logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ad eundem
ಕ್ರಿಯಾವಿಶೇಷಣ
(ಬೇರೆ ವಿಶ್ವವಿದ್ಯಾನಿಲಯ ಯಾ ಸಂಸ್ಥೆಯಲ್ಲಿ) ಅದೇ ಪದವಿಗೆ; ಅದೇ ಪದವಿಗಾಗಿ.

ad eundem gradum
ಕ್ರಿಯಾವಿಶೇಷಣ
ಅದೇ ಪದವಿಗೆ–ಸೇರಿಸಿಕೊಳ್ಳಲಾಗಿ, ಸೇರಿಸಿಕೊಳ್ಳುವ ರೀತಿಯಲ್ಲಿ: he was admitted ad eundem gradum by the Bangalore University ಅವನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಅದೇ ಪದವಿಗೆ ಅಂಗೀಕರಿಸಲ್ಪಟ್ಟ.

ad fin
ಸಂಕ್ಷಿಪ್ತ
at or near the end (ಕೊನೆಯಲ್ಲಿ; ಕೊನೆ ಹತ್ತಿರವಾದಂತೆ) (Latinನ ad finem ಇಂದ).

ad hoc
ಗುಣವಾಚಕ
ಆಡ್‍ಹಾಕ್‍; ತತ್‍ಪೂರ್ತ; ಪ್ರಕೃತ ಉದ್ದೇಶಕ್ಕಾಗಿ-ಏರ್ಪಡಿಸಿದ, ವ್ಯವಸ್ಥೆ ಮಾಡಿದ, ನೇಮಿಸಿದ: an ad hoc commission of inquiry ಆಡ್‍ಹಾಕ್‍ ವಿಚಾರಣಾ ಆಯೋಗ.

ad hoc
ಕ್ರಿಯಾವಿಶೇಷಣ
ಆಡ್‍ಹಾಕ್‍; ತಾತ್ಪೂರ್ತಿಕವಾಗಿ; ಪ್ರಕೃತ ಉದ್ದೇಶಕ್ಕಾಗಿ.

ad hominem
ಕ್ರಿಯಾವಿಶೇಷಣ
ವೈಯಕ್ತಿಕವಾಗಿ; (ವಾದದ ಬದಲು) ವ್ಯಕ್ತಿಯನ್ನು ಆಧಾರವಾಗಿಟ್ಟುಕೊಂಡು ಯಾ ಅವಲಂಬಿಸಿ.

ad hominem
ಗುಣವಾಚಕ
(ಯಾವುದೇ ವಾದ, ಅಭಿರುಚಿ, ಮೊದಲಾದವುಗಳ ವಿಷಯದಲ್ಲಿ) ವೈಯಕ್ತಿಕವಾದ; ವಿಷಯದ ಸತ್ಯತೆ ಯಾ ತರ್ಕಬದ್ಧತೆಯನ್ನು ಪರಿಗಣಿಸುವ ಬದಲು ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ಆಧಾರವಾಗಿ ಉಳ್ಳ ಯಾ ಅವಲಂಬಿಸಿರುವ.

ad infinitum
ಕ್ರಿಯಾವಿಶೇಷಣ
ಅನಂತವಾಗಿ; ಅನಂತಾನಂತವಾಗಿ; ಕೊನೆಯೇ ಇಲ್ಲದಂತೆ: the series continues ad infinitum ಈ ಶ್ರೇಣಿಯು ಕೊನೆಯೇ ಇಲ್ಲದಂತೆ ಮುಂದುವರಿಯುತ್ತಾ ಹೋಗುತ್ತದೆ.

ad interim
ಗುಣವಾಚಕ
ತಾತ್ಕಾಲಿಕ; ಏತನ್ಮಧ್ಯದ; ಈ ಮಧ್ಯದ; ಹಂಗಾಮಿ: ad interim committee for research ಸಂಶೋಧನೆಗಾಗಿ ನಿಯಮಿಸಿರುವ ತಾತ್ಕಾಲಿಕ, ಹಂಗಾಮಿ ಸಮಿತಿ.

ad interim
ಕ್ರಿಯಾವಿಶೇಷಣ
ತಾತ್ಕಾಲಿಕವಾಗಿ; ಹಂಗಾಮಿಯಾಗಿ.


logo