logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

capital goods
ನಾಮವಾಚಕ
ಮೂಲವಸ್ತುಗಳು; ತಯಾರಿಕೆ ವಸ್ತುಗಳು; ಪದಾರ್ಥಗಳನ್ನು ತಯಾರಿಸಲು ಬಳಸುವ ಯಂತ್ರ, ಸಲಕರಣೆ ಮೊದಲಾದವು.

capital investment
ನಾಮವಾಚಕ
ಒಟ್ಟು ಬಂಡವಾಳ; ವ್ಯಾಪಾರೋದ್ಯಮದಲ್ಲಿ ತೊಡಗಿಸಿದ ಬಂಡವಾಳದ ಒಟ್ಟು ಮೊತ್ತ.

capital levy
ನಾಮವಾಚಕ
ಬಂಡವಾಳ ತೆರಿಗೆ; ಮೂಲಧನ ತೆರಿಗೆ; ಆದಾಯತೆರಿಗೆ ಮೊದಲಾದವುಗಳ ಜತೆಗೆ ಖಾಸಗಿ ಯಾ ಕೈಗಾರಿಕಾ ಬಂಡವಾಳವನ್ನು ಆಧರಿಸಿ ಹಾಕುವ ತೆರಿಗೆ, ಕರ.

capital loss
ನಾಮವಾಚಕ
ಮೂಲಧನ ನಷ್ಟ; ಬಂಡವಾಳ ನಷ್ಟ; ಷೇರುಗಳು, ಭೂಮಿ, ಮೊದಲಾದ ಆಸ್ತಿಯನ್ನು ಮಾರಿದ್ದರಿಂದ ಒದಗಿದ ನಷ್ಟ.

capital ship
ನಾಮವಾಚಕ
ಭಾರಿ ಹಡಗು; ಫಿರಂಗಿ, ವಿಮಾನ ಮೊದಲಾದವನ್ನು ಕೊಂಡೊಯ್ಯುವ ದೊಡ್ಡ ಯುದ್ಧ ನೌಕೆ.

capital stock
ನಾಮವಾಚಕ
  • ವಾಣಿಜ್ಯಸಂಸ್ಥೆಯೊಂದರ ಒಟ್ಟು ಸ್ಟಾಕುಗಳು ಯಾ ನಿಧಿಪತ್ರಗಳು.
  • ಮೂಲಪತ್ರಧನ; ವಾಣಿಜ್ಯಸಂಸ್ಥೆಯೊಂದರ ಒಟ್ಟು ಸ್ಟಾಕು ಮತ್ತು ಷೇರು ಪತ್ರಗಳ–ಅಸಲು ಬೆಲೆ, ಪುಸ್ತಕ ಮೂಲ್ಯ.

  • capital sum
    ನಾಮವಾಚಕ
    ಒಟ್ಟುಹಣ; ಮುಖ್ಯವಾಗಿ ಅಪಘಾತವಾಗಿ ಸತ್ತರೆ ಯಾ ಕಣ್ಣು, ಕೈ ಮೊದಲಾದ ಮುಖ್ಯ ಅಂಗಗಳು ಊನವಾದರೆ, ಜೀವವಿಮೆ ಹೊಂದಿರುವ ವ್ಯಕ್ತಿಯು ಪಡೆಯಬಹುದಾದ ಮೊತ್ತ.

    capital territory
    ನಾಮವಾಚಕ
    ರಾಜಧಾನಿ ಪ್ರದೇಶ; ರಾಜಧಾನಿ ಪ್ರಾಂತ್ಯ; ಒಂದು ದೇಶದ ರಾಜಧಾನಿಯನ್ನೊಳಗೊಂಡಿರುವ ಪ್ರದೇಶ.

    capital transfer tax
    ನಾಮವಾಚಕ
    ಬಂಡವಾಳ ವರ್ಗಾವಣೆ ಕರ; ಮೂಲಧನವರ್ಗಾವಣೆ ತೆರಿಗೆ; ಬಂಡವಾಳವನ್ನು ಕೊಡುಗೆ, ಉಯಿಲು ಮೊದಲಾದವುಗಳಾಗಿ ವರ್ಗಾಯಿಸಿದಾಗ ಹಾಕುವ ತೆರಿಗೆ.

    capitalise
    ಕ್ರಿಯಾಪದ
    = capitalize.


    logo