logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

omnivorousness
ನಾಮವಾಚಕ
  • ಸರ್ವಭಕ್ಷಣ; ಎಲ್ಲವನ್ನೂ ತಿನ್ನುವ ಲಕ್ಷಣ ಸ್ವಭಾವ ಯಾ ಶಕ್ತಿ.
  • ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುವಿಕೆ; ಸರ್ವಗ್ರಂಥಾಧ್ಯಯನ.

  • omphalo-
    ಸಮಾಸ ಪೂರ್ವಪದ
    ಹೊಕ್ಕುಳಿನ ನಾಭಿಯ, ಹೊಕ್ಕುಳಿಗೆ ಸಂಭಂಧಿಸಿದ ಎಂಬರ್ಥಗಳ ಸಮಾಸ ಪೂರ್ವಪದ: omphalotomy ನಾಭಿಚ್ಛೇದನ; ಹೊಕ್ಕುಳು ಬಳ್ಳಿಯನ್ನು ಕತ್ತರಿಸುವುದು.

    omphalos
    ನಾಮವಾಚಕ
  • (ಗ್ರೀಕ್‍ ಪ್ರಾಚೀನ ಚರಿತ್ರೆ) (ಭೂಲೋಕದ ಕೆಂಂದ್ರಸ್ಥಾನವೆಂದು ನಂಬಲಾಗಿದ್ದ) ಮುಖ್ಯವಾಗಿ ಡೆಲಿ ಎಂಬಲ್ಲಿಯ ಅಪಲೋ ದೇವಾಲಯದ ಮುಮ್ಮೂಲೆಗಲ್ಲು, ಶಂಕುಶಿಲೆ.
  • ಫಲಕನಾಭಿ; ಗುರಾಣಿಯ ನಡುವಣ ಉಬ್ಬು ಚಿತ್ರಣದ ಭಾಗ.
  • ಕೇಂದ್ರ; ನಾಭಿ: the centre and omphalos of a worldwide empite ವಿಶ್ವವ್ಯಾಪಿಯಾದ ಒಂದು ಸಾಮ್ರಾಜ್ಯದ ಕೇಂದ್ರ ಹಾಗೂ ನಾಭಿ (ಪ್ರದೇಶ).

  • omssive
    ಗುಣವಾಚಕ
    ಲೋಪದ; ಅಕೃತದ; (ಕರ್ತವ್ಯವನ್ನು) ಮಾಡದೆ ಬಿಡುವ.

    on
    ಉಪಸರ್ಗ ಪದಗುಚ್ಛ
    ( ಪದಗುಚ್ಛಗಳಲ್ಲಿ upon ಎಂಬುದರ ಬಳಕೆ ಹೆಚ್ಚು).
  • ಮೇಲೆ; ಮೇಲ್ಗಡೆ; ಉಪರಿ; ಒಂದಕ್ಕೆ ತಗುಲಿದಂತೆ, ಅದರ ಮೇಲೆ ಯಾ ಅದರ ಆಧಾರದಿಂದ ಯಾ ಒಂದನ್ನು ಆವರಿಸಿದಂತೆ ಯಾ ಸುತ್ತುವರಿದಂತೆ: floats on the water ನೀರಿನ ಮೇಲೆ ತೇಲುತ್ತದೆ. sat on a chair ಕುರ್ಚಿಯ ಮೇಲೆ ಕುಳಿತ. stuck on the wall ಗೋಡೆಗೆ ಅಂಟಿಕೊಂಡಿತು. rings on her fingers ಅವಳ ಬೆರಳುಗಳಲ್ಲಿನ ಉಂಗುರಗಳು. leaned on his elbow ಮೊಣಕೈ ಮೇಲೆ ಊರಿಕೊಂಡ. a scholar on the foundation ಆ ಸಂಸ್ಥೆಯಿಂದ ವೇತನ ಪಡೆಯುವ ವಿದ್ಯಾರ್ಥಿ. the dog is on the chain ನಾಯಿಯನ್ನು ಸರಪಣಿಯಿಂದ ಕಟ್ಟಿದೆ.
  • ವ್ಯಕ್ತಿಯ ಬಳಿ, ಹತ್ತಿರ; ಒಯ್ಯುತ್ತಾ: have you a pen on you? ನಿನ್ನ ಹತ್ತಿರ ಒಂದು ಪೆನ್ನ್‍ ಇದೆಯೆ?
  • (ಕಾಲದ ವಿಷಯದಲ್ಲಿ) ಆಗ; ಆವಾಗ; ಅಂದು; ಆ–ಅವಧಿಯಲ್ಲಿ, ಕಾಲದಲ್ಲಿ, ಸಮಯದಲ್ಲಿ; ಆ ನಡುವೆ; ಅಂತರದಲ್ಲಿ; (ಕಾಲಕ್ಕೆ) ಸರಿಯಾಗಿ; ಒಂದು ಘಟನೆ ನಡೆಯುತ್ತಿದ್ದಾಗ: on 29 May ಮೇ ಇಪ್ಪತ್ತೊಂಭತ್ತರಂದು. on the hour ಆ ಘಂಟೆಯಲ್ಲಿಯೇ, ಸಮಯದಲ್ಲಿಯೇ on the instant ಆ ಕ್ಷಣದಲ್ಲೇ, on schedule ಗೊತ್ತಾದ ಕಾಲಕ್ಕೆ ಸರಿಯಾಗಿ working on Tuesday ಮಂಗಳವಾರದಂದು ಕೆಲಸಮಾಡುತ್ತ.
  • (ಆ)ಕೂಡಲೇ; ಆದ ಕೂಡಲೇ; ಒಂದು ಘಟನೆಯ ಮೊದಲು ಯಾ ಅನಂತರ: I saw them on my return ವಾಪಸಾದ ಕೂಡಲೇ ಅವರನ್ನು ನೋಡಿದೆ.
  • (ಒಂದರ) ಪರಿಣಾಮವಾಗಿ; ಫಲವಾಗಿ; ಫಲಿತಾಂಶವಾಗಿ: on further examination I found this ಇನ್ನಷ್ಟು ಪರಿಶೀಲಿಸಿದ ನಂತರ ನನಗೆ ಇದು ತಿಳಿಯಿತು.
  • ಯಾವುದಾದರೂ ಸದಸ್ಯತ್ವ ಮೊದಲಾದವು ಇರುವಂತೆ, ಒಂದು ಕಡೆ ಮನೆ, ನಿವಾಸ ಇರುವಂತೆ: she is on the board of directors ಅವಳು ನಿರ್ದೇಶಕ ಮಂಡಲಿಯಲ್ಲಿ ಸದಸ್ಯಳಾಗಿದ್ದಾಳೆ. lives on the island ಆ ದ್ವೀಪದಲ್ಲಿ ವಾಸಿಸುತ್ತಾನೆ(ಳೆ).
  • ಆರ್ಥಿಕ–ಆಧಾರದ, ಆಶ್ರಯದ, ನೆರವಿನ, ಬೆಂಬಲದ ಮೇಲೆ: lives on Rs. 250 a month ತಿಂಗಳಿಗೆ 250 ರೂ. ಗಳ ಮೇಲೆ ಜೀವಿಸುತ್ತಾನೆ. lives on his wits ತನ್ನ ಬುದ್ಧಿವಂತಿಕೆಯ ಆಧಾರದ ಮೇಲೆ ಬದುಕು ನಡೆಸುತ್ತಾನೆ.
  • ಹತ್ತಿರ; ಸಮೀಪ; ಬಳಿ ಸನಿಹದಲ್ಲಿ: house is on the shore ಮನೆ ಕಡಲ ತೀರದಲ್ಲಿ ಇದೆ. a house on the river ಮನೆ ನದಿ ತೀರದಲ್ಲಿದೆ. lives on the main road ಪ್ರಧಾನ ರಸ್ತೆಯ ಬಳಿ ವಾಸಿಸುತ್ತಾನೆ(ಳೆ).
  • ಆದಿಕ್ಕಿನಲ್ಲಿ; ಕಡೆ(ಗೆ); ಎದುರಾಗಿ: on the right ಬಲಗಡೆ(ಗೆ). bowling is on the wicket ಬೋಲಿಂಗನ್ನು ವಿಕೆಟ್ಟಿನ ಕಡೆಗೇ (ವಿಕೆಟ್ಟಿಗೆ ನೇರವಾಗಿ) ಮಾಡುತ್ತಿದ್ದಾನೆ.
  • ಬೆದರಿಸುವಂತೆ; ಹೆದರಿಸುವಂತೆ; ಮುಟ್ಟುವಂತೆ ಯಾ ತಾಗುವಂತೆ: pulled a knife on me ನನ್ನನ್ನು ಬೆದರಿಸುವಂತೆ ಚಾಕುವನ್ನೆಳೆದ. punched on the nose ಮೂಗಿನ ಮೇಲೆ ಒಂದು ಗುದ್ದು ಗುದ್ದಿದ.
  • -ರ ಮೇಲೆ; ಅಕ್ಷದಂತೆ ಯಾ ತಿರುಗಾಣಿಯಂತೆ ಇರುವ; turned on his heels ಹಿಮ್ಮಡಿಯ ಮೇಲೆ ತಿರುಗಿದ. turns on a peg ಗೂಟದ ಮೇಲೆ ಸುತ್ತುತ್ತದೆ.
  • -ಮೇಲೆ; ಒಂದನ್ನು ಆಧಾರವಾಗಿ ಯಾ ಉದ್ದೇಶವಾಗಿ ಇಟ್ಟುಕೊಂಡು: arrested on suspicion ಗುಮಾನಿಯ ಮೇಲೆ ದಸ್ತಗಿರಿ ಮಾಡಲ್ಪಟ್ಟು.
  • ಆಧಾರದ ಮೇಲೆ; ಪ್ರಮಾಣಕವಾಗಿ, ದೃಢೀಕೃತವಾಗಿ ಯಾ ಖಾತ್ರಿಯಾಗಿ–ಹೊಂದಿರುವುದರ ಮೇಲೆ: had it on good authority ಸರಿಯಾದ ಆಧಾರದ ಮೇಲೆ ಪಡೆದಿದ್ದ. I promise on my word ನನ್ನ ಮಾತಿನ ಪ್ರಮಾದ ಮೇಲೆ ವಾಗ್ದಾನ ಮಾಡುತ್ತೇನೆ. based on a fact ಸತ್ಯಾಂಶದ ಆಧಾರದ ಮೇಲೆ ಸ್ಥಾಪಿಸಿದ. on account of ಕಾರಣದಿಂದ; ದೆಸೆಯಿಂದ. swear on the Bible ಬೈಬಲಿನ ಮೇಲೆ ಶಪಥ ಮಾಡು; ಬೈಬಲನ್ನು ಪ್ರಮಾವಾಗಿಟ್ಟುಕೊಂಡು ಪ್ರಮಾಣ ಮಾಡು. borrowed money on his house ಅವನ ಮನೆಯ ಮೇಲೆ, ಮನೆಯನ್ನು ಆಧಾರವಾಗಿಟ್ಟು ಹಣವನ್ನು ಸಾಲ ತೆಗೆದುಕೊಂಡ.
  • (ಒಂದರ) ಬಗೆಗೆ ಯಾ ವಿಷಯದಲ್ಲಿ; ಕುರಿತು: writes on frogs ಕಪ್ಪೆಗಳನ್ನು ಕುರಿತು, ಕಪ್ಪೆಗಳ ಮೇಲೆ ಬರೆಯುತ್ತಾನೆ.
  • ಬಳಸಿಕೊಂಡು; ಯಾವುದೋ ಒಂದರಲ್ಲಿ ನಿರತನಾಗಿ, ಮಾಡುತ್ತಾ: is on the pill ಅವನು ಆ ಗುಳಿಗೆ ಬಳಸುತ್ತಾ ಇದ್ದಾನೆ. he is here on business ಕೆಲಸದ ಮೇಲೆ, ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿದ್ದಾನೆ.
  • ಪರಿಣಾಮ, ಪ್ರಭಾವ ಬೀರುವಂತೆ: walked out on her ಅವಳನ್ನು ತೊರೆದು ಹೊರಟು ಹೋದ.
  • ಒಬ್ಬನಿಗೆ ಸಂಬಂಧಿಸಿದಂತೆ; ಒಬ್ಬನನ್ನು ಕುರಿತಂತೆ: the joke is on him ಹಾಸ್ಯ ಅವನನ್ನು ಕುರಿತದ್ದು. the drinks are on me ಕುಡಿತದ ಖರ್ಚು–ನನ್ನದು, ನನಗೆ ಸೇರಿದ್ದು, ನನಗಿರಲಿ, ನನ್ನ ಪಾಲಿಗಿರಲಿ, ನಾನು ಕೊಡುತ್ತೇನೆ, ವಹಿಸಿಕೊಳ್ಳುತ್ತೇನೆ.
  • ಒಂದಕ್ಕೊಂದು ಕೂಡಿ, ಸೇರಿ: ruin on ruin ವಿನಾಶದ ಮೇಲೆ ವಿನಾಶ. heaps on heaps ರಾಶಿಯ ಮೇಲೆ ರಾಶಿ. disaster on disaster ಆಪತ್ತಿನ ಮೇಲೆ ಆಪತ್ತು.
  • (ಒಂದು ಗೊತ್ತಾದ ಯಾ ನಿರ್ದಿಷ್ಟ) ರೀತಿಯಲ್ಲಿ; ಸ್ಥಿತಿಯಲ್ಲಿ; ಕ್ರಿಯೆಯಲ್ಲಿ (ತೊಡಗಿ) (ಸಾಮಾನ್ಯವಾಗಿ the $+$ ಗುಣವಾಚಕ ಯಾ ನಾಮವಾಚಕ ದೊಡನೆ): on the cheap ಅಗ್ಗವಾಗಿ. on the run ಓಡುತ್ತಾ.

  • on
    ಕ್ರಿಯಾವಿಶೇಷಣ ಪದಗುಚ್ಛ
  • (ಮುಖ್ಯವಾಗಿ ಬಟ್ಟೆಗಳ ವಿಷಯದಲ್ಲಿ) ಮೇಲೆ; ಮೇಲಕ್ಕೆ; ಮೇಲುಗಡೆ(ಯಲ್ಲಿ); (ಒಂದರ) ಆಧಾರದ ಮೇಲೆ; (ಒಂದಕ್ಕೆ ತಗುಲಿದಂತೆ ಅದರ) ಮೇಲೆ; ಆಧಾರವನ್ನು ಮುಚ್ಚಿಕೊಂಡು, ಆವರಿಸಿಕೊಂಡು ಅದರ ಮೇಲೆ: put the tablecloth on ಮೇಜಿನ ಹಾಸನ್ನು ಅದರ ಮೇಲೆ ಹರಡು. drew his boots on ತನ್ನ ಬೂಟುಗಳನ್ನು ಕಾಲಿನ ಮೇಲಕ್ಕೆ ಎಳೆದುಕೊಂಡ. on with your coat ನಿನ್ನ ಅಂಗಿಯನ್ನು ಧರಿಸು, ಹಾಕಿಕೊ.
  • ಯಾವುದೇ ಕಡೆಗೆ; ಸರಿಯಾದ ದಿಕ್ಕಿಗೆ: look on (ಆ) ಕಡೆ ನೋಡು.
  • ಮುಂದಕ್ಕೆ; ಇನ್ನೂ ಮುಂದಕ್ಕೆ; ಅಗ್ರಸ್ಥಾನದಲ್ಲಿ; ಮುಂದುವರಿದ ಸ್ಥಾನದಲ್ಲಿ ಯಾ ಸ್ಥಿತಿಯಲ್ಲಿ: time is getting on ಕಾಲ ಮುಂದೆ ಮುಂದೆ ಹೋಗುತ್ತಿದೆ. it happened later on ಅದು ಆಮೇಲೆ ನಡೆಯಿತು.
  • ಎಡೆಬಿಡದೆ ನಡೆಯುತ್ತ; ಸತತವಾಗಿ ಮುಂದುವರೆಯುತ್ತಾ; ನಿರಂತರ ಚಲನೆಯಿಂದ ಯಾ ಕ್ರಿಯೆಯಿಂದ ಕೂಡಿ: getting on for two o’clock ಹತ್ತಿರ ಹತ್ತಿರ ಎರಡು ಗಂಟೆಗೆ ಬರುತ್ತಿದೆ. keeps on complaining ದೂರುತ್ತಲೇ ಇರುತ್ತಾನೆ(ಳೆ).
  • ಕಾರ್ಯಮಾಡುತ್ತ; ಕೆಲಸ ಮಾಡುತ್ತ: the light is on ದೀಪ ಉರಿಯುತ್ತಿದೆ. the chase was on ಬೆನ್ನಟ್ಟುವಿಕೆ ಮುಂದುವರೆದಿತ್ತು.
  • ಯೋಜಿಸಿದ ರೀತಿಯಲ್ಲಿ–ನಡೆಯುವಂತೆ, ಆಗುವಂತೆ, ಜರುಗುವಂತೆ: is the party still on? ಕೂಟ ಯೋಜಿಸಿದಂತೆ ಜರುಗುವುದೇ?
  • (ಆಡುಮಾತು) (ವ್ಯಕ್ತಿಯ ವಿಷಯದಲ್ಲಿ) ಭಾಗವಹಿಸಲು ಯಾ ಒಪ್ಪಲು ಯಾ ಬಾಜಿ ಕಟ್ಟಲು ಯಾ ಪಂಥ ಒಡ್ಡಲು–ಇಷ್ಟವಿರುವಂತೆ, ಮನಸ್ಸಿರುವಂತೆ ಯಾ ಸಿದ್ಧವಿರುವಂತೆ: there is a show to night, are you on? ಈ ರಾತ್ರಿ ಒಂದು ಪ್ರದರ್ಶನ ಇದೆ; ಅದಕ್ಕೆ ಬರಲು ನಿನಗೆ ಮನಸ್ಸಿದೆಯೇ?
  • (ಆಡುಮಾತು)
    1. (ಭಾವನೆ, ಪ್ರಸ್ತಾವ, ಮೊದಲಾದವುಗಳ ವಿಷಯದಲ್ಲಿ) ಸಾಧ್ಯವಾಗಿ, ಪ್ರಯೋಗಾರ್ಹವಾಗಿ: that’s just not on ಅದು ಸಾಧ್ಯವೇ ಇಲ್ಲ.
    2. ಒಪ್ಪಿಗೆಯಾಗುವಂತೆ; ಅಂಗೀಕಾರಾರ್ಹವಾಗಿ.
  • ನಡೆಯುತ್ತಾ; ಪ್ರದರ್ಶಿತವಾಗುತ್ತಾ: ‘Macbeth’ is on ‘ಮ್ಯಾಕ್‍ಬೆತ್‍’ ನಾಟಕ ನಡೆಯುತ್ತಿದೆ. a good film is on to-night ಇಂದು ರಾತ್ರಿ ಒಳ್ಳೆಯ ಸಿನಿಮಾ ಪ್ರದರ್ಶಿತವಾಗುತ್ತದೆ.
  • (ನಟನ ವಿಷಯದಲ್ಲಿ) ರಂಗದ ಮೇಲೆ (ಅಭಿನಯಿಸುತ್ತ).
  • (ನೌಕರನ ವಿಷಯದಲ್ಲಿ) ಕರ್ತವ್ಯದ ಮೇಲೆ; ಕೆಲಸ ಮಾಡುತ್ತ; ಕರ್ತವ್ಯದಲ್ಲಿ ತೊಡಗಿ.;
  • ಮುಂದೆ; ಮುಂದಕ್ಕೆ: go on ಮುಂದೆ ನಡೆ; ಮುಂದುವರಿ. come on ಮುಂದೆ ಬಾ; ಹತ್ತಿರ ಬಾ. (ಅಧ್ಯಾಹಾರ ಪ್ರಯೋಗ) on Ram on ಮುಂದೆ ನಡೆ, ರಾಮ, ನಡೆ ಮುಂದೆ. head on ಎದುರುಬದುರಾಗಿ; ನೇರ ಮುಖಾಮುಖಿಯಾಗಿ.

  • on
    ಗುಣವಾಚಕ
    (ಕ್ರಿಕೆಟ್‍)‘ಆನ್‍’ ಕಡೆಯ; (ಬಲಗೈ) ಬ್ಯಾಟುಗಾರನ ವಿಕೆಟ್ಟಿಗೆ ಎಡಗಡೆಯ ಮೈದಾನದ, ಮೈದಾನದ ಕಡೆಯ: an on drive (ಬಲಗೈ, ಬ್ಯಾಟುಗಾರನು ಚೆಂಡನ್ನು ತನ್ನ) ವಿಕೆಟ್ಟಿನ ಎಡಗಡೆಯ ಮೈದಾನಕ್ಕೆ ಹೊಡೆದ ಹೊಡೆತ; ಆನ್‍ ಡ್ರೈವ್‍.

    on
    ನಾಮವಾಚಕ
    (ಕ್ರಿಕೆಟ್‍) ‘ಆನ್‍’; (ಬಲಗೈ) ಬ್ಯಾಟುಗಾರನ ವಿಕೆಟ್ಟಿನ ಎಡಭಾಗ, ಎಡಗಡೆಯ ಮೈದಾನ ಯಾ ಎಡಗೈ ಆಟಗಾರನ ಬಲಗಡೆಯ ಮೈದಾನ: a fine drive to the on ‘ಆನ್‍’ ಕಡೆಗೆ ಒಳ್ಳೆಯ ಹೊಡೆತ.

    on dit
    ನಾಮವಾಚಕ
    ಗಾಳಿ–ಸುದ್ದಿ, ವರ್ತಮಾನ; (ಕಿಂ)ವದಂತಿ; ಕೇಳಿ ಬಂದ ಮಾತು.

    on-
    ಪೂರ್ವಪ್ರತ್ಯಯ
    ವಿಶೇಷಕ ಕೃದಂತಗಳು, ಕೃದ್ವಾಚಿಗಳು, ಕೃನ್ನಾಮಗಳು, -er ಪ್ರತ್ಯಯಾಂತಗಳಾದ ಕರ್ತ್ರರ್ಥಕ ನಾಮಪದಗಳು ಮತ್ತು ಕ್ರಿಯಾಪದಗಳಿಂದ ನಿಷ್ಪನ್ನವಾದ ಇತರ ನಾಮಪದಗಳು–ಇವುಗಳನ್ನು ರೂಪಿಸುವ ಪೂರ್ವಪ್ರತ್ಯಯ (ವಿರಳವಾಗಿ ಇಂಥ ಪದಗಳ ಅಂತ್ಯದಲ್ಲಿಯೂ ಉತ್ತರಪ್ರತ್ಯಯವಾಗಿ ಬಳಕೆ): oncoming, onfall, onflow, ongoings ಯಾ goings-on, onlooker ಯಾ looker-on, onrush.


    logo