logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

in vitro
ಗುಣವಾಚಕ
(ಜೀವವಿಜ್ಞಾನ) ಪ್ರನಾಳೀಯ; ಪ್ರನಾಳದಲ್ಲಿನ; (ಗಾಜು)ನಳಿಕೆಯಲ್ಲಿನ; ಜೀವಿಯ ಹೊರಗಡೆ – ನಡೆಯುವ, ಆಗುವ, ನಡೆಸುವ; ಅಧಿಜೀವಿಯ: in vitro cultivation of tissues ಪ್ರನಾಳದಲ್ಲಿನ ಊತಕ ಕೃಷಿ, ನಳಿಕೆ – ಬೇಸಾಯ, ಕೃಷಿ.

in vitro
ಕ್ರಿಯಾವಿಶೇಷಣ
ಪ್ರನಾಳದಲ್ಲಿ; ನಳಿಕೆಯಲ್ಲಿ; ಜೀವಿಯ ಹೊರಗಡೆ: reproduction of micro-organism in vitro ಪ್ರನಾಳದಲ್ಲಿ ಆಗುವ ಸೂಕ್ಷ್ಮಜೀವಿಗಳ ಪುನರುತ್ಪಾದನೆ, ಉತ್ಪತ್ತಿ.

in vivo
ಗುಣವಾಚಕ
(ಜೀವವಿಜ್ಞಾನ) ಜೀವಿಯಲ್ಲಿಯ; ಜೀವಿಯ ದೇಹದ ಒಳಗಡೆ ನಡೆಯುವ, ಆಗುವ, ಮಾಡುವ: in vivo synthesis of vitamin D ಜೀವಿಯಲ್ಲಿನ ವಿಟಮಿನ್‍ D ಸಂಶ್ಲೇಷಣೆ.

in vivo
ಕ್ರಿಯಾವಿಶೇಷಣ
ಜೀವಿಯಲ್ಲಿ; ಜೀವಿಯ ದೇಹದ ಒಳಗಡೆ: these micro organisms are not easily destroyed in vivo by ordinary drugs ಸಾಮಾನ್ಯ ಮದ್ದುಗಳಿಂದ ಈ ಸೂಕ್ಷ್ಮಜೀವಿಗಳು ಜೀವಿಯಲ್ಲಿ ಸುಲಭವಾಗಿ ನಾಶವಾಗುವುದಿಲ್ಲ.

in-
ಪೂರ್ವಪ್ರತ್ಯಯ
  • ಅಲ್ಲಿ, ಒಳಗೆ, ಒಳಗಡೆ: incoming.
  • ಮೇಲೆ: induce.
  • ಒಳಕ್ಕೆ: influx.
  • ಕಡೆಗೆ; ಕಡೆ; ದಿಕ್ಕಿನಲ್ಲಿ: ingredient.
  • ಎದುರಾಗಿ; ಅಭಿಮುಖವಾಗಿ.

  • in-
    ಪೂರ್ವಪ್ರತ್ಯಯ
  • ಆಗದ, ಇಲ್ಲದ, ಅಸಾಧ್ಯವಾದ ಎಂಬ ಅರ್ಥದಲ್ಲಿ ಗುಣವಾಚಕಗಳಿಗೆ ಸೇರಿಸುವ ಪೂರ್ವಪ್ರತ್ಯಯ: invisible ನೋಡಲಸಾಧ್ಯವಾದ. inedible ತಿನ್ನಲಾಗದ.
  • ‘ಇಲ್ಲದಿರುವುದು’ ಎಂಬರ್ಥದ ನಾಮವಾಚಕಗಳಿಗೆ ಸೇರಿಸುವ ಪೂರ್ವಪ್ರತ್ಯಯ: inaction ನಿಷ್ಕ್ರಿಯತೆ; ಕ್ರಿಯೆ ಇಲ್ಲದಿರುವುದು.

  • in-built
    ಗುಣವಾಚಕ
    = built-in (1).

    in-house
    ಗುಣವಾಚಕ
    ಆಂತರಿಕ; ಯಾವುದೇ ಸಂಸ್ಥೆ, ವ್ಯಾಪಾರ, ಮೊದಲಾದವುಗಳ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ: in-house staff of translators ಸಂಸ್ಥೆಯ ಆಂತರಿಕ ಭಾಷಾಂತರ ಸಿಬ್ಬಂದಿ.

    in-house
    ಕ್ರಿಯಾವಿಶೇಷಣ
    ಆಂತರಿಕವಾಗಿ; ಹೊರಗಿನ ಸಂಬಂಧವಿಲ್ಲದೆ.

    in-law
    ನಾಮವಾಚಕ
    (ಆಡುಮಾತು) (ಸಾಮಾನ್ಯವಾಗಿ ಬಹುವಚನದಲ್ಲಿ) ವಿವಾಹ ಸಂಬಂಧಿ; ಮದುವೆಯಿಂದಾದ ನೆಂಟ, ಸಂಬಂಧಿ, ಬಂಧು.


    logo