logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

law-abidingness
ನಾಮವಾಚಕ
ನ್ಯಾಯಬದ್ಧತೆ; ಕಾನೂನುಪಾಲನೆ; ನ್ಯಾಯಪಾಲನೆ; ಕಾನೂನುವಿಧೇಯತೆ; ನ್ಯಾಯಾನುಸರಣೆ.

law-hand
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ದಸ್ತೈವಜಿನ ಹಸ್ತಾಕ್ಷರ; ದಸ್ತೂರದ ಕೈಬರಹ; ಕಾನೂನು ಪತ್ರಗಳನ್ನೂ ದಸ್ತೈವಜುಗಳನ್ನೂ ಬರೆಯುವಾಗ ಬಳಸುವ ದಸ್ತೂರದ, ಬಿಕ್ಕಲಂನ ಯಾ ಕೈಬರಹದ ಶೈಲಿ, ರೀತಿ.

law-stationer
ನಾಮವಾಚಕ
ವಕೀಲಿ ಸಾಮಗ್ರಿ ವ್ಯಾಪಾರಿ; ವಕೀಲರಿಗೆ ಬೇಕಾಗುವ, ಬರವಣಿಗೆಯ ಸಾಮಾನುಗಳನ್ನು ಮಾರುವ, ದಸ್ತೈವಜುಗಳನ್ನು ಕಾನೂನಿಗನುಸಾರವಾಗಿ ದಪ್ಪಕ್ಷರದಲ್ಲಿ ಬರೆದುಕೊಡುವ ಕೆಲಸ ವಹಿಸಿಕೊಳ್ಳುವ ವ್ಯಾಪಾರಿ.

lawbreaker
ನಾಮವಾಚಕ
ಕಾನೂನುಭಂಜಕ; ಕಾನೂನು ಮುರಿಕ; ಕಾನೂನನ್ನು ಪಾಲಿಸದವನು, ಮುರಿಯುವವನು.

lawbreaking
ನಾಮವಾಚಕ
ಕಾನೂನುಭಂಗ; ಕಾನೂನು ಭಂಜನೆ; ಕಾನೂನು ಮುರಿಯುವುದು, ಪಾಲಿಸದಿರುವುದು.

lawbreaking
ಗುಣವಾಚಕ
ಕಾನೂನುಭಂಜಕ; ಕಾನೂನುಭಂಗದ; ಕಾನೂನು ಮುರಿಯುವ.

lawcourt
ನಾಮವಾಚಕ
  • ಕೋರ್ಟು; ನ್ಯಾಯಾಲಯ; ನ್ಯಾಯಸ್ಥಾನ; ನ್ಯಾಯ ಕಚೇರಿ.
  • ನ್ಯಾಯಮಂಡಲಿ.

  • lawful
    ಗುಣವಾಚಕ
  • ಕಾನೂನು, ಕಾಯಿದೆ – ಬದ್ಧ; ಕಾಯಿದೆಶೀರು; ಶಾಸನವಿಹಿತವಾದ; ಶಾಸನಬದ್ಧವಾದ.
  • ಕಾನೂನಿನಿಂದ – ಗೊತ್ತುಮಾಡಲ್ಪಟ್ಟ, ನಿಯೋಜಿಸಲ್ಪಟ್ಟ, ನೇಮಕವಾದ.
  • (ಕಾನೂನು ರೀತಿಯ) ಅರ್ಹತೆಯುಳ್ಳ; ಯೋಗ್ಯತೆಯುಳ್ಳ; ಮಾನ್ಯತೆ ಪಡೆದ; ಶಾಸನದ ಅಂಗೀಕಾರ ಪಡೆದ.
  • ನಿಷಿದ್ಧವಲ್ಲದ; ಅನಿಷಿದ್ಧ; ಕಾನೂನು ಉಲ್ಲಂಘಿಸದ; ಕಾನೂನಿಗೆ ವಿರುದ್ಧವಾಗಿರದ.
  • (ಮಗುವಿನ ವಿಷಯದಲ್ಲಿ) ಕಾನೂನು ಬಾಹಿರವಲ್ಲದ; ಧರ್ಮ ಸಂತಾನದ; ನ್ಯಾಯಸಮ್ಮತ.

  • lawfully
    ಕ್ರಿಯಾವಿಶೇಷಣ
  • ನ್ಯಾಯಸಮ್ಮತವಾಗಿ; ಶಾಸನವಿಹಿತವಾಗಿ.
  • ಕಾನೂನುರೀತ್ಯಾ – ನೇಮಿಸಲ್ಪಟ್ಟಂತೆ, ಗೊತ್ತು ಮಾಡಿದ ರೀತಿಯಲ್ಲಿ.
  • ಶಾಸನಬದ್ಧ ಅರ್ಹತೆಯುಳ್ಳಂತೆ.
  • ಕಾನೂನು ಪ್ರಕಾರವಾಗಿ; ಶಾಸನ ರೀತಿಯಲ್ಲಿ.
  • (ಮಗುವಿನ ವಿಷಯದಲ್ಲಿ) ಕಾನೂನುಸಮ್ಮತವಾಗಿ; ಧರ್ಮ ಸಂತಾನದ್ದಾಗಿ; ನ್ಯಾಯಬಾಹಿರವಲ್ಲದೆ.

  • lawfulness
    ನಾಮವಾಚಕ
  • ನ್ಯಾಯಸಮ್ಮತತೆ; ಕಾನೂನುರೀತ್ಯಾ ಅಂಗೀಕಾರವಾಗಿರುವಿಕೆ.
  • ಕಾನೂನುರೀತ್ಯಾ ನಿಯೋಜಿತವಾಗಿರುವಿಕೆ, ಗೊತ್ತಾಗಿರುವುದು, ನೇಮಕಗೊಂಡಿರುವಿಕೆ.
  • ಕಾನೂನಿಗೆ ಅನುಸಾರವಾಗಿ ಅರ್ಹತೆಯಿರುವಿಕೆ.
  • (ಮಗುವಿನ ವಿಷಯದಲ್ಲಿ) ಕಾನೂನುಬದ್ಧವಾಗಿರುವಿಕೆ; ಧರ್ಮಸಂತಾನದ್ದಾಗಿರುವಿಕೆ.


  • logo