logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

omnipotently
ಕ್ರಿಯಾವಿಶೇಷಣ
ಪೂರ್ಣ, ನಿರಂಕುಶ–ಅಧಿಕಾರವುಳ್ಳಂತೆ.

omnipresence
ನಾಮವಾಚಕ
  • ಸರ್ವತ್ರಾಸ್ತಿತ್ವ; ಸರ್ವವ್ಯಾಪಿತ್ವ; ಒಂದೇ ಕಾಲದಲ್ಲಿ ಎಲ್ಲೆಡೆ ಇರುವುದು.
  • ಸವತ್ರಗೋಚರತ್ವ; ಎಲ್ಲೆಡೆ ಕಾಣಿಸುತ್ತಿರುವುದು.

  • omnipresent
    ಗುಣವಾಚಕ
  • ಸರ್ವವ್ಯಾಪಿಯಾದ; ಎಲ್ಲೆಲ್ಲೂ ಇರುವ.
  • ಎಲ್ಲೆಡೆ ಕಾಣಿಸುತ್ತಿರುವ; ಸರ್ವತ್ರ ಗೋಚರ.

  • omniscience
    ನಾಮವಾಚಕ
  • ಸರ್ವಜ್ಞತೆ; ಎಲ್ಲವನ್ನೂ ತಿಳಿದಿರುವಿಕೆ.
  • ಬಹುಜ್ಞತೆ; ಬಹಳ ತಿಳಿದುಕೊಂಡಿರುವಿಕೆ.

  • omniscient
    ಗುಣವಾಚಕ ಪದಗುಚ್ಛ
    the Omniscient ದೇವರು; ಭಗವಂತ.
  • ಎಲ್ಲವನ್ನೂ ಬಲ್ಲ; ಸರ್ವಜ್ಞ(ನಾದ).
  • ಬಹುಜ್ಞ(ನಾದ); ಬಹಳ ತಿಳಿದುಕೊಂಡಿರುವ.

  • omnisciently
    ಕ್ರಿಯಾವಿಶೇಷಣ
    ಸರ್ವಜ್ಞನಾಗಿ; ಎಲ್ಲವನ್ನೂ ತಿಳಿದು, ತಿಳಿದಂತೆ.

    omnium gatherum
    ನಾಮವಾಚಕ
    (ಆಡುಮಾತು) ಕಲಬೆರಕೆ; ಸಂಕರ; ವಿಚಿತ್ರ ಮಿಶ್ರಣ.

    omnivore
    ನಾಮವಾಚಕ
    ಸರ್ವಾಹಾರಿ; ಸರ್ವಭಕ್ಷಿ; ಸಸ್ಯ ಮತ್ತು ಮಾಂಸ ಎರಡನ್ನೂ ತಿನ್ನುವ ವ್ಯಕ್ತಿ ಯಾ ಪ್ರಾಣಿ.

    omnivorous
    ಗುಣವಾಚಕ
  • ಸರ್ವಭಕ್ಷಕ; ಎಲ್ಲವನ್ನೂ (ಎಂದರೆ ಮುಖ್ಯವಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ) ತಿನ್ನುವ.
  • ಸಿಕ್ಕಿದ್ದನ್ನೆಲ್ಲ ಬಳಸಿಕೊಳ್ಳುವ; ಲಭ್ಯವಾದದ್ದನ್ನೆಲ್ಲ ಉಪಯೋಗಿಸಿಕೊಳ್ಳುವ.
  • (ರೂಪಕವಾಗಿ) (ಓದುವುದರ ವಿಷಯದಲ್ಲಿ) ಸರ್ವವಾಚಕ; ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುವ.

  • omnivorously
    ಕ್ರಿಯಾವಿಶೇಷಣ
  • ಸರ್ವಭಕ್ಷಕನಾಗಿ; ಎಲ್ಲವನ್ನೂ ತಿನ್ನುತ್ತ.
  • ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುತ್ತ ಯಾ ಓದುವ ಅಭ್ಯಾಸದಿಂದ.


  • logo