logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barnacled
ಗುಣವಾಚಕ
  • ಮೊಳಿ ಅಂಟಿದ; ಕಲ್ಲಾಯಿಗಳು ಹತ್ತಿಕೊಂಡಿರುವ.
  • (ಕುದುರೆಯ ವಿಷಯದಲ್ಲಿ) ಮೂಗಿಕ್ಕುಳ ಹಾಕಿದ.
  • (ಆಡುಮಾತು) ಕನ್ನಡಕ – ಹಾಕಿದ, ಹಾಕಿಕೊಂಡ.

  • barney
    ನಾಮವಾಚಕ
  • (ಆಡುಮಾತು) ಮೋಸ; ವಂಚನೆ.
  • (ಆಡುಮಾತು) ಕೂಗಾಟದ ಜಗಳ ಯಾ ಮಾರಾಮಾರಿ.
  • ಮುಷ್ಟಿಕಾಳಗ.

  • barnstorm
    ಅಕರ್ಮಕ ಕ್ರಿಯಾಪದ
  • (ಕಣಜದ ಅಂಗಳ, ಕೊಟ್ಟಿಗೆ ಯಾ ಹಂಗಾಮಿ ರಂಗಮಂಟಪಗಳಲ್ಲಿ ನಾಟಕ ಪ್ರದರ್ಶನ ನೀಡುತ್ತ) ಹಳ್ಳಿ ಸುತ್ತು; ಹಳ್ಳಿಹಳ್ಳಿ ಸಂಚರಿಸು: ಹಳ್ಳಿಗಾಡಿನಲ್ಲಿ ಪ್ರವಾಸ ಮಾಡು.
  • (ಅಮೆರಿಕನ್‍ ಪ್ರಯೋಗ) (ಚುನಾವಣೆ, ರಾಜಕೀಯ ಪ್ರಚಾರ ಮೊದಲಾದ ಭಾಷಣಗಳನ್ನು ಮಾಡುತ್ತ, ಪ್ರದರ್ಶನ ಪಂದ್ಯಗಳನ್ನು ಆಡುತ್ತ) ಹಳ್ಳಿ ಸುತ್ತು; ಊರೂರು ಸುತ್ತು; ಗ್ರಾಮಾಂತರ ಪ್ರವಾಸ ಮಾಡು.
  • (ಅಮೆರಿಕನ್‍ ಪ್ರಯೋಗ) (ವಿಮಾನ ಚಾಲಕನ ವಿಷಯದಲ್ಲಿ)
    1. ಪ್ರೇಕ್ಷಣೀಯ ಗ್ರಾಮಾಂತರ ಪ್ರದೇಶಗಳಿಗೆ ಪ್ರವಾಸಿಗಳನ್ನು ಕೊಂಡೊಯ್ಯು.
    2. (ಹಳ್ಳಿಗಳಲ್ಲಿ) ಹಾರಾಟದ ಚಮತ್ಕಾರಗಳನ್ನು ಪ್ರದರ್ಶಿಸು; ಚಮತ್ಕಾರವಾದ ಹಾರಾಟಗಳನ್ನು ತೋರಿಸು.

  • barnstormer
    ನಾಮವಾಚಕ
  • (ಮುಖ್ಯವಾಗಿ ಆರ್ಭಟದ, ಅಟಾಟೋಪದ) ಸಂಚಾರಿ, ಪ್ರವಾಸಿ – ನಟ.
  • (ಅಮೆರಿಕನ್‍ ಪ್ರಯೋಗ) ಸಂಚಾರಿ ರಾಜಕಾರಣಿ.
  • (ಅಮೆರಿಕನ್‍ ಪ್ರಯೋಗ) ವಿಮಾನದಲ್ಲಿ ಪ್ರವಾಸಿಗಳನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕೊಂಡೊಯ್ಯುವ ವೈಮಾನಿಕ.
  • ವಿಮಾನ ಚಮತ್ಕಾರಗಳನ್ನು ಪ್ರದರ್ಶಿಸುವ ವೈಮಾನಿಕ.

  • barnyard
    ನಾಮವಾಚಕ
    ಹಟ್ಟಿ; ಆರಂಬಗಾರನ ಅಂಗಳ.

    barnyard
    ಗುಣವಾಚಕ
  • ಹಟ್ಟಿಯ; ಹಟ್ಟಿಯಂದದ.
  • (ಗ್ರಾಮ್ಯಪ್ರಯೋಗ) ಹಳ್ಳಿಗಾಡಿನ ತರಹದ; ನಯನಾಜೂಕಿಲ್ಲದ; ಒರಟಾದ.
  • ಅಶ್ಲೀಲ; ಹಲ್ಕ ಶಬ್ದಗಳನ್ನೊಳಗೊಂಡ; barnyard humour ಅಶ್ಲೀಲ ಹಾಸ್ಯ.

  • barograph
    ನಾಮವಾಚಕ
    (ಪವನಶಾಸ್ತ್ರ) ವಾಯುಭಾರಲೇಖಿ; ವಾಯುಭಾರಲೇಖಕ; ಬ್ಯಾರಗ್ರಾಹ್‍; ಸ್ವತಃ ವಾಯು ಒತ್ತಡವನ್ನು ದಾಖಲೆ ಮಾಡುವ ವಾಯುಭಾರಮಾಪಕ.

    barology
    ನಾಮವಾಚಕ
    ವಾಯುಭಾರಶಾಸ್ತ್ರ.

    barometer
    ನಾಮವಾಚಕ
  • ಬರಾಮಿಟರ್‍; ವಾಯುಭಾರಮಾಪಕ; (ಹವಾಮಾನವನ್ನು ಮುನ್‍ಸೂಚಿಸಲು ಮತ್ತು ಒಂದು ಸ್ಥಳವು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂಬುದನ್ನು ಕಂಡು ಹಿಡಿಯಲು ಬೇಕಾದ) ವಾಯುವಿನ ಒತ್ತಡವನ್ನು ಅಳೆಯುವ ಉಪಕರಣ. Figure: barometer
  • ವಾತಾವರಣ ಸೂಚಕ.
  • (ರೂಪಕವಾಗಿ) (ಯಾವುದೇ ವ್ಯತ್ಯಾಸದ ಯಾ ಬದಲಾವಣೆಯ) ಸೂಚಕ: barometer of opinion ಸಾರ್ವಜನಿಕಾಭಿಪ್ರಾಯ ಸೂಚಕ.

  • barometric
    ಗುಣವಾಚಕ
    (ಪವನಶಾಸ್ತ್ರ)
  • ವಾಯುಭಾರಮಾಪಕದ; ವಾಯುಭಾರಮಾಪಕಕ್ಕೆ ಸಂಬಂಧಿಸಿದ.
  • ವಾಯುಭಾರಮಾಪಕದಿಂದ ಸೂಚಿತವಾದ, ಮಾಡಿದ.


  • logo