logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impulsive
ಗುಣವಾಚಕ
  • ಥಟ್ಟನೆ – ತಳ್ಳುವ, ಚಿಮ್ಮುವ, ನೂಕುವ.
  • (ಮನುಷ್ಯರು, ಅವರ ನಡವಳಿಕೆ, ಮೊದಲಾದವುಗಳ ವಿಷಯದಲ್ಲಿ) ಆವೇಗಯುಕ್ತ; ದುಡುಂ ಪ್ರವೇಶದ; ಹಠಾತ್‍ ಪ್ರವೃತ್ತಿಯ; ಹಿಂದುಮುಂದು ನೋಡದೆ ನುಗ್ಗುವ.
  • (ಭೌತವಿಜ್ಞಾನ) ನೂಕುಬಲವಾಗಿ ವರ್ತಿಸುವ.

  • impulsively
    ಕ್ರಿಯಾವಿಶೇಷಣ
  • ಥಟ್ಟನೆ – ತಳ್ಳಿ, ಚಿಮ್ಮಿ, ನೂಕಿ.
  • ಆವೇಗದಿಂದ; ಹಿಂದು ಮುಂದು ನೋಡದೆ; ಹಠಾತ್ತಾಗಿ.

  • impulsiveness
    ನಾಮವಾಚಕ
    ಆವೇಗಯುಕ್ತ ಹಠಾತ್‍ ಪ್ರವೃತ್ತಿ; ಹಿಂದುಮುಂದು ನೋಡದೆ ವರ್ತಿಸುವಿಕೆ.

    impunity
    ನಾಮವಾಚಕ
  • ನಿರ್ಭೀತಿ; ನಿರ್ಭಯ; ಯಾವುದೇ ಕಾರ್ಯದಿಂದ ಒದಗುವ ದುಷ್ಪರಿಣಾಮದ ಭಯವಿಲ್ಲದಿರುವುದು.
  • ದಂಡನೆ ವಿನಾಯಿತಿ; ಶಿಕ್ಷಾಭಯ; ದಂಡಾಭಯ; ದಂಡನೆಯಿಂದ – ವಿನಾಯಿತಿ, ಅಭಯ, ರಕ್ಷೆ: the approver was granted impunity ಸರ್ಕಾರಿ ಸಾಕ್ಷಿಗೆ ದಂಡಾಭಯ ನೀಡಲಾಯಿತು.

  • impure
    ಗುಣವಾಚಕ
  • ಕೊಳೆಯಾದ; ಕಶ್ಮಲ; ಮಲಿನ; ಕೊಳಕಾದ.
  • ಮೈಲಿಗೆಯ; ಅಪವಿತ್ರ.
  • ಕಲುಷಿತ; ಕಳಂಕಿತ; ದೋಷಯುಕ್ತ.
  • ನೀತಿಗೆಟ್ಟ; ಅನೈತಿಕ; ವ್ಯಭಿಚಾರಿಯಾದ.
  • ಅಶುದ್ಧ; ಮಿಶ್ರವಾದ; (ಇತರ ಪದಾರ್ಥಗಳೊಂದಿಗೆ) ಬೆರಕೆಯಾದ (ರೂಪಕವಾಗಿ ಸಹ).
  • (ಬಣ್ಣದ ವಿಷಯದಲ್ಲಿ) ಅಪ್ಪಟವಲ್ಲದ; ಮಿಶ್ರಿತ; ಮತ್ತೊಂದು ಬಣ್ಣದೊಂದಿಗೆ ಬೆರೆತಿರುವ.

  • impurely
    ಕ್ರಿಯಾವಿಶೇಷಣ
  • ಅಶುದ್ಧವಾಗಿ.
  • ತಪ್ಪಾಗಿ: the translators of the Bible use the word impurely ಬೈಬಲ್‍ ಭಾಷಾಂತರಕಾರರು ಆ ಶಬ್ದವನ್ನು ತಪ್ಪಾಗಿ ಬಳಸುತ್ತಾರೆ.

  • impurity
    ನಾಮವಾಚಕ
  • ಕೊಳೆ; ಕೊಳಕು; ಕಶ್ಮಲ; ಮಾಲಿನ್ಯ; ಮಲಿನತೆ.
  • ಮೈಲಿಗೆ; ಅಪವಿತ್ರತೆ.
  • ಕಳಂಕ; ದೋಷ.
  • ನೀತಿಗೇಡಿತನ; ವ್ಯಭಿಚಾರಿತನ.
  • (ಪದಾರ್ಥಗಳ ಮಿಶ್ರಣದ ವಿಷಯದಲ್ಲಿ) ಅಶುದ್ಧತೆ; ಬೆರಕೆ.
  • (ಬಹುವಚನದಲ್ಲಿ) ಕಲ್ಮಶಗಳು; ಅಶುದ್ಧಗೊಳಿಸುವ ಪದಾರ್ಥಗಳು.

  • imputability
    ನಾಮವಾಚಕ
    ಆರೋಪಣೀಯತೆ; ಆಪಾದನೀಯತೆ.

    imputable
    ಗುಣವಾಚಕ
    ಆರೋಪಣೀಯ; ಆಪಾದನೀಯ.

    imputation
    ನಾಮವಾಚಕ
    ಆರೋಪಣೆ; ಆಪಾದನೆ ಹೊರಿಸಿಕೆ, ಹೊರಿಸುವುದು.


    logo