logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oncoming
ಗುಣವಾಚಕ
ಮುಂದುಗಡೆಯಿಂದ, ಎದುರುಗಡೆಯಿಂದ ಬರುವ.

oncoming
ನಾಮವಾಚಕ
  • ಆಗಮನ; ಹತ್ತಿರ ಬರುವುದು.
  • ಪ್ರಾರಂಭ; ಶುರು.

  • oncost
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಮೇಲುವರಿ ವೆಚ್ಚ; ಹೆಚ್ಚುವರಿ ಖರ್ಚು; ವ್ಯಾಪಾರ ವ್ಯವಹಾರಕ್ಕೆ ನೇರವಾಗಿ ಸಂಬಂಧಿಸಿರದ, ಆಡಳಿತ, ಕಚೇರಿ ಪೂರೈಕೆ, ಸಾಲದ ಮೇಲಿನ ಬಡ್ಡಿ, ಮೊದಲಾದ ಖರ್ಚುಗಳು.

    OND
    ಸಂಕ್ಷಿಪ್ತ
    (ಯುನೈಟೆಡ್‍ ಕಿಂಗ್ಡಮ್‍ನಲ್ಲಿ) Ordinary National Diploma.

    one
    ಗುಣವಾಚಕ ಪದಗುಚ್ಛ
  • (ಸೊನ್ನೆ ಯಾ ಭಿನ್ನಾಂಕ ಯಾ ಬಹುವಚನ ಅಲ್ಲದ ಪ್ರಥಮ ಪೂಣಾಂಕವೂ, a, an ಎಂಬ ಏಕಾರ್ಥವಾಚಿಗಳಿಗೆ ಸಮಾನಾರ್ಥಕವೂ ಆದ) ಒಂದು; ಒಬ್ಬ; ಏಕ: one table ಒಂದು ಮೇಜು. one egg ಒಂದು ಮೊಟ್ಟೆ. one person ಒಬ್ಬ (ವ್ಯಕ್ತಿ).
  • (a, an ಎಂಬ ಅನಿರ್ದೇಶಕ ಗುಣವಾಚಿಗಳ ಪರ್ಯಾಯವಾಗಿ ಉಕ್ತ ವಿಶೇಷ್ಯ, ಯಾ ಅಧ್ಯಾಹಾರ ವಿಶೇಷ್ಯ ಯಾ ನಾಮಪದದೊಡನೆ ಪ್ರಯೋಗ) ಒಬ್ಬ ವ್ಯಕ್ತಿ ಯಾ ಒಂದು ವಸ್ತು: one of them lost his hat (one person ಎಂದರ್ಥ, person ಎಂಬುದು ಅಧ್ಯಾಹಾರ) ಅವರಲ್ಲಿ ಒಬ್ಬನು ತನ್ನ ಹ್ಯಾಟನ್ನು ಕಳೆದುಕೊಂಡನು. one of the best ಶ್ರೇಷ್ಠವಾದವುಗಳಲ್ಲಿ ಒಂದು.
  • ಒಂದು; ನಿರ್ದಿಷ್ಟವಾದ, ಆದರೆ ಸ್ಪಷ್ಟವಾಗಿ ಹೇಳಿಲ್ಲದ (ಮುಖ್ಯವಾಗಿ ಇನ್ನೊಂದರೊಡನೆ ಹೋಲಿಸುವಾಗ): that is one view ಅದು ಒಂದು ಅಭಿಪ್ರಾಯ. one thing after another ಒಂದಾದ ಮೇಲೊಂದು.
  • (ಆಡುಮಾತು) (ಒತ್ತಿ ಹೇಳುವಾಗ) ಒಂದು ಗಮನಾರ್ಹವಾದ: that is one difficult question ಅದು ಒಂದು ಕ್ಲಿಷ್ಟ ಪ್ರಶ್ನೆ.
  • ಒಂದೇ; ಒಬ್ಬನೇ; ಏಕಮಾತ್ರ; ಏಕಮೇವ: that is the one way to win ಗೆಲ್ಲಲು ಅದೊಂದೇ ದಾರಿ. the one reality is the Supreme Spirit ಏಕಮಾತ್ರ ಸತ್ಯವೆಂದರೆ ಪರಮಾತ್ಮ. the one man who can do it ಅದನ್ನು ಮಾಡಬಲ್ಲ ಏಕಮಾತ್ರ ವ್ಯಕ್ತಿ.
  • ಒಂದೇ ಆಗಿರುವ; ಒಟ್ಟಿನ; ಒಟ್ಟಾಗಿರುವ; ಬೇರೆಬೇರೆಯಲ್ಲದ; ಬೇರ್ಪಟ್ಟಿಲ್ಲದ; ಅವಿಭಕ್ತ: they all live in one family ಅವರೆಲ್ಲ ಒಂದೇ, ಅವಿಭಕ್ತ, ಒಟ್ಟು–ಕುಟುಂಬದಲ್ಲಿ ವಾಸಿಸುತ್ತಿದ್ದಾರೆ.
  • ಒಂದೇ; ಅದೇ; ಏಕ: all the planes flew in one direction ಎಲ್ಲ ವಿಮಾನಗಳೂ ಒಂದೇ ದಿಕ್ಕಿನಲ್ಲಿ ಹಾರಿಹೋದವು. they all cried out with one voice ಅವರೆಲ್ಲ ಒಂದೇ ದನಿಯಿಂದ, ಏಕಕಂಠದಿಂದ, ಒಕ್ಕೊರಲಿನಿಂದ ಕೂಗಿದರು. of one opinion ಏಕಾಭಿಪ್ರಾಯದ.
  • (ಯಾವುದೇ) ಒಂದು ಯಾ (ಯಾವನೇ) ಒಬ್ಬ: no one man is equal to the task (ಯಾವನೇ) ಒಬ್ಬ ವ್ಯಕ್ತಿ ಆ ಕೆಲಸವನ್ನು ನಿಭಾಯಿಸಲಾರ.
  • ಅವಿಭಾಜ್ಯ; ಅಖಂಡ; ಇಡೀ; ಪೂರ್ಣ: it is one whole ಅದು ಒಂದು ಅಖಂಡ, ಪೂರ್ಣ ವಸ್ತು.

  • one
    ನಾಮವಾಚಕ ಪದಗುಚ್ಛ
    (ಹಲವೊಮ್ಮೆ ವಾಚ್ಯವಾಗಿಯೋ ಸೂಚ್ಯವಾಗಿಯೋ ಹಿಂದೆ ಬಳಸಿರುವ ನಾಮಪದದ ಪುನರುಕ್ತಿಯನ್ನು ತಪ್ಪಿಸಲು ಅದರ ಪ್ರತಿಯಾಗಿ ಬಳಸುವ ಪರ್ಯಾಯ ನಾಮ).
    1. ಒಂದು; ಏಕ (ಸಂಖ್ಯೆಯ ಹೆಸರು).
    2. ಒಂದರಿಂದ ಎಣಿಸಲ್ಪಟ್ಟ, ಸೂಚಿಸಲ್ಪಟ್ಟ ವಸ್ತು.
  • (ಸಂಖ್ಯೆಯಾಗಿ) ಒಂದು; ಏಕ; ಒಂದು ಮಾನ: one is half of two ಒಂದು ಎರಡರ ಅರ್ಧ. write down a one ಒಂದು ಒಂದನ್ನು ಬರೆ. write down three ones ಮೂರು ಒಂದುಗಳನ್ನು ಬರೆ. they came in ones and twos ಅವರು; ಒಬ್ಬೊಬ್ಬನಾಗಿ ಇಬ್ಬಿಬ್ಬರಾಗಿ ಬಂದರು, ಯಾ ಅವು ಒಂದೊಂದು ಎರಡೆರಡಾಗಿ ಬಂದುವು.
  • ಒಬ್ಬ ಯಾ ಒಂದು ಯಾ ಒಂದು ಉದಾಹರಣೆ (ಕೆಲವೊಮ್ಮೆ ಹಿಂದೆ ಹೇಳಿದ ಯಾ ಸೂಚಿತವಾದ ನಾಮವಾಚಕವನ್ನು ಸೂಚಿಸುತ್ತದೆ): I lose a neighbour, and you gain one ನನಗೊಬ್ಬ ನೆರೆಯುವ ನಷ್ಟ, ನಿನಗೊಬ್ಬ ನೆರೆಯುವ ಲಾಭ; ನಾನೊಬ್ಬ ನೆರೆಯವನನ್ನು ಕಳೆದುಕೊಂಡೆ, ನೀನೊಬ್ಬನನ್ನು ಪಡೆದುಕೊಂಡೆ. the big book and the little one ಆ ದೊಡ್ಡ ಪುಸ್ತಕ ಮತ್ತು ಆ ಚಿಕ್ಕ ಪುಸ್ತಕ (ಚಿಕ್ಕದು). pick me out a good one, some good ones ಒಳ್ಳೆಯ ಒಂದನ್ನು, ಒಳ್ಳೆಯ ಕೆಲವನ್ನು ನನಗಾಗಿ ಆರಿಸಿಕೊಡು. which one(or ones) do you like? ನಿನಗೆ ಯಾವುದು (ಯಾ ಯಾವುವು) ಇಷ್ಟ? what kind of a one do you like? ನಿಮಗೆ ಯಾವ ಬಗೆಯದು ಇಷ್ಟ? that one, the one in the window, will do ಆ ಒಂದು, ಕಿಟಕಿ ಮೇಲಿದೆಯಲ್ಲ ಅದು, ಅದೊಂದು ಸಾಕು.
  • (ಆಡುಮಾತು) (ಮದ್ಯದ ವಿಷಯದಲ್ಲಿ) ಒಂದು ಗುಟುಕು; ಒಂದು ಸಲ ಕುಡಿಯುವಷ್ಟು: have a quick one ಬೇಗ ಒಂದು ಗುಟುಕು (ಮದ್ಯ) ಕುಡಿ. have one on me ನನ್ನ ಖರ್ಚಿನಲ್ಲಿ ಒಂದು ಗುಟುಕು ಕುಡಿ.
  • (ಕಥೆ, ಹಾಸ್ಯೋಕ್ತಿ, ಸುದ್ದಿ, ಮೊದಲಾದವುಗಳ ವಿಷಯದಲ್ಲಿ) ಇದು, ಈ ಕಥೆ, ಹಾಸ್ಯೋಕ್ತಿ, ಇತ್ಯಾದಿ: have you heard the one about the dog that could play poker? ಪೋಕರ್‍ ಆಟ ಆಡಬಲ್ಲ ನಾಯಿಯ ವಿಚಾರವನ್ನು, ಕಥೆಯನ್ನು ಕೇಳಿದ್ದೀಯಾ? the one about the frog ಕಪ್ಪೆಯ ಕಥೆ.
  • ಒಂದರ ಸಂಖ್ಯಾ ಸಂಕೇತ (I, i, l).
  • (ಯಾವುದೇ ವಸ್ತುಗಳ ಪೈಕಿ) ಒಂದು: they now sell scores where they sold ones ಹಿಂದೆ ಒಂದೊಂದು ಮಾರುತ್ತಿದ್ದಲ್ಲಿ ಈಗ ಇಪ್ಪತ್ತಿಪ್ಪತ್ತು ಮಾರುತ್ತಾರೆ. this is the only one left ಇದೊಂದೇ ಉಳಿದಿರುವುದು.
  • (ಬ್ರಿಟಿಷ್‍ ಪ್ರಯೋಗ) ಪೌಂಡಿನ ನೋಟು; (ಅಮೆರಿಕನ್‍ ಪ್ರಯೋಗ) ಡಾಲರಿನ ಬಿಲ್ಲು, ನೋಟು, ಇತ್ಯಾದಿ.
  • ಒಂದು ಪೆಟ್ಟು, ಹೊಡೆತ (ರೂಪಕವಾಗಿ ಸಹ): I gave him one in the eye ಅವನಿಗೆ ಕಣ್ಣಿನ ಮೇಲೆ ಒಂದು (ಹೊಡೆತ) ಕೊಟ್ಟೆ. that was a nasty one in the eye for the liberals (ರೂಪಕವಾಗಿ) ಲಿಬರಲ್‍ ಪಕ್ಷದವರಿಗೆ ಅದೊಂದು ಭಾರಿ ಹೊಡೆತ ಬಿದ್ದಂತಾಯಿತು, ಭಾರಿ ತೇಜೋಭಂಗ ಆದಂತಾಯಿತು.

  • one
    ಸರ್ವನಾಮ ಪದಗುಚ್ಛ
    (ಷಷ್ಠೀ ವಿಭಕ್ತಿ one’s; ದ್ವಿತೀಯಾ one; ಆತ್ಮಾರ್ಥಕ oneself).
  • (ಇಂತಹ) ಒಬ್ಬ; ಒಂದು; ಹೆಸರಿಸಿದ ಯಾ ಬಣ್ಣಿಸಿದ ಬಗೆಯ (ಯಾವನೇ, ಯಾವುದೇ) ವಸ್ತು ಯಾ ವ್ಯಕ್ತಿ: little ones
    1. ಚಿಕ್ಕವರು; ಚಿಣ್ಣರು; ಸಣ್ಣವರು; ಪುಟಾಣಿಗಳು.
    2. ಚಿಕ್ಕವು; ಸಣ್ಣವು; ಪುಟ್ಟವು; ಮರಿಗಳು: dear ones ಪ್ರಿಯರಾದವರು; ಪ್ರಿಯವಾದವು. behaved like one frenzied ಆವೇಶಗೊಂಡವನಂತೆ, ಉನ್ಮತ್ತನಂತೆ ವರ್ತಿಸಿದ. what a one he is for making excuses! ಸಬೂಬು ಹೇಳುವುದರಲ್ಲಿ ಎಂಥಾ ಆಸಾಮಿ ನೆವ ಹೇಳುವುದರಲ್ಲಿ ಎಷ್ಟು ನಿಸ್ಸೀಮ! he was one who had an eye for such mysteries ಅಂತಹ ವಿಚಿತ್ರ ರಹಸ್ಯಗಳನ್ನು ಗುರುತಿಸುವವರಲ್ಲಿ ಅವನೂ ಒಬ್ಬ. I bought it from one Srinivas ಶ್ರೀನಿವಾಸ ಎಂಬ ಒಬ್ಬನಿಂದ ನಾನದನ್ನು ಕೊಂಡುಕೊಂಡೆ. like one possessed ದೆವ್ವ ಮೆಟ್ಟಿದವನಂತೆ.
  • (ಇಂಥವನೆಂದು ಹೇಳಿಲ್ಲದ) ಒಬ್ಬ; ಯಾವನೋ ವ್ಯಕ್ತಿ: one came running ಓಡುತ್ತಾ ಬಂದ ಒಬ್ಬ. one is bound to lose in the end ಒಬ್ಬನು ಕೊನೆಯಲ್ಲಿ ಸೋಲಲೇ ಬೇಕು.
  • (ಅನಿರ್ದೇಶಕ ಸರ್ವನಾಮ) ಕೆಲವೊಮ್ಮೆ ಯಾರೇ ಆಗಲಿ, ಒಬ್ಬ, ಒಬ್ಬಳು: if one cuts off one’s nose, one hurts only oneself ಯಾವನೇ ಆಗಲಿ ತನ್ನ ಮೂಗನ್ನು ತಾನೇ ಕತ್ತರಿಸಿಕೊಂಡರೆ, ತನ್ನನ್ನೇ ಗಾಯಗೊಳಿಸಿಕೊಳ್ಳುತ್ತಾನೆ, ಗಾಸಿಗೊಳಿಸಿಕೊಳ್ಳುತ್ತಾನೆ, ಅಷ್ಟೆ. it offends on to be told one is not wanted ತಾನು ಬೇಕಾಗಿಲ್ಲ, ತನ್ನ ಅಗತ್ಯವಿಲ್ಲ, ಎಂದು ಯಾರಾದರೂ ಹೇಳಿದರೆ ಯಾರಿಗೇ ಆಗಲಿ ನೋವಾಗುತ್ತದೆ. one would like to help ಯಾರೇ ಆಗಲಿ ಸಹಾಯ ಮಾಡಲು ಇಷ್ಟ ಪಡುತ್ತಾರೆ.
  • (ಆಡುಮಾತು) ನಾನು: one let it pass, for one did not want to seem mean ನಾನು ಅಲ್ಪಬುದ್ಧಿಯವನೆಂದು ತೋರಲೊಲ್ಲದೆ ನಾನು ಅದನ್ನು ಹೋಗಲಿ ಎಂದು ಬಿಟ್ಟುಬಿಟ್ಟೆ [(ಬ್ರಿಟಿಷ್‍ ಪ್ರಯೋಗ) one ಶಬ್ದದ ಈ ಪ್ರಯೋಗದಲ್ಲಿ, ಅದರ ಬದಲು he, she ಶಬ್ದಗಳನ್ನು ಬಳಸಬಾರದು. (ಬ್ರಿಟಿಷ್‍ ಪ್ರಯೋಗ) ಪ್ರಾಚೀನ ಪ್ರಯೋಗದಲ್ಲಿ one ಬದಲು he, she ಗಳ ಬಳಕೆ ಇತ್ತು. (ಅಮೆರಿಕನ್‍ ಪ್ರಯೋಗ) one ಗೆ ಬದಲು he, she ಗಳನ್ನು ಬಳಸಬಹುದು].

  • one-armed bandit
    ನಾಮವಾಚಕ
    (ಆಡುಮಾತು) ಒಂದು ತೋಳಿನ ಯಂತ್ರ; ತೋಳಿನ ಆಕಾರದ ಹಿಡಿಯನ್ನೆಳೆದು ನಡೆಸುವ ಜೂಜು ಯಂತ್ರ (fruit machine).

    one-eyed
    ಗುಣವಾಚಕ
  • ಒಂದೇ ಕಣ್ಣುಳ್ಳ; ಒಕ್ಕಣ್ಣಿನ; ಒಂದು ಕುರುಡಾದ.
  • (ರೂಪಕವಾಗಿ) (ಅಶಿಷ್ಟ) ಸಣ್ಣತನದ; ಅಲ್ಪತನದ; ತುಚ್ಛ ಬುದ್ಧಿಯ; ಉದಾರವಲ್ಲದ: she was pained at the one-eyed policy of her father towards the workers ಕಾರ್ಮಿಕರ ಬಗೆಗೆ ತನ್ನ ತಂದೆಯು ಅನುಸರಿಸುತ್ತಿದ್ದ ಸಣ್ಣತನದ ನೀತಿಯನ್ನು ಕಂಡು ಆಕೆ ನೊಂದುಕೊಳ್ಳುತ್ತಿದ್ದಳು.

  • one-handed
    ಗುಣವಾಚಕ
    ಒಕ್ಕೈಯ; ಒಂದೇ ಕೈಯಿಂದ ಮಾಡಿದ, ಆದ, ಇತ್ಯಾದಿ.


    logo