ಒಮ್ಮೆ; ಒಂದು–ಬಾರಿ, ಸಲ, ಸರ್ತಿ; ಒಮ್ಮೆ ಮಾಡಿದ್ದು ಯಾ ಆದದ್ಡು: once is enough for me ಒಂದು ಸಲ ಸಾಕು ನನಗೆ; ಒಮ್ಮೆ ಮಾಡಿದ್ದು (ಆದದ್ದು) ಸಾಕು ನನಗೆ.
once-famous
ಗುಣವಾಚಕ
ಒಮ್ಮೆ ಹಿಂದೊಮ್ಮೆ–ಪ್ರಸಿದ್ಧವಾಗಿದ್ದ (ಈಗಲ್ಲ ಎಂಬರ್ಥದಲ್ಲಿ): a once-famous doctrine ಒಮ್ಮೆ ಪ್ರಸಿದ್ಧವಾಗಿದ್ದ ಸಿದ್ಧಾಂತ.
once-loved
ಗುಣವಾಚಕ
ಒಮ್ಮೆ ಪ್ರೀತಿಸಿದ್ದ; ಹಿಂದೊಮ್ಮೆ ಪ್ರಿಯನಾಗಿದ್ದ (ಈಗಲ್ಲ ಎಂಬರ್ಥದಲ್ಲಿ): a once-loved friend ಒಮ್ಮೆ ಪ್ರಿಯನಾಗಿದ್ದ ಗೆಳೆಯ.
once-over
ನಾಮವಾಚಕ
(ಆಡುಮಾತು) ಮೊದಲ ನೋಟ; ಪ್ರಥಮ ವೀಕ್ಷಣ; (ಯಾರನ್ನೇ ಒಟ್ಟಾರೆ ಮಿಂಚು ನೋಟದಲ್ಲಿ) ಪರೀಕ್ಷಿಸುವುದು, ಕಣ್ಣುಹಾಯಿಸುವುದು: gave every applicant the once-over ಪ್ರತಿ ಅರ್ಜಿದಾರನ ಮೇಲೂ ಒಮ್ಮೆ ಕಣ್ಣು ಹಾಯಿಸಿದ.
oncer
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಚರಿತ್ರೆ, ಅಶಿಷ್ಟ) ಒಂದು ಪೌಂಡ್ ನೋಟು.
(ಆಡುಮಾತು) ಒಂದೇ ಸಲ ನಡೆಯುವಂಥದು.
(ಆಸ್ಟ್ರೇಲಿಯ) (ಆಡುಮಾತು) ಬಹುಶಃ ಕೇವಲ ಒಂದು ಅವಧಿ ಮಾತ್ರ ಇರಬಹುದಾದ ಪಾರ್ಲಿಮೆಂಟ್ ಸದಸ್ಯನ ಚುನಾವಣೆ, ಆಯ್ಕೆ.
onco-
ಸಮಾಸ ಪೂರ್ವಪದ
(ವೈದ್ಯಶಾಸ್ತ್ರ) ಗ್ರಂಥಿ, ಗಂತಿ, ಗಂಟು, ಗೆಡ್ಡೆ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.