logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barrack
ಅಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಸಿಪಾಯಿಮನೆಗಳಲ್ಲಿ ಇರಿಸು.
  • ( ಸಕರ್ಮಕ ಕ್ರಿಯಾಪದ ಸಹ) (ಕ್ರಿಕೆಟ್‍, ಭಾಷಣ, ಮೊದಲಾದವುಗಳಲ್ಲಿ ಆಟಗಾರರು, ಮೊದಲಾದವರನ್ನು) ಚುಡಾಯಿಸು; ಕೂಗಿ ಗೇಲಿಮಾಡು.
  • ಸಿಪಾಯಿ ಮನೆಗಳಲ್ಲಿ ವಾಸಿಸು.

  • barrack-square
    ನಾಮವಾಚಕ
    ಸಿಪಾಯಿ ಚೌಕ; ಕವಾಯಿತು ಮೈದಾನ; ಸಿಪಾಯಿಮನೆಗಳ ಹತ್ತಿರ, ಕವಾಯಿತು ಮಾಡಲು ಇರುವ ಅಂಗಳ, ಮೈದಾನ.

    barracker
    ನಾಮವಾಚಕ
    ಗೇಲಿಗಾರ; ಕೂಗಿ, ಜೋರಾಗಿ – ಗೇಲಿಮಾಡುವವ.

    barracoon
    ನಾಮವಾಚಕ
    (ಚರಿತ್ರೆ) ಕೈದಿದೊಡ್ಡಿ; ಗುಲಾಮರ ದೊಡ್ಡಿ; ಗುಲಾಮರು, ಕೈದಿಗಳು, ಮೊದಲಾದವರನ್ನು ಕೂಡಿಡುತ್ತಿದ್ದ ಜೋಪಡಿ ಸಾಲು.

    barracouta
    ನಾಮವಾಚಕ
    ಬ್ಯಾರಕೂಟ:
  • ವೆಸ್ಟ್‍ ಇಂಡಿಸ್‍ನ, ಹೊಟ್ಟೆಬಾಕನಾದ, ದೊಡ್ಡ ಕಡಲಈನು. Figure: barracouta
  • ಪೆಸಿಹಿಕ್‍ ಸಾಗರ ಮೊದಲಾದವುಗಳಲ್ಲಿ ದೊರೆಯುವ, ಆಹಾರವಾಗಿ ಬಳಸುವ, ಉದ್ದವೂ ಮೃದುವೂ ಆದ ಒಂದು ಈನು.

  • barracuda
    ನಾಮವಾಚಕ
    = barracouta.

    barrage
    ನಾಮವಾಚಕ
  • (ನದಿ ಮೊದಲಾದವುಗಳ, ಮುಖ್ಯವಾಗಿ ನೈಲ್‍ ನದಿಯ, ಮಾನವ ನಿರ್ಮಿತ) ಅಣೆಕಟ್ಟು; ಅಡ್ಡಗಟ್ಟು; ಪಾತ್ರವನ್ನು ಆಳಮಾಡಲು ಯಾ ಬೇಸಾಯಕ್ಕಾಗಿ ನೀರು ಸಂಗ್ರಹಿಸಲು ಕಟ್ಟಿದ ಕಟ್ಟೆ.
  • (ಸೈನ್ಯ) ಫಿರಂಗಿ ತಡೆ; ಶತ್ರು ಮುಂದೆಬರದಂತೆ ಒಂದು ನಿರ್ದಿಷ್ಟ ಜಾಗದತ್ತ ನಿರಂತರವಾಗಿ, ಭಾರಿಯಾಗಿ ಗುಂಡುಹಾರಿಸುತ್ತ ರಚಿಸಿದ ತಡೆ.
  • (ರೂಪಕವಾಗಿ) (ಪ್ರಶ್ನೆ ಮೊದಲಾದವುಗಳ) ದಾಳಿ; ಸುರಿಮಳೆ; ಒಂದರ ಮೇಲೊಂದು, ನಿರಂತರವಾಗಿ, ಒಂದೇ ಸಮನೆ ಬರುವಿಕೆ.
  • (ಕತ್ತಿವರಸೆ, ಕುದುರೆ ನೆಗೆತ ಮೊದಲಾದ ಕ್ರೀಡೆಗಳಲ್ಲಿ ಗೆಲುವನ್ನು ನಿರ್ಣಯಿಸುವ) ಅಂತಿಮ ಆಟ; ಕೊನೆಯ ಸರದಿ.

  • barrage balloon
    ನಾಮವಾಚಕ
    ತಗ್ಗಿನಲ್ಲಿ ಹಾರಿಬರುವ ಶತ್ರು ವಿಮಾನಗಳಿಗೆ ಅಡಚಣೆಯಾಗುವಂತೆ ತಂತಿಗಳಿಂದ ಯಾ ಬಲೆಗಳಿಂದ ಕಟ್ಟಿ ನಿಲ್ಲಿಸಿದ ಆಕಾಶಬುಟ್ಟಿಗಳ ತಂಡದಲ್ಲಿನ ಒಂದು ಬುಟ್ಟಿ.

    barramundi
    ನಾಮವಾಚಕ
    (ಪ್ರಾಣಿವಿಜ್ಞಾನ) ಬ್ಯಾರಮಂಡಿ; ಶ್ವಾಸಕೋಶಗಳಂಥ ಗಾಳಿಚೀಲಗಳು ಮತ್ತು ಕಿವಿರುಗಳು ಇರುವ, ಅಹಾರವಾಗಿ ಬಳಸುವ, ಕೆಲವೊಮ್ಮೆ ಆರು ಅಡಿಗಳಷ್ಟು ಉದ್ದವಾಗಿ ಬೆಳೆಯುವ, ಆಸ್ಟ್ರೇಲಿಯದ ನದಿಗಳಲ್ಲಿ ಸಿಕ್ಕುವ, ಒಂದು ಸಿಹಿನೀರು ಈನು.

    barrance
    ನಾಮವಾಚಕ
    (ಅಮೆರಿಕನ್‍ ಪ್ರಯೋಗ)
  • ಆಳವಾದ – ಕಮರಿ, ಕಂದರ, ಕೊರಕಲು; ಹೆದ್ದರಿ.
  • ಕಡಿದಾದ ಗುಡ್ಡ.


  • logo