logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

in petto
ಕ್ರಿಯಾವಿಶೇಷಣ
Italian (ಮುಖ್ಯವಾಗಿ ಕಾರ್ಡಿನಲ್‍ಗಳಾಗಿ ನೇಮಕವಾದರೂ ಆ ಹೆಸರನ್ನು ಕೊಡದ ಕಾರ್ಡಿನಲ್‍ಗಳ ವಿಷಯದಲ್ಲಿ) ರಹಸ್ಯವಾಗಿ; ಗುಟ್ಟಾಗಿ; ಗುಪ್ತವಾಗಿ.

in posse
ಗುಣವಾಚಕ
ಸಾಧ್ಯಸ್ಥಿತಿಯಲ್ಲಿ; ಸಾಧ್ಯವಾಗುವ ಸ್ಥಿತಿಯಲ್ಲಿ, ಅವಸ್ಥೆಯಲ್ಲಿ.

in propria persona
ಕ್ರಿಯಾವಿಶೇಷಣ
ಖುದ್ದಾಗಿ; ಸ್ವಂತವಾಗಿ.

in puris naturalibus
ಗುಣವಾಚಕ
ಪೂರ್ತಿ ಬತ್ತಲೆಯಾದ; ಸಂಪೂರ್ಣ ನಗ್ನವಾದ.

in re
ಉಪಸರ್ಗ
Latin = $^2$re.

in situ
ಕ್ರಿಯಾವಿಶೇಷಣ
ಅದರ (ಮೂಲ) ಸ್ಥಾನದಲ್ಲಿ.

in statu pupillari
ಗುಣವಾಚಕ
  • ಶಿಷ್ಯವೃತ್ತಿಯಲ್ಲಿರುವ: a young Kannadiga, still in statu pupillari ಇನ್ನೂ ಶಿಷ್ಯವೃತ್ತಿಯಲ್ಲಿರುವ ತರುಣ ಕನ್ನಡಿಗ.
  • ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ; ಸ್ನಾತಕೋತ್ತರ ಪದವಿ ಹೊಂದಿರದ.

  • in toto
    ಕ್ರಿಯಾವಿಶೇಷಣ
    ಸಂಪೂರ್ಣವಾಗಿ; ಪೂರಾ; ಪೂರ್ತಿಯಾಗಿ.

    in utero
    ಕ್ರಿಯಾವಿಶೇಷಣ
    ಹೊಟ್ಟೆಯಲ್ಲಿ; ಗರ್ಭದಲ್ಲಿ; ಜನನಕ್ಕೆ ಮುಂಚೆ.

    in vacuo
    ಕ್ರಿಯಾವಿಶೇಷಣ
    ಶೂನ್ಯ ಪ್ರದೇಶದಲ್ಲಿ; ಅಭಾವ ಪ್ರದೇಶದಲ್ಲಿ (ರೂಪಕವಾಗಿ ಸಹ).


    logo