logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ad rem
ಆಖ್ಯಾತಕ ಗುಣವಾಚಕ
ಸಂದರ್ಭೋಚಿತ; ಸಂದರ್ಭಕ್ಕೆ ತಕ್ಕಷ್ಟಿರುವ; ಪ್ರಸಕ್ತವಾದಷ್ಟಿರುವ; (ವಿಷಯ, ಉದ್ದೇಶಗಳನ್ನು) ಬಿಟ್ಟುಹೋಗದ.

ad unguem
ಗುಣವಾಚಕ
(ಚಿತ್ರಣ, ಶಿಲ್ಪ, ಮೊದಲಾದವುಗಳ ವಿಷಯದಲ್ಲಿ) ಅತ್ಯಂತ ಪರಿಷ್ಕೃತವಾದ; ಬಹಳ ಒಪ್ಪವಾದ; ಉತ್ಕೃಷ್ಟವಾಗಿ ತಿದ್ದಿ ನಯಗೊಳಿಸಿದ.

ad unguem factus
ಗುಣವಾಚಕ
= ad unguem.

ad valorem
ಕ್ರಿಯಾವಿಶೇಷಣ
  • (ಸರಕುಗಳ ಮೇಲಿನ ತೆರಿಗೆಯ ವಿಷಯದಲ್ಲಿ) ಬೆಲೆಗೆ ತಕ್ಕಂತೆ; ಕ್ರಯಾನುಸಾರವಾಗಿ; ನಮೂದು ಪಟ್ಟಿಯಲ್ಲಿ ನಮೂದಿಸಿದ ಮೌಲ್ಯದ ಮೇಲೆ ಶೇಕಡವಾರು ದರದಲ್ಲಿ.
  • (ಆಸ್ತಿಯ ಮೇಲಿನ ತೆರಿಗೆಯ ವಿಷಯದಲ್ಲಿ) ಅಂದಾಜು–ಬೆಲೆಯ ಮೇಲೆ, ಬೆಲೆಗೆ ತಕ್ಕಂತೆ.

  • ad valorem
    ಗುಣವಾಚಕ
  • (ಸರಕುಗಳ ಮೇಲಿನ ತೆರಿಗೆಯ ವಿಷಯದಲ್ಲಿ) ಬೆಲೆಗೆ ತಕ್ಕ; ಕ್ರಯಾನುಸಾರವಾದ.
  • (ಆಸ್ತಿಯ ಮೇಲಿನ ತೆರಿಗೆಯ ವಿಷಯದಲ್ಲಿ) ಅಂದಾಜು ಬೆಲೆಯ ಮೇಲಿನ.

  • ad verbum
    ಕ್ರಿಯಾವಿಶೇಷಣ
    ಮಾತಿಗೆ ಮಾತಿಟ್ಟು; ಪದಶಃ; ಶಬ್ದಶಃ, ಅಕ್ಷರಶಃ; ಪದಕ್ಕೆ ಪದ ಇರುವಂತೆ; ಚಾಚೂ ತಪ್ಪದಂತೆ; ಮಕ್ಕಿಕಾ ಮಕ್ಕಿ; ನಕಲು ಮಾಡುವುದು ಮೊದಲಾದವುಗಳಲ್ಲಿ ಮೂಲ ಹೇಗಿದೆಯೋ ಹಾಗೆಯೇ ಇರುವಂತೆ.

    ad verbum
    ಗುಣವಾಚಕ
    ಪದಶಃ ಇರುವ; ಪದಕ್ಕೆ ಪದ ಇರುವ; ಮಕ್ಕಿಕಾಮಕ್ಕಿಯ.

    ad vitam aut culpam
    ಕ್ರಿಯಾವಿಶೇಷಣ
  • (ಮೊದಲಿಗೆ ಊಳಿಗಮಾನ್ಯದ ಹಕ್ಕಿನ, ನಂತರ ನೌಕರಿಯ ವಿಷಯದಲ್ಲಿ) ಬದುಕಿರುವವರೆಗೆ; ಜೀವವಿರುವವರೆಗೆ; ಜೀವಮಾನವೆಲ್ಲಾ; ಜೀವಮಾನಪೂರ್ತಿ.
  • ಒಳ್ಳೆಯ ನಡತೆಯಿರುವವರೆಗೆ; ಸಚ್ಚಾರಿತ್ರ್ಯ ಇರುವವರೆಗೆ; ನಡತೆ ಸರಿಯಾಗಿರುವವರೆಗೆ.

  • ad-
    ಪೂರ್ವಪ್ರತ್ಯಯ
  • ಲ್ಯಾಟಿನ್‍ನಿಂದ ನಿಷ್ಪನ್ನವಾಗಿರುವ, ಚಲನ, ದಿಕ್ಕು ಬದಲಾಯಿಸುವಿಕೆ, ಸೇರಿಸುವಿಕೆ, ಅಂಟಿಕೆ, ಹೆಚ್ಚಳ, ತೀವ್ರತೆ, ಮೊದಲಾದ ಅರ್ಥಗಳಲ್ಲಿ ಇಂಗ್ಲಿಷ್‍ನಲ್ಲಿ ಬಳಸಲಾಗುವ ಪೂರ್ವಪ್ರತ್ಯಯ.
  • ಕೆಲವು ಸಂದರ್ಭಗಳಲ್ಲಿ a- ಬದಲು ad- ಅದೇ ಅರ್ಥದಲ್ಲಿ ಪ್ರಯೋಗವಾಗುತ್ತದೆ: advance, admiral.

  • adage
    ನಾಮವಾಚಕ
    ಗಾದೆ; ಪಳ ನುಡಿ; ನಾಣ್ನುಡಿ; ಲೋಕೋಕ್ತಿ; ಸಾಮತಿ.


    logo