(ಆದಾಯದ) ಸದ್ಯದ ಮೌಲ್ಯವನ್ನು ಲೆಕ್ಕಹಾಕು; ಹಾಲಿ ಬೆಲೆಕಟ್ಟು; ಸದ್ಯದ ಬೆಲೆಕಟ್ಟು; ವರ್ತಮಾನ ಮೌಲ್ಯ ನಿಷ್ಕರ್ಷಿಸು; ಮುಂದೆ ಬರಬಹುದಾದ ಆದಾಯದಲ್ಲಿ ನಿರ್ವಹಣೆ ಖರ್ಚು ಕಳೆದು ಆಸ್ತಿಯ ಬೆಲೆಯನ್ನು–ನಿರ್ಧರಿಸು, ನಿಷ್ಕರ್ಷಿಸು, ಲೆಕ್ಕಹಾಕು.
(ಅಕ್ಷರವನ್ನು) ದೊಡ್ಡಕ್ಷರವಾಗಿ ಬರೆ.
ಪದವನ್ನು ದೊಡ್ಡಕ್ಷರದಿಂದ ಪ್ರಾರಂಭಿಸು.
(ರೂಪಕವಾಗಿ) ಲಾಭ ಪಡೆ; ಫಾಯಿದೆ ಮಾಡಿಕೊ; ಅನುಕೂಲ ಮಾಡಿಕೊ; ಇತರರ ಲೋಪದೋಷ ಮೊದಲಾದವುಗಳನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊ ( ಅಕರ್ಮಕ ಕ್ರಿಯಾಪದ ಸಹ).
capitally
ಕ್ರಿಯಾವಿಶೇಷಣ
ತಲೆ ತೆಗೆಯುವಂತೆ; ಪ್ರಾಣಾಪಾಯವಾಗುವಂತೆ; ಪ್ರಾಣ ಕಳೆಯುವಂತೆ; ತಲೆ ಉರುಳುವಂತೆ: capitally punish ಪ್ರಾಣ ಹೋಗುವಂತೆ ಶಿಕ್ಷಿಸು.
ಉತ್ಕೃಷ್ಟವಾಗಿ; ಶ್ರೇಷ್ಠವಾಗಿ; ಬಹಳ ಚೆನ್ನಾಗಿ; ಅತ್ಯುತ್ತಮವಾಗಿ.
ಹಾನಿಕರವಾಗಿ; ವಿನಾಶಕರವಾಗಿ; ಘೋರವಾಗಿ.
ಗುರುತರವಾಗಿ; ಗಂಭೀರವಾಗಿ.
capitate
ಗುಣವಾಚಕ
(ಜೀವವಿಜ್ಞಾನ) ಶಿರವುಳ್ಳ; ತಲೆತುದಿಯ; ತುದಿಯಲ್ಲಿ ತಲೆಯಂತೆ ದಪ್ಪಗಿರುವ ಯಾ ಊದಿಕೊಂಡಿರುವ.