logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lawn sand
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಲಾನು ಮರಳು; ಹುಲ್ಲುಮರಳು; ಹುಲ್ಲುಗೊಬ್ಬರ; ಹುಲ್ಲು ಮೈದಾನಗಳಿಗಾಗಿ ಬಳಸುವ, ಮರಳು, ಕಳೆನಾಶಕಗಳು ಮತ್ತು ರಸಗೊಬ್ಬರಗಳ ಮಿಶ್ರಣ.

lawn sieve
ನಾಮವಾಚಕ
ಲಾನ್‍ ಜರಡಿ; ಲಾನ್‍ ಯಾ ರೇಷ್ಮೆ ಬಟ್ಟೆಯಿಂದ ಮಾಡಿದ ಜರಡಿ, ಒಂದರಿ.

lawn tennis
ನಾಮವಾಚಕ
ಲಾನ್‍ ಟೆನಿಸ್‍; ಹುಲ್ಲು ಟೆನಿಸ್‍; ಸಾಮಾನ್ಯವಾಗಿ ಹೊರಾಂಗಣದ, ಸಮತಟ್ಟಾದ, ಹುಲ್ಲು ಮೈದಾನದಲ್ಲಿ ಆಡುವ ಟೆನಿಸ್‍ ಆಟ.

lawn-sprinkler
ನಾಮವಾಚಕ
ಹುಲ್ಲು ಸಿಂಪಿಣಿ(ಗ); ಹುಲ್ಲುಸೇಚಕ; ಹುಲ್ಲಿಗೆ ನೀರೆರೆಯುವ ಯಂತ್ರ; ಉದ್ಯಾನದಲ್ಲಿ ಬೆಳೆಸಿರುವ ಹುಲ್ಲಿಗೆ ನೀರನ್ನು ಸಿಂಪಡಿಸುವ ಯಂತ್ರ.

lawnmower
ನಾಮವಾಚಕ
ಹುಲ್ಲುಗತ್ತರಿ; ಹಸಲೆಗತ್ತರಿ; ತಿರುಗುವ ಸುರುಳಿ ಕತ್ತಿಗಳುಳ್ಳ, ಹುಲ್ಲನ್ನು ಕತ್ತರಿಸುವ ಯಂತ್ರ.

lawny
ಗುಣವಾಚಕ
  • ಹುಲ್ಲು ಮೈದಾನದಂಥ; ಹುಲ್ಲುಗಾವಲನ್ನು ಹೋಲುವ.
  • ಹುಲ್ಲುಹಾಸಿನ; ಅಂದವಾಗಿ ಕತ್ತರಿಸಿದ ಹುಲ್ಲು ಇರುವ.

  • lawny
    ಗುಣವಾಚಕ
  • ಲಾನ್‍ ಬಟ್ಟೆಯಿಂದ ಮಾಡಿದ.
  • ಲಾನ್‍ ಉಡುಪು ಧರಿಸಿದ.
  • ಲಾನ್‍ ಬಟ್ಟೆಯನ್ನು ಹೋಲುವ.

  • lawrencium
    ನಾಮವಾಚಕ
    (ರಸಾಯನವಿಜ್ಞಾನ) ಲರೆನ್ಸಿಯಮ್‍; ಯುರೇನಿಯಂಗಿಂತ ಹೆಚ್ಚಿನ ಪರಮಾಣು ಸಂಖ್ಯೆಯುಳ್ಳ, ಕೃತಕವಾಗಿ ತಯಾರಿಸಿದ, ವಿಕಿರಣಪಟು ಲೋಹಧಾತು.

    laws of war
    ನಾಮವಾಚಕ
    ಕದನ ಕಾನೂನುಗಳು; ಸುಸಂಸ್ಕೃತ ರಾಷ್ಟ್ರಗಳು ಅಂಗೀಕರಿಸಿದ, ಸಮರನಿರತ ರಾಷ್ಟ್ರದ ಕಾರ್ಯಗಳ ಮೇಲೆ ವಿಧಿಸಿದ ಇತಿಮಿತಿಗಳು.

    lawsuit
    ನಾಮವಾಚಕ
    (ಹಕ್ಕು ಸ್ಥಾಪನೆ ನ್ಯಾಯಸ್ಥಾನದಲ್ಲಿ ಹೂಡುವ) ದಾವೆ; ಮೊಕದ್ದಮೆ; ವ್ಯಾಜ್ಯ; ಖಟ್ಲೆ.


    logo