(ಯುನೈಟೆಡ್ ಕಿಂಗ್ಡಮ್‍ನಲ್ಲಿ) Ordinary National Certificate.
once
ಕ್ರಿಯಾವಿಶೇಷಣ
ಪದಗುಚ್ಛ
ಒಮ್ಮೆ; ಒಂದು–ಸಲ, ಬಾರಿ, ಸಂದರ್ಭದಲ್ಲಿ: I have read it more than once ನಾನು ಅದನ್ನು ಒಂದಕ್ಕಿಂತ ಹೆಚ್ಚು ಸಲ ಓದಿದ್ದೇನೆ. shall die once ಒಮ್ಮೆ ಸಾಯಲೇ ಬೇಕು. did not once say please ಒಮ್ಮೆಯೂ ದಯವಿಟ್ಟು ಎಂದು ಹೇಳಲಿಲ್ಲ. have done it once ಒಂದು ಸಲ ಮಾಡಿದ್ದೇನೆ.
ಹಿಂದೊಮ್ಮೆ; ಒಂದು , ಒಂದಾನೊಂದು–ಕಾಲದಲ್ಲಿ; ಹಿಂದಿನ ಯಾವುದೋ ಒಂದು ಖಚಿತವಲ್ಲದ ಕಾಲದಲ್ಲಿ: once there was a giant ಹಿಂದೊಮ್ಮೆ ಒಬ್ಬ ರಾಕ್ಷಸನಿದ್ದ. could once play chess ಹಿಂದೊಮ್ಮೆ ಚದುರಂಗ ಆಡುತ್ತಿದ್ದೆ.
(ನಿಷೇಧಾರ್ಥಕ ಯಾ ಸೋಪಾಧಿಕ ಉಪವಾಕ್ಯಗಳಲ್ಲಿ) ಒಮ್ಮೆ; ಒಮ್ಮೆಯೂ; ಒಂದು ಸಲವೂ; ಎಂದೂ; ಎಂದಾದರೂ; ಯಾವಾಗಲಾದರೂ: if we once lose sight of him ಒಮ್ಮೆ ನಾವು ಅವನ ಕಣ್ಣು ತಪ್ಪಿದೆವೆಂದರೆ. have not seen him once ನಾನು ಅವನನ್ನು ಒಮ್ಮೆಯೂ ನೋಡಿಲ್ಲ. once within call, we are safe (ಒಮ್ಮೆ) ಕೂಗು ಕೇಳಿಸುವಷ್ಟು ಹತ್ತಿರಕ್ಕೆ ಮುಟ್ಟಿಬಿಟ್ಟೆವೆಂದರೆ, ಕೂಗಳತೆಯೊಳಗೆ ಬಂದವೆಂದರೆ, ನಾವು ಬದುಕಿದೆವು. if you once forget it ನೀವು ಯಾವಾಗಲಾದರೂ ಒಮ್ಮೆ ಅದನ್ನು ಮರೆತರೆ.
ಒಂದರಷ್ಟು; ಒಂದು–ಪಟ್ಟು, ಪಾಲು; ಒಮ್ಮಡಿ.
once
ಸಂಯೋಜಕಾವ್ಯಯ
ಒಮ್ಮೆ ಮಾಡಿದರೆ; ಒಮ್ಮೆ ಮಾಡಿದ ಕೂಡಲೆ; ಒಂದು ಸಲ ಮಾಡಿದ ಕೂಡಲೇ: once he hesitates, we have him ಒಮ್ಮೆ ಅವನು ಹಿಂಜರಿದರೆ ಅವನು (ನಮಗೆ) ಸಿಕ್ಕಿಬಿದ್ದ ಎಂತಲೇ; ಒಮ್ಮೆ ಹಿಂದುಮುಂದು ನೋಡಲಿ ಅವನು ಸಿಕ್ಕಿದ ನಮ್ಮ ಕೈಗೆ ಎನ್ನಿ. once they have gone we can relax ಒಮ್ಮೆ ಅವರು ಹೋದರಂದರೆ ನಾವು ಆಗ ಸುಧಾರಿಸಿಕೊಳ್ಳಬಹುದು.