(ಬ್ರಿಟಿಷ್ ಪ್ರಯೋಗ) ಕಾನೂನುಕೇಂದ್ರ; ನ್ಯಾಯಕೇಂದ್ರ; ಕಾನೂನು ವಿಷಯಗಳಲ್ಲಿ ಸಲಹೆ ನೀಡುವ, ಸರ್ಕಾರದ ಧನಸಹಾಯದಿಂದ ನಡೆಯುವ, ಸ್ವತಂತ್ರವಾದ ಸಂಸ್ಥೆ.
law French
ನಾಮವಾಚಕ
(ನ್ಯಾಯಶಾಸ್ತ್ರ) ಕಾಯಿದೆ ಹ್ರೆಂಚು; ಇಂಗ್ಲಿಷ್ ಕಾನೂನಿನಲ್ಲಿ ಹಾಗೂ ಕಾನೂನು ಪುಸ್ತಕಗಳಲ್ಲಿ ಬಳಸುವ ಆಂಗ್ಲೋ – ನಾರ್ಮನ್ ಭಾಷೆಯ ಪದಗಳು.
law Latin
ನಾಮವಾಚಕ
ಕಾಯಿದೆ ಲ್ಯಾಟಿನ್ನು; ಮೊದಮೊದಲಿನ ಇಂಗ್ಲಿಷ್ ನ್ಯಾಯನಿಬಂಧನೆಗಳು ಇರುತ್ತಿದ್ದ ಅಸಂಸ್ಕೃತ ಲ್ಯಾಟಿನ್ ಭಾಷೆ.
Law Lord
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಲಾ ಲಾರ್ಡ್:
ಅಪೀಲು ಮಂಡಲಿಯ ಸದಸ್ಯ; ಲಾರ್ಡ್ ಆಹ್ ಅಪೀಲ್ ಇನ್ ಆರ್ಡಿನರಿ ಎಂಬ ಪಾರ್ಲಿಮಂಟಿನ ಲಾರ್ಡ್ಸ್ ಸಭೆಯ ಅಪೀಲು ವಿಚಾರಣಾ ಮಂಡಲಿಯ ಸದಸ್ಯ.
ಪಾರ್ಲಿಮಂಟಿನ ಲಾರ್ಡ್ಸ್ ಸಭೆಯ ನ್ಯಾಯವ್ಯವಹಾರವನ್ನು ನಡೆಸಲು ಅಧಿಕಾರ ಹೊಂದಿರುವ ಸದಸ್ಯ.
law merchant
ನಾಮವಾಚಕ
ವಾಣಿಜ್ಯ – ನ್ಯಾಯಶಾಸ್ತ್ರ, ಕಾನೂನು, ಕಾಯಿದೆ; ವ್ಯಾಪಾರ ವಾಣಿಜ್ಯಗಳನ್ನು ನಿಯಂತ್ರಿಸುವ ಕಾಯಿದೆಗಳು, ನ್ಯಾಯ ನಿಬಂಧನೆಗಳು.
Law of Nature
ನಾಮವಾಚಕ
= natural law.
law officer
ನಾಮವಾಚಕ
ಕಾನೂನು ಅಧಿಕಾರಿ; ನ್ಯಾಯಾಧಿಕಾರಿ; ಕಾನೂನಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಆಡಳಿತ ನಡೆಸುವ ಯಾ ಸಲಹೆ ಕೊಡುವ ಅಧಿಕಾರಿ (ಮುಖ್ಯವಾಗಿ ಅಟಾರ್ನಿ ಜೆನರಲ್, ಸಾಲಿಸಿಟರ್ ಯಾ ಲಾರ್ಡ್ ಅಡ್ವೊಕೇಟ್).
law term
ನಾಮವಾಚಕ
ನ್ಯಾಯಶಾಸ್ತ್ರದ ಪರಿಭಾಷೆ; ಕಾನೂನಿನಲ್ಲಿ ಬಳಸುವ ಪದ ಯಾ ಮಾತು.
(ವರ್ಷದಲ್ಲಿ) ನ್ಯಾಯಾಲಯಗಳ – ಕಾರ್ಯಾವಧಿ, ವಿಚಾರಣೆ ಕಾಲ; ನ್ಯಾಯಾಲಯಗಳು ಕೆಲಸ ಮಾಡುವ ವರ್ಷದ ಭಾಗ; ವಿಚಾರಣೆ ನಡೆಸಲು ಯಾ ವಿಚಾರಣೆಗೆ ಕುಳಿತುಕೊಳ್ಳಲು ಗೊತ್ತುಪಡಿಸಿದ ಕಾಲಾವಧಿ.
law-abiding
ಗುಣವಾಚಕ
ನ್ಯಾಯಬದ್ಧ; ನ್ಯಾಯಕ್ಕೆ ತಲೆಬಾಗುವ; ಕಾಯಿದೆಗೆ ವಿಧೇಯನಾದ; ಕಾನೂನು ಪಾಲಿಸುವ.