logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elongation
ನಾಮವಾಚಕ
  • ಲಂಬನೆ; ದೀರ್ಘೀಕರಣ; ಉದ್ದವಾಗುವುದು; ಉದ್ದಮಾಡುವುದು.
  • ಉದ್ದವಾದುದು; ಲಂಬವಾದುದು; ನೀಳವಾದುದು.
  • (ಗಣಿತ) ದ್ಧಿ; (ಗೆರೆಯ) ಲಂಬಿಸಿದ ಭಾಗ.
  • (ಖಗೋಳ ವಿಜ್ಞಾನ) ವಿತಾನ; ಎರಡು ಆಕಾಶಕಾಯಗಳಲ್ಲಿ ಒಂದರ ಸುತ್ತ ಇನ್ನೊಂದು ಸುತ್ತುವಾಗ ಮೊದಲನೆಯದರಿಂದ ಎರಡನೆಯದರ ಕೋನೀಯ ದೂರ.
  • (ಯಂತ್ರಶಾಸ್ತ್ರ) ಲಂಬನೆ; ದ್ಧಿ; ವಿಸ್ತರಣ; ಒತ್ತಡದ ಫಲವಾಗಿ ಆಗುವ ವಿಸ್ತರಣದ ಪರಿಮಾಣ.

  • elope
    ಅಕರ್ಮಕ ಕ್ರಿಯಾಪದ
  • (ಹೆಂಗಸಿನ ವಿಷಯದಲ್ಲಿ, ಗಂಡನನ್ನು, ಮನೆಯನ್ನು ಬಿಟ್ಟು) ಇನ್ನೊಬ್ಬನ ಜೊತೆ ಓಡಿಹೋಗು; ಇನ್ನೊಬ್ಬನನ್ನು ಕಟ್ಟಿಕೊಂಡು ಹೋಗು; ಪ್ರೇಮಿಯೊಂದಿಗೆ ಓಡಿಹೋಗು.
  • ನಾಪತ್ತೆಯಾಗು; ತಲೆತಪ್ಪಿಸಿಕೊಂಡು ಹೋಗು; ಹೇಳದೆ ಕೇಳದೆ ಓಡಿಹೋಗು; ಕದ್ದೋಡು; ಪರಾರಿಯಾಗು; ಪಲಾಯನಮಾಡು: he eloped from his creditors ಅವನು ಸಾಲಗಾರರಿಂದ ತಲೆಮರೆಸಿಕೊಂಡು ಓಡಿಹೋದ.
  • (ಹುಡುಗ ಹುಡುಗಿಯರ ವಿಷಯದಲ್ಲಿ, ಸಾಮಾನ್ಯವಾಗಿ ತಂದೆ ತಾಯಿಯರ ಸಮ್ಮತಿಯಿಲ್ಲದೆ) ಮದುವೆಯಾಗಲು ಓಡಿಹೋಗು; ವಿವಾಹವಾಗಲು ಕದ್ದೋಡು.

  • elopement
    ನಾಮವಾಚಕ
  • (ಮುಖ್ಯವಾಗಿ ಪ್ರೇಮಿಯೊಡನೆ ಯಾ ಮದುವೆಯಾಗಲು) ಪಲಾಯನ; ಪರಾರಿ; ಓಟ.
  • ನಾಪತ್ತೆ; ತಲೆ ಮರೆಸಿಕೊಳ್ಳುವುದು.

  • eloquence
    ನಾಮವಾಚಕ
  • ವಾಗ್ಝರಿ; ವಾಗ್ವೈಖರಿ; ವಾಕ್ಸಂಪತ್ತು; ವಾಕ್ಪ್ರವಾಹ; ವಾಗ್ಧೋರಣೆ; ವಾಗ್ಮಿತೆ; ಮಾತುಗಾರಿಕೆ; ಭಾಷೆಯನ್ನು ನಿರರ್ಗಳವಾಗಿ, ಶಕ್ತಿಯುತವಾಗಿ, ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುವುದು.
  • ಆಲಂಕಾರಿಕ ಭಾಷೆ; ವಾಗಾಡಂಬರ; ಆಡಂಬರದ ಮಾತು.

  • eloquent
    ಗುಣವಾಚಕ
  • (ಭಾಷೆಯ ವಿಷಯದಲ್ಲಿ) ವಾಗ್ಝರಿಯ; ವಾಕ್ಪ್ರವಾಹದಿಂದ ಕೂಡಿದ; ನಿರರ್ಗಳವಾದ, ಶಕ್ತವಾದ, ಸಂದರ್ಭೋಚಿತ ಮಾತುಗಾರಿಕೆಯಿಂದ ಕೂಡಿದ.
  • ಸ್ಪಷ್ಟವಾಗಿ ಸೂಚಿಸುವ; ಸ್ಫುಟವಾಗಿ ವ್ಯಕ್ತಗೊಳಿಸುವ: looks eloquent of admiration ಮೆಚ್ಚಿಗೆಯನ್ನು ಸ್ಪಷ್ಟವಾಗಿ ಸೂಚಿಸುವ ನೋಟ.

  • eloquently
    ಕ್ರಿಯಾವಿಶೇಷಣ
    ವಾಕ್ಚಾತುರ್ಯದಿಂದ; ವಾಗ್ಝರಿಯಿಂದ; ನಿರರ್ಗಳವಾದ ಮಾತುಗಾರಿಕೆಯಿಂದ.

    Elsan
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಎಲ್ಸ್ಯಾನ್‍; ದುರ್ವಾಸನೆ ಮೊದಲಾದವನ್ನು ಹೋಗಿಸಲು ರಾಸಾಯನಿಕಗಳನ್ನು ಬಳಸುವ ಶೌಚಹ.

    else
    ಕ್ರಿಯಾವಿಶೇಷಣ ಪದಗುಚ್ಛ
    (ಅನಿರ್ದಿಷ್ಟ ಸರ್ವನಾಮ ಮತ್ತು ಪ್ರಶ್ನಾರ್ಥಕ ಸರ್ವನಾಮಗಳ ಮುಂದೆ). or else (ಆಡುಮಾತು) (ಎಚ್ಚರಿಕೆ ಕೊಡಲು ಯಾ ಹೆದರಿಸಲು ಬಳಸುವ) ಇಲ್ಲದಿದ್ದರೆ (ನೋಡಿಕೊ): hand over the money or else ಹಣ ಕೊಡು, ಇಲ್ಲದಿದ್ದರೆ (ನೋಡಿಕೊ).
  • ಮತ್ತೆ; ಮತ್ತು; ಜೊತೆಗೆ; ಅಲ್ಲದೆ; ಇನ್ನೂ: anything, anybody, anyone, else? ಮತ್ತೆ (ಏನಾದರೂ) ಯಾರಾದರೂ (ಉಂಟೇ?) who else? who else’s? whose else? ಮತ್ತೆ ಯಾರು? ಯಾರದು? ಯಾರ?
  • ಬದಲು ಬೇರೆ; ಪ್ರತಿ; ಭಿನ್ನ; ಬಿಟ್ಟು: what else could I say? ನಾನು (ಅದರ ಬದಲು) ಏನು ತಾನೇ ಹೇಳಬಹುದಾಗಿತ್ತು?
  • ಇಲ್ಲವಾದರೆ; ಅಲ್ಲದಿದ್ದರೆ; ಇಲ್ಲದಿದ್ದರೆ; ತಪ್ಪಿದರೆ: run, (or) else you will be late ಓಡು, ಇಲ್ಲದಿದ್ದರೆ ತಡವಾಗುತ್ತದೆ.

  • elsewhere
    ಕ್ರಿಯಾವಿಶೇಷಣ
    ಮತ್ತೊಂದು ಸ್ಥಳದಲ್ಲಿ; ಬೇರೊಂದು ಸ್ಥಳಕ್ಕೆ; ಬೇರೆಡೆ(ಗೆ) ಬೇರೆಕಡೆ(ಗೆ); ಅನ್ಯತ್ರ.

    eluant
    ನಾಮವಾಚಕ
    = eluent.


    logo