logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lawyer
ನಾಮವಾಚಕ ಪದಗುಚ್ಛ
Penang lawyer ಪೆನಾಂಗಿನ ತಾಳೆಯ (ಮರದ) ಕೈಗೋಲು.
  • ಲಾಯರು; ವಕೀಲ; ನ್ಯಾಯವಾದಿ; ಮುಖ್ಯವಾಗಿ ಅಟಾರ್ನಿ ಸಾಲಿಸಿಟರ್‍ (ಸಲಹೆ ವಕೀಲ).
  • ನ್ಯಾಯ ವಿಚಕ್ಷಣ; ನ್ಯಾಯಶಾಸ್ತ್ರ – ಪಂಡಿತ, ಪ್ರವೀಣ, ಪರಿಣತ.

  • lawyerly
    ಗುಣವಾಚಕ
  • ವಕೀಲನ; ಲಾಯರನ.
  • ಲಾಯರನಂಥ.

  • lax
    ಗುಣವಾಚಕ
  • ಸಡಿಲವಾದ; ಅಳ್ಳಕವಾದ; ಶಿಥಿಲವಾದ; ಬಿಗಿಯಿಲ್ಲದ.
  • ದಟ್ಟವಲ್ಲದ; ನಿಬಿಡವಲ್ಲದ; ಒತ್ತಾಗಿಲ್ಲದ; ಅಸಾಂದ್ರ; ಜಾಳುಜಾಳಾದ: lax fibre ಜಾಳುಜಾಳಾದ ಬಟ್ಟೆ.
  • ಅಸಡ್ಡೆಯ; ಅಲಕ್ಷ್ಯದ; ಲಕ್ಷ್ಯಕೊಡದ; ಎಚ್ಚರಿಕೆ ವಹಿಸದ; ಅಜಾಗರೂಕತೆಯ.
  • ಸಡಿಲ; ಕಟ್ಟುನಿಟ್ಟಿಲ್ಲದ; ನಿಯಮನಿಷ್ಠೆಯಿಲ್ಲದ: man of lax morals ಸಡಿಲ ನೀತಿಯ ಮನುಷ್ಯ.
  • ಖಚಿತವಲ್ಲದ; ಅಸ್ಪಷ್ಟ; ಅನಿಷ್ಕೃಷ್ಟ; lax ideas ಅಸ್ಪಷ್ಟ ಭಾವನೆಗಳು.
  • (ಧ್ವನಿವಿಜ್ಞಾನ) ಶಿಥಿಲ; ಶಿಥಿಲೋಚ್ಚಾರಣೆಯ; ಸಡಿಲೋಚ್ಚಾರದ; ಮಾಂಸಖಂಡಗಳನ್ನು ಸಡಿಲಗೊಳಿಸಿ ಉಚ್ಚರಿಸಿದ.

  • lax
    ನಾಮವಾಚಕ
    (ಸ್ವೀಡನ್‍ ಯಾ ನಾರ್ವೆಯ) ಸಾಮನ್‍ ಮೀನು.

    laxative
    ಗುಣವಾಚಕ
    ವಿರೇಚಕ; ಭೇದಿಯಾಗಿಸುವ; ಜುಲಾಬಿನ; ಮಲವಿಸರ್ಜನೆ ಮಾಡಿಸುವ.

    laxative
    ನಾಮವಾಚಕ
    ವಿರೇಚಕ; ಭೇದಿಯೌಷಧ; ಜುಲಾಬಿನ ಮದ್ದು; ಮಲವಿಸರ್ಜನೆ ಮಾಡಿಸುವ ಔಷಧ.

    laxity
    ನಾಮವಾಚಕ
  • ಸಡಿಲತೆ; ಶಿಥಿಲತೆ; ಶೈಥಿಲ್ಯ.
  • ಅಸಾಂದ್ರತೆ; ಜಾಳು; ದಟ್ಟವಲ್ಲದಿರುವಿಕೆ; ಒತ್ತಾಗಿಲ್ಲದಿರುವಿಕೆ.
  • ಅಸಡ್ಡೆ; ಅಲಕ್ಷ್ಯ; ಅಜಾಗರೂಕತೆ.
  • ಕಟ್ಟುನಿಟ್ಟಿಲ್ಲದಿರುವಿಕೆ.
  • ಖಚಿತವಲ್ಲದಿರುವಿಕೆ; ಅಸ್ಪಷ್ಟತೆ; ಅನಿಷ್ಕೃಷ್ಟತೆ.
  • (ಧ್ವನಿವಿಜ್ಞಾನ) (ಉಚ್ಚಾರಣೆಯಲ್ಲಿ) ಶಿಥಿಲತೆ; ಶೈಥಿಲ್ಯ.

  • laxly
    ಕ್ರಿಯಾವಿಶೇಷಣ
  • ಸಡಿಲವಾಗಿ; ಬಿಗಿಯಿಲ್ಲದೆ.
  • ಒತ್ತಾಗಿಲ್ಲದೆ; ದಟ್ಟವಾಗಿಲ್ಲದೆ.
  • ಅಲಕ್ಷ್ಯವಾಗಿ; ಅಜಾಗರೂಕತೆಯಿಂದ.
  • ಕಟ್ಟುನಿಟ್ಟಿಲ್ಲದೆ; ಸಡಿಲವಾಗಿ.
  • ಅಸ್ಪಷ್ಟವಾಗಿ; ಖಚಿತವಲ್ಲದ ರೀತಿಯಲ್ಲಿ.
  • (ಧ್ವನಿವಿಜ್ಞಾನ) (ಉಚ್ಚಾರಣೆಯಲ್ಲಿ) ಶಿಥಿಲವಾಗಿ.

  • lay
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    (ನೌಕಾಯಾನ ಯಾ ಅಸಂಸ್ಕೃತ)
  • (ಒಂದು ಸಮತಲದ ಮೇಲೆ) (ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಇರಿಸು; ಹಾಸು; ಮಡಗು; ಮಲಗಿಸು.
  • (ಒಂದು ನಿರ್ದಿಷ್ಟ ಯಾ ಗೊತ್ತಾದ ಸ್ಥಾನ ಯಾ ಸ್ಥಿತಿಯಲ್ಲಿ) ಇಡು; ಇರಿಸು; ನಿಲ್ಲಿಸು; ಸ್ಥಾಪಿಸು: laid his hand on her arm ಅವಳ ತೋಳಿನ ಮೇಲೆ ತನ್ನ ಕೈಯನ್ನಿಟ್ಟನು. lay a carpet on the floor ಯಾ lay the floor with a carpet ನೆಲದ ಮೇಲೆ ಜಮಖಾನೆ ಹಾಸು. lay the land fallow ಜಮೀನನ್ನು ಪಾಳು ಬಿಡು.
  • ಹಾಕು; ಸ್ಥಾಪಿಸು: lay the foundations ತಳಪಾಯ ಹಾಕು.
  • (ಹೆಣ್ಣು ಪಕ್ಷಿಯ ವಿಷಯದಲ್ಲಿ) (ಮೊಟ್ಟೆ) ಇಡು; ಹಾಕು.
  • ಮಲಗುವಂತೆ – ಕೆಡೆ, ಕೆಡವು; ಅಡ್ಡಡ್ಡಲಾಗಿ ಕೆಳಕ್ಕೆ ಬೀಳಿಸು.
  • (ಗಾಳಿ, ಮಳೆಗಳ ವಿಷಯದಲ್ಲಿ) (ಪಯಿರನ್ನು) ನೆಲಕ್ಕೆ – ಕೆಡವು; ಬೀಳಿಸು, ಉರುಳಿಸು.
  • (ಸಮುದ್ರ, ಗಾಳಿ, ಧೂಳು, ಶಂಕೆ, ಭಯ, ಭೂತ, ಮೊದಲಾದವನ್ನು) ಅಣಗಿಸು; ಅಡಗಿಸು; ನಿವಾರಿಸು; ಶಾಂತಮಾಡು; ಶಮನಗೊಳಿಸು: what shall we do to lay his doubts? ಅವನ ಶಂಕೆಗಳನ್ನು ನಿವಾರಿಸಲು ನಾವೇನು ಮಾಡಬೇಕು?
  • (ವಿಷಯವನ್ನು, ಸಂಗತಿಯನ್ನು) ಪರಿಶೀಲನೆಗಾಗಿ – ಇಡು, ಇರಿಸು, ಮಂಡಿಸು: the foreign secretary etc. will lay the papers on the table ವಿದೇಶ ಕಾರ್ಯದರ್ಶಿ ಮೊದಲಾದ(ಶಾಸನಸಭೆಯ) ಸದಸ್ಯರ ಅವಗಾಹನೆಗಾಗಿ ಕಾಗದ ಪತ್ರಗಳನ್ನು ಮೇಜಿನ ಮೇಲೆ ಇಡುತ್ತಾರೆ.
  • (ಆಧಾರವಾಗಿ ಯಾ ಪ್ರಾರಂಭವಾಗಿ) ಇಡು; ಸ್ಥಾಪಿಸು.
  • (ವ್ಯಕ್ತಿಯ ಮೇಲೆ) ತಪ್ಪು ಹೊರಿಸು; ಆಪಾದನೆ ಮಾಡು; ತಪ್ಪನ್ನು (ವ್ಯಕ್ತಿಯ) ತಲೆಗೆ ಕಟ್ಟು, ಸೆರಗಿಗೆ ಕಟ್ಟು.
  • (ಒಂದು ಸ್ಥಳದಲ್ಲಿ) ಸ್ಥಾಪಿಸು; ನೆಲೆಗೊಳಿಸು: the scene of the tale is laid in Mysore ಕಥೆಯ ದೃಶ್ಯದ ನೆಲೆ ಮೈಸೂರಿನಲ್ಲಿದೆ.
  • (ಬಲೆ, ಜಾಲ, ಬೋನು, ಮೊದಲಾದವನ್ನು) ಇಡು; ಇರಿಸು; ಹಾಕು; ಒಡ್ಡು; ಉರುಳಿಡು: lay a snare, trap ಬೋನಿಡು.
  • (ಯೋಜನೆ, ಹಂಚಿಕೆ, ಮೊದಲಾದವನ್ನು) ತಯಾರಿಸು; ಸಿದ್ಧ ಮಾಡು; ಹಾಕು.
  • (ಮೇಜನ್ನು ಊಟಕ್ಕಾಗಿ) ಸಿದ್ಧಮಾಡು; ಅಣಿ ಮಾಡು.
  • (ಬೆಂಕಿ ಮಾಡಲು) ಕಟ್ಟಿಗೆ ಮೊದಲಾದವನ್ನು – ಸಿದ್ಧಗೊಳಿಸು, ಅಣಿಗೊಳಿಸು.
  • (ಯಾವುದೇ ಮೇಲ್ಮೈ ಮೇಲೆ) (ಜಮಖಾನೆ, ಒಣಹುಲ್ಲು, ಮೊದಲಾದವನ್ನು) ಹಾಸು; ಹೊದೆಸು; ಹರಡು.
  • (ಯಾವುದೇ ಮೇಲ್ಮೈ ಮೇಲೆ) (ಲೋಹವನ್ನು) ಹಚ್ಚು; ಹೊದಿಸು.
  • (ಬಣ್ಣ ಮೊದಲಾದವನ್ನು ಮೇಲ್ಮೈ ಮೇಲೆ ವರಿಸೆಗಳಾಗಿ) ತೊಡೆ; ಬಳಿ; ಹಚ್ಚು; ಲೇಪಿಸು; ಸವರು.
  • (ಅಶಿಷ್ಟ) (ಮುಖ್ಯವಾಗಿ ಹೆಂಗಸನ್ನು) ಸಂಭೋಗಿಸು; ಸಂಭೋಗ ಮಾಡು.
  • (ಹಣ, ತಲೆ, ಪ್ರಾಣ, ಮೊದಲಾದವನ್ನು) ಒಡ್ಡು; ಬಾಜಿಕಟ್ಟು; ಪಣವೊಡ್ಡು; ಪಂಥವಾಗಿಡು; ಪೈಜೆಯಿಡು; ಬಾಜಿಯಾಗಿಡು: I lay you ten to one that he wins ಅವನು ಗೆಲ್ಲುತ್ತಾನೆಂದು ನಾನು ಒಂದಕ್ಕೆ ಹತ್ತು ಬಾಜಿ ಕಟ್ಟುತ್ತೇನೆ.
  • ತೊಡಗಿಸು: lay hounds on scent ವಾಸನೆಯಿಂದ ಸುಳಿವು ತಿಳಿಯಲು, ಜಾದು ತಿಳಿಯಲು ಬೇಟೆ ನಾಯಿಗಳನ್ನು ತೊಡಗಿಸು, ಬಿಡು.
  • (ಅಂಗ ಮೊದಲಾದವನ್ನು) ನಿರ್ದಿಷ್ಟ ಸ್ಥಾನದಲ್ಲಿಟ್ಟುಕೊ: horse laid his ears back ಕುದುರೆ ತನ್ನ ಕಿವಿಗಳನ್ನು ಹಿಂದಕ್ಕೆ ಇಟ್ಟುಕೊಂಡಿತು.
  • (ಫಿರಂಗಿಯನ್ನು) (ಗುರಿಗೆ ಹೊಡೆಯಲು) ಸರಿಯಾದ ಜಾಗದಲ್ಲಿರಿಸು; ತಕ್ಕ ಸ್ಥಾನದಲ್ಲಿರಿಸು.
  • (ಮುಖ್ಯವಾಗಿ ಯಾವುದಕ್ಕೋ ಹಕ್ಕನ್ನು) ಹೂಡು; ಮಂಡಿಸು; ಮುಂದೊಡ್ಡು; ಮುಂದಿಡು: lay claim to ಹಕ್ಕು ಹೂಡು.
  • (ಅರ್ಜಿದಾರನ ವಿಷಯದಲ್ಲಿ) (ನಷ್ಟ ಪರಿಹಾರದ ಮೊತ್ತವನ್ನು) ನಿಶ್ಚಯಿಸು; ಗೊತ್ತು ಮಾಡು; ನಿರ್ಧರಿಸು; ನಿರ್ಣಯಿಸು.
  • (ಕೇಡನ್ನು ಯಾವುದೇ ಕಾರಣದ) ಪರಿಣಾಮವಾಗಿ, ಪರಿಣಾಮವೆಂದು – ನಿರೂಪಿಸು, ತೋರಿಸು.
  • (ದಂಡ, ಆಜ್ಞೆ, ಆಭಾರ, ದೂರು, ನಿಂದೆ, ಹೊರೆ, ತೆರಿಗೆ) ಹಾಕು; ಹೊರಿಸು; ವಿಧಿಸು; ಹೇರು.
  • (ಕೋಲು ಮೊದಲಾದವನ್ನು) ಕೆಳಕ್ಕೆ – ತರು, ಬರಿಸು, ಇಳಿಸು.
  • (ಅಸ್ತಿಭಾರ, ನೆಲ, ಇಟ್ಟಿಗೆಗಳು, ನೀರಿನಡಿಯ ಕೇಬಲ್‍ಗಳನ್ನು, ಮುಖ್ಯವಾಗಿ ಅಡ್ಡಡ್ಡಲಾಗಿ) ಇಡು; ಹೊರಿಸು; ಅಣಿಯಾಗಿಸು; ಅಣಿಗೊಳಿಸು; ಅಳವಡಿಸು.
  • (ಹುರಿಯನ್ನು ಯಾ ಎಳೆಗಳನ್ನು) ಹೊಸೆದು (ಹಗ್ಗ) ಮಾಡು.
  • (ನೌಕಾಯಾನ) (ಭೂಮಿ ಮೊದಲಾದವುಗಳ ವಿಷಯದಲ್ಲಿ) ದಿಗಂತಕ್ಕಿಂತ ಕೆಳಗೆ ಕಾಣುವಷ್ಟು ದೂರ (ಹಡಗನ್ನು) – ತೆಗೆದುಕೊಂಡು ಹೋಗು, ಒಯ್ಯು, ಒಯ್ಯಿ, ನಡೆಸು.
  • (ಯೋಜನೆ, ನಿವೇಶನಗಳನ್ನು) (ಒಂದು ಯೋಜನೆಯ ಪ್ರಕಾರ) ರೂಪಿಸು; ವಿನ್ಯಾಸ ಮಾಡು; ರೂಪುಗೊಳಿಸು; ರೂಪುರೇಖೆ ರಚಿಸು: lay the ground ನೆಲದ (ಮುಖ್ಯವಾಗಿ ಮನೆ ಕಟ್ಟುವ ಜಾಗ, ತೋಟದ ಭೂಮಿ, ಮೊದಲಾದವುಗಳ) ವಿನ್ಯಾಸ ರಚಿಸು.

  • lay
    ನಾಮವಾಚಕ ಪದಗುಚ್ಛ
    in lay (ಹೇಂಟೆಯ ವಿಷಯದಲ್ಲಿ) ನಿಯತಕಾಲಿಕವಾಗಿ ಮೊಟ್ಟೆ ಹಾಕುತ್ತಿರುವ.
  • ಯಾವುದಾದರೂ ಒಂದು (ಮುಖ್ಯವಾಗಿ ದೇಶ) ಇರುವ – ರೀತಿ, ಸ್ಥಾನ ಯಾ ದಿಕ್ಕು.
  • (ಅಶಿಷ್ಟ) ಸಂಭೋಗದಲ್ಲಿನ ಜೊತೆಗಾರ್ತಿ.
  • (ಹಗ್ಗದ ಎಳೆಗಳ, ಹುರಿಯ) ತಿರುಚು; ತಿರುಚಿನ ಮೊತ್ತ ಯಾ ದಿಕ್ಕು.
  • ಉದ್ಯೋಗ; ಕಸುಬು; ವೃತ್ತಿ; ಕೆಲಸ; ಜೀವನೋಪಾಯ.


  • logo