) ನಾವಿಕ ದಗಾಕೋರ; ಹಡಗಿನ ಮಾಲಿಕನಿಗೆ ಮೋಸದಿಂದ ನಷ್ಟವುಂಟು ಮಾಡುವ ನೌಕಾಧಿಕಾರಿ.
  • ಲಂಚಕೋರ ನ್ಯಾಯಾಧೀಶ.

  • barratrous
    ಗುಣವಾಚಕ
  • ಜಗಳಂಟಿ; ಕಲಹ ಪ್ರೇರಕ.
  • (ನೌಕಾಯಾನ, ನ್ಯಾಯಶಾಸ್ತ್ರ) ಮೋಸದ; ವಂಚನೆಯ.

  • barratrously
    ಕ್ರಿಯಾವಿಶೇಷಣ
  • ಜಗಳಗಂಟಿಯಂತೆ.
  • (ನೌಕಾಯಾನ, ನ್ಯಾಯಶಾಸ್ತ್ರ) ಮೋಸದಿಂದ.

  • barratry
    ನಾಮವಾಚಕ
  • (ನೌಕಾಯಾನ, ನ್ಯಾಯಶಾಸ್ತ್ರ) (ನೌಕಾಧಿಕಾರಿಗಳು ಯಾ ನಾವಿಕ ತಂಡ ಹಡಗಿನ ಮಾಲಿಕನಿಗೆ ನಷ್ಟವಾಗುವಂತೆ ಮಾಡುವ) ಮೋಸ; ವಂಚನೆ; ಉಪೇಕ್ಷೆ, ಅಸಡ್ಡೆ.
  • (ಚರಿತ್ರೆ) (ನ್ಯಾಯಶಾಸ್ತ್ರ) ವ್ಯಾಜ್ಯಗಾರಿಕೆ; ಖಟ್ಲೆಕುಳಿತನ.
  • ಹುದ್ದೆ ವ್ಯಾಪಾರ; ಸರ್ಕಾರದ ಹುದ್ದೆಯನ್ನು ಯಾ ಹುದ್ದೆಯಲ್ಲಿ ಬಡತಿಯನ್ನು ಮಾರುವಿಕೆ ಯಾ ಕೊಳ್ಳುವಿಕೆ.
  • (ಸ್ಕಾಟ್ಲಂಡ್‍ ನ್ಯಾಯಶಾಸ್ತ್ರ) (ನ್ಯಾಯಾಧೀಶನ) ಲಂಚಗುಳಿತನ; ಲಂಚಕೋರತನ.

  • barre
    ನಾಮವಾಚಕ
    (ವ್ಯಾಯಾಮ ಮಾಡುವಾಗ ಸಮತೋಲನವನ್ನು ಕಾಪಾಡಿಕೊಳ್ಳಲು ನರ್ತಕರು ಬಳಸುವ, ಸೊಂಟದ ಮಟ್ಟಕ್ಕೆ ಬರುವ) ಅಡ್ಡಕಂಬಿ.

    barred
    ಗುಣವಾಚಕ
  • ಕಂಬಿಹಾಕಿದ; ಕಂಬಿಯುಳ್ಳ; ಕಂಬಿಗಳನ್ನು ಹಾಕಿ ಭದ್ರಪಡಿಸಿದ ಯಾ ಕಂಬಿಗಳಿಂದ ಆವೃತವಾದ.
  • (ಬಂದರಿನ ವಿಷಯದಲ್ಲಿ) ಮರಳುರಾಶಿಯಿಂದ ತಡೆಗಟ್ಟಿದ.
  • (ಗರಿ, ಬಟ್ಟೆ, ಮೊದಲಾದವುಗಳ ವಿಷಯದಲ್ಲಿ) ಪಟ್ಟೆಗಳುಳ್ಳ; ಪಟ್ಟೆಪಟ್ಟೆಯ.

  • barrel
    ನಾಮವಾಚಕ ನುಡಿಗಟ್ಟು
  • ಬ್ಯಾರಲ್ಲು; ಪೀಪಾಯಿ.
  • ಬ್ಯಾರಲ್ಲು; ಪೀಪಾಯಿ ಅಳತೆ; ಸಾಮಾನ್ಯವಾಗಿ 30 ರಿಂದ 40 ಘನ ಗ್ಯಾಲನ್ನುಗಳಷ್ಟರ ಅಳತೆ.
  • ಪೀಪಾಯಿಯಲ್ಲಿ ತುಂಬಿರುವ ಪದಾರ್ಥ.
  • (ಗಡಿಯಾರ, ಯಂತ್ರ, ಮೊದಲಾದವುಗಳಲ್ಲಿರುವ) ಉರುಳೆ; ಉರುಳು ಕೊಳವಿ; ತಿರುಗು ಪೀಪಾಯಿ.
  • (ಪೆನ್ನು ಮೊದಲಾದವುಗಳ) ಉರುಳೆ ಭಾಗ; ಪೀಪಾಯಿ (ಆಕಾರದ) ಒಡಲು.
  • (ಕುದುರೆ ಮೊದಲಾದವುಗಳ) ಮುಂಡ.
  • (ಬಂದೂಕಿನ) ನಳಿಕೆ; ಕೊಳವಿ; ನಳಿಗೆ.
  • (ಯಾವುದರದೇ) ಹೆಚ್ಚು, ತುಂಬು, ಭಾರಿ – ಪ್ರಮಾಣ: a barrel of fun ಭಾರಿ ತಮಾಷೆ.

  • barrel
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಪೀಪಾಯಿಯಲ್ಲಿ – ಹಾಕು, ತುಂಬು. (ಅಮೆರಿಕನ್‍ ಪ್ರಯೋಗ, ಅಶಿಷ್ಟ) (ವಾಹನಗಳನ್ನು) ಬಹುವೇಗವಾಗಿ ಓಡಿಸು, ನಡೆಸು.

    barrel roof
    ನಾಮವಾಚಕ
    ಪೀಪಾಯಿ ಚಾವಣಿ; ಉರುಳೆ ಮಾಳಿಗೆ; ದಂಬೆ ಮಾಡ; ಅರ್ಧ ಉರುಳೆಯಾಕಾರದ, ಅಂದರೆ ನಿಮ್ನತಲದ, ಚಾವಣಿ.


    logo