logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lawgiver
ನಾಮವಾಚಕ
ನ್ಯಾಯನಿಬಂಧಕಾರ; ನ್ಯಾಯವಿಧಾಯಕ; ನ್ಯಾಯಸಂಹಿತೆಗಾರ; ಕಾನೂನನ್ನು (ಮುಖ್ಯವಾಗಿ ಕಾನೂನುಗಳ ಸಂಹಿತೆಯನ್ನು) ರಚಿಸುವವನು, ವಿಧಿಸುವವನು.

lawk(s)
ಭಾವಸೂಚಕ ಅವ್ಯಯ ಪದಗುಚ್ಛ
(ಅಶಿಷ್ಟ) ಆಹಾ! ಅಬ್ಬ! (ಆಶ್ಚರ್ಯಸೂಚಕ ಪದ). lawk-a-mussy (ಅಶಿಷ್ಟ) ದೇವರು ದಯೆತೋರಲಿ! ದೇವರ ಕೃಪೆಯಿರಲಿ!

lawless
ಗುಣವಾಚಕ
  • (ದೇಶ ಮೊದಲಾದವುಗಳ ವಿಷಯದಲ್ಲಿ)
    1. ಕಾನೂನುರಹಿತ; ಕಾನೂನೇ ಇಲ್ಲದ; (ನ್ಯಾಯ) ಶಾಸನರಹಿತ.
    2. ಕಾನೂನು ಜಾರಿಯಲ್ಲಿಲ್ಲದ.
  • ಕಾನೂನು ಲಕ್ಷಿಸದ; ಶಾಸನ ಪಾಲಿಸದ; ಶಾಸನೋಲ್ಲಂಘನೆ ಮಾಡುವ; ಕಾನೂನಿನ ಹತೋಟಿಯಿಲ್ಲದ; ಶಾಸನದ ನಿಯಂತ್ರಣವಿಲ್ಲದ.
  • ಸ್ವಚ್ಛಂದ; ಸ್ವೈರದ; ನಿರಂಕುಶ; ಲಂಗುಲಗಾಮಿಲ್ಲದ; ಹತೋಟಿಗೆ ಮೀರಿದ.

  • lawlessly
    ಕ್ರಿಯಾವಿಶೇಷಣ
  • (ದೇಶ ಮೊದಲಾದವುಗಳ ವಿಷಯದಲ್ಲಿ) ಕಾನೂನೇ ಇಲ್ಲದಂತೆ; ಕಾನೂನುರಹಿತವಾಗಿ.
  • ನ್ಯಾಯವನ್ನು ಲಕ್ಷಿಸದೆ; ಕಾನೂನನ್ನು ಉಲ್ಲಂಘಿಸಿ.
  • ಸ್ವಚ್ಛಂದವಾಗಿ; ನಿರಂಕುಶವಾಗಿ; ಸ್ವೈರದಿಂದ; ಲಂಗುಲಗಾಮಿಲ್ಲದಂತೆ.

  • lawlessness
    ನಾಮವಾಚಕ
  • ಕಾನೂನು ರಹಿತತೆ; ಕಾನೂನು – ಇಲ್ಲದಿರುವಿಕೆ, ಜಾರಿಯಲ್ಲಿಲ್ಲದಿರುವಿಕೆ.
  • ನ್ಯಾಯನಿರ್ಲಕ್ಷ್ಯ; ಶಾಸನೋಲ್ಲಂಘನೆ.
  • ಸ್ವೇಚ್ಛಾಚಾರ; ನಿರಂಕುಶತೆ; ಸ್ವೈರವರ್ತನೆ; ಸ್ವಚ್ಛಂದತೆ; ಹತೋಟಿ ಮೀರಿರುವಿಕೆ.

  • lawmaker
    ನಾಮವಾಚಕ
    (ನ್ಯಾಯ) ಶಾಸನಕಾರ; ಶಾಸಕ.

    lawman
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಕಾನೂನನ್ನು ಜಾರಿಗೊಳಿಸುವ ಅಧಿಕಾರಿ, ಮುಖ್ಯವಾಗಿ ಷೆರಿಹ್‍ ಯಾ ಪೊಲೀಸಿನವ.

    lawn
    ನಾಮವಾಚಕ
  • (ತೋಟ, ಉದ್ಯಾನವನ, ಮೊದಲಾದವುಗಳಲ್ಲಿನ) ಹಸಲೆ; ಹುಲ್ಲುಮೈದಾನ; ಲಾನು; ಹುಲ್ಲುಗಾವಲು (ಪ್ರದೇಶ); ಹುಲ್ಲು ಬೆಳೆದ ನೆಲ.
  • ಹುಲ್ಲುಹಾಸು; ಹುಲ್ಲುಮೈದಾನ; ಹುಲ್ಲುಹಾಸಿನ ವಿಹಾರ ಸ್ಥಳ ಯಾ ತೋಟ; ಹುಲ್ಲನ್ನು ಒತ್ತಾಗಿ ಬೆಳೆಸಿ ಅಂದವಾಗಿ ಕತ್ತರಿಸಿರುವ ವಿಹಾರ ಪ್ರದೇಶ ಯಾ ಮೈದಾನ.
  • (ಪ್ರಾಚೀನ ಪ್ರಯೋಗ) ಕಾಡಿನ ಮಧ್ಯದ ಬಯಲು.

  • lawn
    ನಾಮವಾಚಕ
    ಲಾನ್‍ ಬಟ್ಟೆ; ಮುಖ್ಯವಾಗಿ ಬಿಷಪ್ಪನ ಅಂಗಿಯ ತೋಳಿಗೆ ಉಪಯೋಗಿಸುವ ಒಂದು ಬಗೆಯ ನಯವಾದ ಲಿನನ್‍ ಯಾ ಹತ್ತಿ ಬಟ್ಟೆ.

    lawn bowling
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = $^2$bowl(3).


    logo