logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

capillary repulsion
ನಾಮವಾಚಕ
ಲೋಮನಾಳ ವಿಕರ್ಷಣ; ಲೋಮನಾಳಕ್ರಿಯೆಯ ಪರಿಣಾಮವಾಗಿ ಕಾಣಿಸಿಕೊಳ್ಳುವ ವಿಕರ್ಷಣ.

capital
ನಾಮವಾಚಕ
ಬೋದಿಗೆ; ಕಂಬದ ತಲೆ; ಸ್ತಂಭಾಗ್ರ; ಸ್ತಂಭದ ಮೇಲ್ಭಾಗ ಯಾ ಕಪೋತ.

capital
ಗುಣವಾಚಕ ಪದಗುಚ್ಛ ನುಡಿಗಟ್ಟು
make capital out of ಲಾಭದಾಯಕವಾಗುವಂತೆ ಮಾಡಿಕೊ; ಸ್ವಾನುಕೂಲಕ್ಕೆ ತಿರುಗಿಸಿಕೊ.
  • ತಲೆ ತೆಗೆಯುವ; ಶಿರಚ್ಛೇದದ; ಪ್ರಾಣ ಕಳೆಯುವ; ಮರಣವನ್ನು, ಸಾವನ್ನು–ಒಳಗೊಂಡಿರುವ: capital punishment ಪ್ರಾಣ ಕಳೆಯುವ ಶಿಕ್ಷೆ; ಮರಣದಂಡನೆ.
  • ವಧಾರ್ಹವಾದ; ಮರಣದಂಡನೆಗೆ ಯೋಗ್ಯವಾದ: capital offence ವಧಾರ್ಹವಾದ ಅಪರಾಧ.
  • ತಲೆಹೋಗುವ; ಹಾನಿಕರ; ಮಾರಕ; ವಿನಾಶಕರ: capital error ತಲೆ ಹೋಗುವ ತಪ್ಪು.
  • ಗುರುತರವಾದ; ಗಂಭೀರವಾದ; ಬಹಳ ದೊಡ್ಡ.
  • ಮೊದಲಿನ; ಆದಿಯ; ಪ್ರಥಮ; ಪ್ರಾರಂಭದ.
  • (ನಗರ, ಪಟ್ಟಣ, ಸಾಧನ ಮೊದಲಾದವುಗಳ ವಿಷಯದಲ್ಲಿ) ಪ್ರಧಾನ; ಪ್ರಮುಖ; ಅಗ್ರಗಣ್ಯ; ಮುಖ್ಯ: capital city ಮುಖ್ಯ ಪಟ್ಟಣ; ರಾಜಧಾನಿ.
  • ಮುಖ್ಯ; ಪ್ರಮುಖ; ಪ್ರಧಾನ; ಮೊದಲ ದರ್ಜೆಯ: capital advantage ಮುಖ್ಯ ಉಪಯೋಗ. capital operation ಪ್ರಧಾನ ಕಾರ್ಯ.
  • (ಆಡುಮಾತು) ಭರ್ಜರಿ; ಅತ್ಯುತ್ತಮ; ಉತ್ಕೃಷ್ಟ; ಶ್ರೇಷ್ಠ: a capital hotel ಅತ್ಯುತ್ತಮ ಹೋಟೆಲು. a capital fellow ಭರ್ಜರಿ ಆಸಾಮಿ.
  • ಅಸಲಿನ; ಮೂಲದ; ಬಂಡವಾಳವಾಗುವ: capital fund ಅಸಲುಹಣ; ಮೂಲಧನ; ಬಂಡವಾಳ.
  • (ಅಕ್ಷರದ ವಿಷಯದಲ್ಲಿ) ದೊಡ್ಡ; ವಾಕ್ಯ, ಹೆಸರು ಮೊದಲಾದವನ್ನು ಪ್ರಾರಂಭಿಸಲು ಬಳಸುವ ಆಕಾರ ಮತ್ತು ಗಾತ್ರ ಹೊಂದಿರುವ: capital A ದೊಡ್ಡ A.

  • capital
    ನಾಮವಾಚಕ
  • (A, B, ಮೊದಲಾದ) ದೊಡ್ಡಕ್ಷರ.
  • (ಒಂದು ದೇಶದ) ಮುಖ್ಯಪಟ್ಟಣ; ರಾಜಧಾನಿ; ಅಧಿಕೃತವಾಗಿ ಸರಕಾರ ಇರುವ ನಗರ.
  • ಅಸಲು; ಬಂಡವಾಳ; ಮೂಲಧನ; ನೀವಿ; ಮುದ್ದಲ್‍; ಪೂಂಜೆ; ಒಂದು ಕಂಪನಿ ಯಾ ವ್ಯಕ್ತಿ ವ್ಯಾಪಾರ ಪ್ರಾರಂಭಿಸುವಾಗ ಹಾಕುವ ಹಣ, ಸರಕು ಮೊದಲಾದವು.
  • (ಮುಖ್ಯವಾಗಿ ಮುಂದಿನ ಉತ್ಪನ್ನಕ್ಕೆ ಬಳಸುವ) ಸಂಚಯಧನ.
  • ಹಣಗಾರರು; ಬಂಡವಾಳಗಾರರು: capital and labour ಬಂಡವಾಳಗಾರರೂ ಕಾರ್ಮಿಕರೂ.

  • capital
    ಭಾವಸೂಚಕ ಅವ್ಯಯ
    ಭೇಷ್‍! ಭಲೆ! ಭರ್ಜರಿ!

    capital account
    ನಾಮವಾಚಕ
  • ಮೂಲಧನ ಖಾತೆ; ಬಂಡವಾಳ ಖಾತೆ; ವ್ಯಾಪಾರಸಂಸ್ಥೆಯ ಆಸ್ತಿಯಲ್ಲಿ ಯಜಮಾನನ ಯಾ ಷೇರುದಾರರ ಪಾಲನ್ನು ತೋರಿಸುವ ಲೆಕ್ಕದ ಖಾತೆ.
  • (ಬಹುವಚನದಲ್ಲಿ) (ಲೆಕ್ಕಶಾಸ್ತ್ರ) ನಿವ್ವಳಧನ ಖಾತೆ; ವ್ಯಾಪಾರೋದ್ಯಮದ ಆಸ್ತಿಯಲ್ಲಿ ವೆಚ್ಚ, ಹೊಣೆಗಳನ್ನು ಕಳೆದು ಉಳಿಯುವ ನಿವ್ವಳ ಬೆಲೆಯನ್ನು ತೋರಿಸುವ ಲೆಕ್ಕ, ಖಾತೆ.

  • capital asset
    ನಾಮವಾಚಕ
    ಸ್ಥಿರಾಸ್ತಿ; ಜಮೀನು, ಕಟ್ಟಡ ಮೊದಲಾದ ಆಸ್ತಿ.

    capital expenditure
    ನಾಮವಾಚಕ
    ಮೂಲಧನವ್ಯಯ; ಹೊಸ ಕಟ್ಟಡ, ಭೂಮಿ ಮೊದಲಾದವನ್ನು ಕೊಳ್ಳುವುದರ ಮೂಲಕ ಸ್ಥಿರಾಸ್ತಿಯನ್ನು ಹೆಚ್ಚಿಸಲು ಮಾಡಿದ ಖರ್ಚು; ಬಂಡವಾಳವೆಚ್ಚ.

    capital fund
    ನಾಮವಾಚಕ
    ಅಸಲುಹಣ; ಮೂಲಧನ; ಬಂಡವಾಳ.

    capital gain
    ನಾಮವಾಚಕ
    ಮೂಲಧನ ಲಾಭ; ಬಾಂಡುಗಳು, ಭೂಮಿ, ಮೊದಲಾದ ಸ್ಥಿರಾಸ್ತಿಗಳನ್ನು ಮಾರಿದ್ದರಿಂದ ಬಂದ ಲಾಭ; ಬಂಡವಾಳ ಲಾಭ.


    logo